Advertisement
ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ನ್ಯಾಯ ಒದಗಿಸಬೇಕು, ಕಾವ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿ ಆಶ್ರಯದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, “ನಾನು ಮೇಯರ್ ಆಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಕಾವ್ಯಾ ಸಾವು ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂಬ ಹೋರಾಟದ ಪರವಾಗಿ ಇಲ್ಲಿಗೆ ಬಂದಿದ್ದೇನೆ. ಕಾವ್ಯಾ ತಾಯಿ ಬೇಬಿ ಅವರು ಮುಂದಿಡುವ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಈ ಹೋರಾಟದಲ್ಲಿ ರಾಜಕೀಯ ಮೂಗು ತೂರಿಸಬಾರದು. ನಿಷ್ಪಕ್ಷ ತನಿಖೆ ನಡೆದು ಸತ್ಯ ಹೊರಗೆ ಬರಬೇಕು. ಕಾವ್ಯಾ ಕುಟುಂಬಕ್ಕೆ ಸರಕಾರದಿಂದ 25 ಲಕ್ಷ ರೂ. ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
Related Articles
ಕಾವ್ಯಾ ತಾಯಿ ಬೇಬಿ ಅವರು ಮಾತನಾಡಿ, “ಎನ್ನ ಬಾಲೆಗ್ ನ್ಯಾಯ ಕೊರೊಡು’ (ನಮ್ಮ ಪುತ್ರಿಗೆ ನ್ಯಾಯ ಸಿಗಬೇಕು). ಕಾವ್ಯಾ ದೇಹವನ್ನು ಎರಡು ಬೆಡ್‌ಶೀಟ್‌ಗಳಲ್ಲಿ ಸುತ್ತಿ ಶವ ಪೆಟ್ಟಿಗೆಯಲ್ಲಿ ಇರಿಸುತ್ತಿರುವ ವೀಡಿಯೋ ಪ್ರದರ್ಶಿಸಿ ಇದು ಸಿಸಿ ಕೆಮರಾ ಫುಟೇಜ್ ಎಂದು ನಂಬಿಸಲಾಗಿತ್ತದೆ. ಇದು ನಕಲಿ ಎಂಬ ಸಂಶಯ ನಮ್ಮದು. ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಯ ಬೇಕು ಎಂದರು.
Advertisement
ಬಿರ್ವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ದೀಪಕ್ ಶೆಟ್ಟಿಗಾರ್, ಬಿಲ್ಲವ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಅಖೀಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಯುವ ವಾಹಿನಿ ಮಹಿಳಾ ಘಟಕದ ರಶ್ಮಿ ಕರ್ಕೇರಾ, ಎಬಿವಿಪಿ ಮುಖಂಡ ಸುಧೀಶ್ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಸಾಮಾಜಿಕ ಕಾರ್ಯಕರ್ತ ರೋಬರ್ಟ್ ರೊಜಾರಿಯೋ, ದಲಿತ ಸಂಘಟನೆಯ ನಾಯಕ ರಘು ಎಕ್ಕಾರು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಶಾಶ್ವತ್ ಕೊಟ್ಟಾರಿ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪರವಾಗಿ ಮಾಜಿ ಮೇಯರ್ ಕೆ. ಅಶ್ರಫ್, ಕಾರ್ಪೊರೇಟರ್ ಪ್ರತಿಭಾ ಕುಳಾç, ಕ್ರೀಡಾಪಟು ಮಮತಾ ಪೂಜಾರಿ, ಎನ್‌ಎಸ್‌ಯುಐ ನಾಯಕ ಸಾವುದ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿವಸಂತ ಪೂಜಾರಿ, ಅಖೀಲ ಭಾರತ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ ಮರೋಳಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮುಖಂಡ ಪ್ರತೀಕ್ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ಆತ್ರಾಡಿ ಅಮೃತಾ ಶೆಟ್ಟಿ, ಕ್ರೀಡಾಪಟು ಗೀತಾ ಬಾಯಿ, ಕೆಪಿಟಿ ವಿದ್ಯಾರ್ಥಿ ನಾಯಕ ಚಿತ್ತರಂಜನ್ ಶೆಟ್ಟಿ ಮುಂತಾದವರು ಪ್ರತಿಭಟನ ಸಭೆಯಲ್ಲಿ ಮಾತನಾಡಿದರು. ಕಾವ್ಯಾ ತಂದೆ ಲೋಕೇಶ್ ಪೂಜಾರಿ ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ್ ಕೊಂಚಾಡಿ, ವಿಷ್ಣುಮೂರ್ತಿ, ಉದಯ ಕುಮಾರ್, ಉದಯ ಪೂಜಾರಿ, ರಾಕೇಶ್ ಪೂಜಾರಿ, ಯೋಗೀಶ್ ಜಪ್ಪಿನಮೊಗರು, ಚರಣ್ ಶೆಟ್ಟಿ, ಮಾಧುರಿ, ದೀಕ್ಷಿತ್, ಜೀವನ್, ಪಿ.ಬಿ. ಡೆ’ಸಾ, ಎಂ.ಎಸ್. ಕೋಟ್ಯಾನ್, ಎಚ್.ಎಸ್. ಸಾಯಿರಾಂ, ಪದ್ಮರಾಜ್, ಜಯಂತಿ ಬಿ. ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ದಲಿತ ಸಂಘಟನೆಯ ನಾಯಕ ರಘುವೀರ್ ಸೂಟರ್‌ಪೇಟೆ ಸ್ವಾಗತಿಸಿದರು. ಸಿಪಿಐಎಂ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಟನೆಯ ಪ್ರಯುಕ್ತ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜಿಲ್ಲಾಧಿಕಾರಿ ಕಚೇರಿ ಎದುರು ಹ್ಯಾಮಿಲ್ಟನ್ ಸರ್ಕಲ್ ತನಕವೂ ಪ್ರತಿಭಟನಕಾರರು ಜಮಾಯಿಸಿದ್ದು, ಸುಮಾರು 4,000 ಮಂದಿ ಭಾಗವಹಿಸಿದ್ದರು. ಇದರಿಂದ ಈ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ಸುಮಾರು 3 ಗಂಟೆ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಇತರ ಸಾಮಾಜಿಕ ಸಂಘಟನೆಗಳ ಸಹಿತ 30ಕ್ಕೂ ಅಧಿಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.