Advertisement
ಪೂರ್ವ ಪರಂಪರೆಯಿಂದಲೂ ಕಾವು ಪಂಚಲಿಂಗೇಶ್ವರನಿಗೆ ತಿಂಗಳ 30 ದಿವಸವೂ ಧನು ಪೂಜೆ ನಡೆಯುತ್ತಿತ್ತು. ಆದರೆ ಬಳಿಕ ನಿಂತು ಹೋಗಿತ್ತು. ಆ ಬಳಿಕ ಧನುರ್ಮಾಸದಲ್ಲಿ ಪವಿತ್ರಪಾಣಿ ಅಚ್ಯುತ ಮೂಡಿತ್ತಾಯ ಮನೆಯ ವತಿಯಿಂದ ಧನುಪೂಜೆ ನಡೆಯುತ್ತಿತು. ಅದು ಈಗಲೂ ಪೂರ್ವ ಪದ್ಧತಿಯಂತೆ ನಡೆಯುತ್ತಿದೆ. ಅನಂತರದ ವರ್ಷಗಳಲ್ಲಿ ಸಾರ್ವಜನಿಕ ಸಹಯೋಗದಲ್ಲಿ ತಿಂಗಳ 30 ದಿನಗಳಲ್ಲೂ ಸೇವಾ ರೂಪದಲ್ಲಿ ಧನುಪೂಜೆ ನಡೆಯುತ್ತಿದ್ದು, ಆಸುಪಾಸಿನ ನೂರಾರು ಭಕ್ತರು ಬಂದು ಶ್ರೀ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಸುತ್ತಲೂ ಪ್ರಕೃತಿ ಸೌಂದರ್ಯಗಳಿಂದ ಕಂಗೊಳಿಸುವ ಪಂಚಲಿಂಗೇಶ್ವರ ದೇವರಿಗೆ ದೇವಾಲಯದಲ್ಲಿ ವರ್ಷದ 365 ದಿನಗಳಲ್ಲೂ ಬೆಳಗ್ಗೆ 5.30ಕ್ಕೆ, ಮಧ್ಯಾಹ್ನ 12 ಹಾಗೂ ಸಾಯಂಕಾಲ 7 ಗಂಟೆಗೆ ನಿತ್ಯ ಪೂಜೆ ನಡೆಯುತ್ತಿದೆ. ಧನುರ್ ಮಾಸ ಸಂದರ್ಭದಲ್ಲಿ ಮುಂಜಾನೆ 5 ಗಂಟೆಗೆ ಧನು ಪೂಜೆ ಆಗುತ್ತದೆ. ಬಳಿಕ ನಿತ್ಯಪೂಜೆ ನಡೆಯುತ್ತದೆ. ಮಕರ ಸಂಕ್ರಮಣ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.
ಧನು ಪೂಜೆ ದಿನಗಳಲ್ಲಿ ಅರ್ಚಕರು ಪ್ರಾತಃಕಾಲ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆದು ರುದ್ರಾಭಿಷೇಕ, ಸೀಯಾಳ ಅಭಿಷೇಕ ನೆರವೇರಿಸಿ, ಬಳಿಕ ಮುಂಜಾನೆ 5ಕ್ಕೆ ಪೂಜಾ ಕಾರ್ಯ ಪೂರ್ಣಗೊಳಿಸುತ್ತಾರೆ. ಧನುಪೂಜೆ ಸಂದರ್ಭದಲ್ಲಿ ದೇವರಿಗೆ ಅಕ್ಕಿ, ತೆಂಗಿನಕಾಯಿ, ಹೆಸರುಬೇಳೆ, ಕಾಳುಮೆಣಸು ಹುಡಿ, ಬೆಲ್ಲ ಬೆರೆಸಿ ಹುಗ್ಗಿ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಬಳಿಕ ಭಕ್ತರಿಗೆ ಅದನ್ನೇ ಪ್ರಸಾದವಾಗಿ ವಿತರಣೆ ಮಾಡಲಾಗುತ್ತದೆ. ಮಕರ ಸಂಕ್ರಾಂತಿ ದಿನದಂದು ಉಪಾಹಾರ ವ್ಯವಸ್ಥೆ ಮಾಡಲಾಗುತ್ತದೆ. ಪೂರ್ವಕಾಲದಿಂದಲೂ ಪಂಚಲಿಂಗೇಶ್ವರ ದೇವರಿಗೆ ಧನು ಪೂಜೆ ನಡೆಯುತ್ತಿದೆ. ತಿಂಗಳ ಮೂವತ್ತು ದಿನಗಳಲ್ಲಿಯೂ ಧನು ಪೂಜೆ ನಡೆಯುತ್ತಿತ್ತು. ಆನಂತರ ಪ್ರತಿ ದಿನ ಮಾಡದೆ ಧನುರ್ ಮಾಸದ ಯತಿಪಾಠಯೇವ ತಿಥಿ ದಿವಸದಂದು ನಮ್ಮ ಮನೆಯ ವತಿಯಿಂದ ಒಂದು ಪೂಜೆ ಮಾಡಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಸಾರ್ವಜನಿಕ ಸಹಯೋಗದಲ್ಲಿ ಪ್ರತಿ ನಿತ್ಯ ಒಂದು ತಿಂಗಳು ಧನುಪೂಜೆ ಮಾಡಲಾಗುತ್ತದೆ.
-ಅಚ್ಯುತ ಮೂಡಿತ್ತಾಯ, ದೇವಸ್ಥಾನದ ಪವಿತ್ರ ಪಾಣಿ
Related Articles
Advertisement