Advertisement
ಕಾಲನಿ ಮೂಲ ಸೌಕರ್ಯದಿಂದ ವಂಚಿತ ಗೊಂಡಿದ್ದು, ಶಾಸಕರ ನಿಧಿಯಿಂದ ಕಾಲನಿಯ ವಸತಿ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ 1 ಕೋಟಿ ರೂ. ಅನುದಾನ ಲಭಿಸಿ ವರ್ಷ ಸಂದರೂ ಕಾಮಗಾರಿ ಪರಿಪೂರ್ಣಗೊಂಡಿಲ್ಲ. ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮನೆ ನಿರ್ಮಾಣ ವಿಳಂಬವಾಗುತ್ತಿರುವುದು ಕಾಲನಿ ನಿವಾಸಿಗಳನ್ನು ಆತಂಕಕ್ಕೀಡು ಮಾಡುತ್ತಿದೆ.
ವಸತಿ ಸೌಲಭ್ಯಗಳ ಕೊರತೆ ಅಷ್ಟಾದರೆ ಇದೀಗ ಬರಗಾಲ. ನೀರಿನ ಸಮಸ್ಯೆ ಎಲ್ಲೆಮೀರಿದ್ದು ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ನಡೆಯುತ್ತಿದ್ದರೂ ಎಲ್ಲ ಮನೆ ಬಾಗಿಲನ್ನು ಮುಟ್ಟುವಲ್ಲಿ ವಿಫಲ ಗೊಂಡಿದೆ. ಪ್ರತಿ ವರ್ಷ ಪಂಚಾಯತ್‌ನಿಂದ ಕಾಲನಿಗೆ ಬರುವ ನೀರು ಪೂರೈಕೆ ಕೂಡ ಈ ಬಾರಿ ಸ್ಥಗಿತಗೊಂಡಿದ್ದು ಕೆಲವು ದಿನಗಳ ಹಿಂದೆ ಮೋದಿ ಪ್ರಧಾನಿ ಪ್ರಮಾಣ ವಚನ ದಿನ ಮಾತ್ರ ಮೋದಿ ಬ್ಯಾನರ್ ಮೂಲಕ ಒಂದು ದಿನ ಮಾತ್ರ ಸೀಮಿತವಾಗಿ ನೀರು ಪೂರೈಸಲಾಗಿತ್ತು. ಮುಂದು ವರಿದ ಈ ಕಾಲದಲ್ಲೂ ಪ್ಲಾಸ್ಟಿಕ್ ಟಾರ್ಪಲ್ ಹಾಸಿದ ಸಾರಣೆ ಮಾಡದ ಮಣ್ಣಿನಿಂದ ಕಲ್ಲುಕಟ್ಟಿದ ಮನೆಗಳನ್ನು ಕಾಣಬಹುದಾಗಿದೆ. ಸರಕಾರಿ ಬಾವಿ ಇದ್ದರೂ ಸಮರ್ಪಕವಾದ ನೀರಿನ ಬಳಕೆ ಮಾಡಲಾಗುತ್ತಿಲ್ಲ. 52 ಮನೆಗಳಿಗೆ ನೀರಿನ ಪೂರೈಕೆಗೆ ಆ ಬಾವಿ ನೀರು ಸಾಕಾಗುತ್ತಿಲ್ಲ. ಅಲ್ಲದೆ ಬಾವಿ ಉಪಯೋಗ ಶೂನ್ಯವಾಗಿದ್ದು ಇಂಗು ರಿಂಗುಗಳು ಶಿಥಿಲಗೊಂಡು ಬಿದ್ದಿವೆ.
ಅಭಿವೃದ್ಧಿ ನಿಧಿಯಿಂದ ನಿರ್ಮಿಸಿದ ಮಿನಿ ಮಾಸ್ಟ್ ಲೈಟ್ ಉರಿಯದೇ 2 ವರ್ಷಗಳಾದವು. ಎಂಡೋಸಲ್ಫಾ ನ್ ಪ್ಯಾಕೇಜ್‌ನಲ್ಲಿ ಕುಟುಂಬ ಕಲ್ಯಾಣ ಕೇಂದ್ರ ನಿರ್ಮಾಣಕ್ಕೆ ಕಟ್ಟಡ ನಿರ್ಮಿಸ ಲಾಗಿದ್ದು 6 ವರ್ಷಗಳಾದರೂ ಲೋಕಾ ರ್ಪಣೆಗೊಳ್ಳದೆ ಕಾಡು, ಪೊದೆಗಳು ಬೆಳೆದಿವೆ. ಸಾರಿಗೆ ಸೌಕರ್ಯವೂ ಇಲ್ಲ
ಈ ಊರಿಗೆ ಸರಿಯಾದ ಸಾರಿಗೆ ಸೌಲಭ್ಯ ಕೂಡ ಇಲ್ಲ. ಪೆರ್ಲದಿಂದ ಸುಮಾರು 3 ವರ್ಷಗಳ ಹಿಂದೆ ಕಜಂಪಾಡಿ ಸ್ಟೇಟ್ ಅಂತಲೇ ಹೆಸರಲ್ಲಿ ಕೇರಳ ಸರಕಾರ ಮಿನಿ ಸಾರಿಗೆ ಬಸ್‌ನ್ನು ವ್ಯವಸ್ಥೆ ಪಡಿಸಿದ್ದರೂ ಈಗ ಆ ಬಸ್ ಸೇವೆಯಿಂದ ನಿವೃತ್ತಿ ಹೊಂದಿದೆ. ಖಾಸಗಿ ಬಸ್ಸೊಂದು ಸೇವಾನಿರತವಾಗಿದ್ದು ಸಮರ್ಪಕವಾಗಿ ದಿನಾ ತಲುಪುವಲ್ಲಿ ಅದೂ ಕೂಡ ಕೈಕೊಡುತ್ತಿ ರುವುದಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Related Articles
Advertisement
ಹಾಳಾಗುತ್ತಿರುವ ನಿರ್ಮಾಣ ಸಾಮಗ್ರಿಗಳುಮನೆ ನಿರ್ಮಾಣ ಕಾರ್ಯಗಳಿಗಾಗಿ ತಂದ ಸಿಮೆಂಟ್ ಗಟ್ಟಿಯಾಗಿದ್ದು, ಸಿಮೆಂಟ್ ದಾರಂದ, ಕಿಟಿಕಿ, ಕಬ್ಬಿಣ ಪರಿಕರಗಳು ಗುಡ್ಡೆಯಲ್ಲಿಯೇ ರಾಶಿ ಬಿದ್ದಿವೆ. ಕೆಲವೊಂದು ಮನೆಗಳ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಕಾರ್ಮಿಕರಿಗೆ ಸಮರ್ಪಕವಾದ ವೇತನ ದೊರೆಯುತ್ತಿಲ್ಲವೆನ್ನುವ ಆರೋಪಗಳು ಕೇಳಿ ಬರುತ್ತಿವೆ.