Advertisement

ಯುವಕರ ನಡೆ ಕಾಯಕದತ್ತ ಸಾಗಲಿ

01:27 PM Feb 27, 2017 | Team Udayavani |

ಧಾರವಾಡ: ಅಕ್ಷರ ಜ್ಞಾನ ಇರುವ ಮನುಷ್ಯ ಎಲ್ಲಾ ಕಾಯಕಗಳನ್ನು ಮಾಡಿ ಗೆಲ್ಲಬಲ್ಲ ಎಂದು ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಕಾಲೇಜಿನಲ್ಲಿ ರವಿವಾರ ವೈಶುದೀಪ ಫೌಂಡೇಶನ್‌ ಹಾಗೂ ಜೆಎಸ್‌ಎಸ್‌ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಉತ್ಸವದಲ್ಲಿ ಅವರು ಮಾತನಾಡಿದರು. 

Advertisement

ಅನ್ನ, ಬಟ್ಟೆ, ಮನೆ, ಔಷಧಿ ಹಾಗೂ ಬದುಕಲು ಬೇಕಾದ ಅಕ್ಷರ ಜ್ಞಾನ ಈ ಐದು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಮಾಡಿದವನೇ ಶ್ರೇಷ್ಠ ಮನುಷ್ಯನಾಗುತ್ತಾನೆ. ಈ ನಿಟ್ಟಿನಲ್ಲಿ ಯುವಕರಿಗೆ ಕಾಯಕ ಧರ್ಮ ತಿಳಿಸಬೇಕು. ಬುದ್ಧಿಗೆ ಬಡತನ ಬರಲಾರದು. ಕಾಯಕಕ್ಕೆ ಜಾತಿಗಳು ಅನ್ವಯಿಸುವುದಿಲ್ಲ. ಹೀಗಾಗಿ ಕಾಯಕದತ್ತ ಯುವಕರ ನಡೆ ಸದಾ ಸಾಗಬೇಕು ಎಂದರು.

ಉದ್ಯೋಗ ಉತ್ಸವ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಕೇವಲ ಶಿಕ್ಷಣ ನೀಡಿದರೆ ಸಾಲದು. ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಡಬೇಕು ಎಂಬ ಉ¨ªೇಶದಿಂದ ಉದ್ಯೋಗ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಅಂಕಗಳನ್ನು ಪಡೆದಿದ್ದಾರೆ.

ಆದರೆ ಅವರು ಕಂಪನಿಗಳಿಗೆ ಸಂದರ್ಶನ ಕೊಡುವಲ್ಲಿ ವಿಫಲವಾಗುತ್ತಿದ್ದಾರೆ. ಇದೇ ಕಾರಣದಿಂದ ವೈಶುದೀಪ ಪ್ರತಿಷ್ಠಾನ ವತಿಯಿಂದ ಉದ್ಯೋಗ ಮಾರ್ಗದರ್ಶನ ಪ್ರಾರಂಭಿಸಲಾಗಿದೆ. ಈ ಮೂಲಕ ಅಭ್ಯರ್ಥಿಗಳು ಸಂದರ್ಶನಕ್ಕೆ ಯಾವ ರೀತಿ ತಯಾರಿ ನಡೆಸಬೇಕೆಂಬ ತರಬೇತಿ ನೀಡುವ ಕೆಲಸಕ್ಕೆ ಚಾಲನೆ ದೊರೆತಿದೆ ಎಂದರು. 

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಯುವಕರು ತಮ್ಮಲ್ಲಿನ ನಿರಾಸೆ ಭಾವನೆ ಬಿಟ್ಟು ಕೌಶಲ, ನೈಪುಣ್ಯತೆ ಬೆಳೆಸಿಕೊಳ್ಳಬೇಕು. ಕೇವಲ ಪಠ್ಯ-ಪುಸ್ತಕಗಳನ್ನು ಓದದೇ ಉದ್ಯೋಗ ಕೌಶಲ, ಸಂವಹನ ಕೌಶಲ ಸಹ ಬೆಳೆಸಿಕೊಳ್ಳಬೇಕು. ಕಂಪನಿಗಳು ನೀಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವಮೂಲಕ ಕಂಪನಿಯ ಬೆಳವಣಿಗೆಗೆ ಸಹಕರಿಸಿದರೆ ಅದರೊಂದಿಗೆ ನಿಮ್ಮ ಭವಿಷ್ಯವೂ ಉಜ್ವಲಗೊಳ್ಳಲಿದೆ ಎಂದರು. 

Advertisement

ವೈಶುದೀಪದ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಪ್ರಥಮ ಬಾರಿ ಮೇಳ ನಡೆಸಿದ ಸಂದರ್ಭದಲ್ಲಿ ಕೆಲ ಲೋಪ-ದೋಷಗಳು ಕಂಡು ಬಂದವು. ಅದಕ್ಕಾಗಿ ಈಗ ಉದ್ಯೋಗ ಮಾರ್ಗದರ್ಶಿ ಆರಂಭಿಸಿದ್ದು, ಇದೀಗ ಯುವ ಉದ್ಯೋಗ ಮಾರ್ಗದರ್ಶಿ ಪ್ರಾರಂಭಿಸಲಾಗಿದೆ. ಇಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅಭ್ಯರ್ಥಿಗಳಿಗೆ ನಿರಂತರ ಮಾರ್ಗದರ್ಶನ ನೀಡಿ ಉದ್ಯೋಗ ಕೊಡಿಸಲಾಗುವುದು ಎಂದರು. ಡಿಸಿಪಿ ಜೀನೇಂದ್ರ ಖನಗಾವಿ ಮಾತನಾಡಿದರು.

ಜೆಎಸ್‌ ಎಸ್‌ ಶಿಕ್ಷಣ ಸಮಿತಿ ವಿತ್ತಾಧಿಧಿಕಾರಿ ಡಾ| ಅಜಿತ್‌ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕರೆಪ್ಪ ಮಾದರ, ಪಾಲಿಕೆ ಸದಸ್ಯೆ ಮೀನಾಕ್ಷಿ ಸಂತೋಬಾ, ಡಿಐಸಿ ಜಂಟಿ ನಿರ್ದೇಶಕ ಬಿ.ಎನ್‌. ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೂರ, ಶಾಸಕ ಎನ್‌.ಎಚ್‌. ಕೋನರಡ್ಡಿ ಇದ್ದರು. ಮಹಾವೀರ ಉಪಾಧ್ಯಾಯ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ವಂದಿಸಿದರು. ಈ ಉತ್ಸವದಲ್ಲಿ 4 ಸಾವಿರ ಉದ್ಯೋಗ ಅವಕಾಶ ನೀಡಲು 80ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next