Advertisement
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಧರ್ಮ ತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಶಾಲಾ ಪರಿಸರದಲ್ಲಿ ನಡೆದ ನಾಡೋಜ ದಿ| ಕಯ್ಯಾರ ಕಿಂಞಿಣ್ಣ ರೈ ಅವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
Related Articles
Advertisement
ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯಮಯ ವ್ಯಕ್ತಿತ್ವದ ಕಯ್ಯಾರರ ಸಮಗ್ರ ಚಿಂತನೆಗಳುಕಾಸರಗೋಡಿಗೆ ಸಂಬಂಧಿಸಿ ಎಲ್ಲಾ ಕಾಲಕ್ಕೂ ಪ್ರಸ್ತುತವಾದುದು. ಇಲ್ಲಿಯ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಆಗುತ್ತಿರುವ ನಿರಂತರ ಹಕ್ಕುಚ್ಯುತಿಗಳಿಗೆ ಒಗ್ಗಟ್ಟಿನ ಹೋರಾಟದ ಅಗತ್ಯ ಇದೆ ಎಂದರು. ಯುವ ಸಮುದಾಯ ಹೆಚ್ಚು ಜವಾಬ್ದಾರಿಯುತವಾಗಿ ಗಡಿನಾಡಿನ ಕನ್ನಡ ಅಸ್ಮಿತೆಯನ್ನು ಹೊಸಬಗೆಯಲ್ಲಿ ಕಟ್ಟಿ ಬೆಳೆಸಲು ಮುನ್ನುಗ್ಗಬೇಕು ಎಂದು ಕರೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ, ಗಮಕಿ ರಾಮ ಭಟ್ ಎಚ್., ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್, ಶಾಲಾ ಪ್ರಬಂಧಕ ಎನ್. ಶಂಕರನಾರಾಯಣ ಭಟ್ ಉಪಸ್ಥಿತರಿದ್ದು ಕಯ್ಯಾರರ ಸಂಸ್ಮರಣೆಗೈದು ಮಾತನಾಡಿದರು. ರಾಮ ಭಟ್ ಎಚ್. ಅವರು ಕಯ್ಯಾರರ ಬದುಕು, ಹೋರಾಟದ ಬಗೆಗಿನ ಸ್ವರಚಿತ ಕವನ ವಾಚಿಸಿದರು. ಕಸಾಪ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ಧರ್ಮತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕೆ. ವಂದಿಸಿದರು. ಶಿಕ್ಷಕ ಪ್ರಶಾಂತ ಹೊಳ್ಳ ನೀರಾಳ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.