Advertisement

ಕಾವೂರು: ಆಟಿಸಂ ಮಕ್ಕಳ ಕ್ರೀಡಾಕೂಟ

11:45 AM Jan 07, 2018 | |

ಕಾವೂರು: ಕಾವೂರಿನ ಯಶ ಟ್ರಸ್ಟ್‌ ವತಿಯಿಂದ ಇತ್ತೀಚೆಗೆ ಆಟಿಸಂ ಮಕ್ಕಳ ಕ್ರೀಡಾಕೂಟವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. 

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ತಾರಾ ರಾವ್‌ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ, ಆಟಿಸಂ ಮಕ್ಕಳ ಶಾರೀರಿಕ ಅಭಿವೃದ್ಧಿಗೆ ಪ್ರೋತ್ಸಾಹಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.  ಕಾವೂರಿನ ಹಣ್ಣಿನ ವ್ಯಾಪಾರಿ ಹಸನಬ್ಬ ಅವರು ಮಕ್ಕಳ ಅಭಿವೃದ್ಧಿಗೆ ತನ್ನಿಂದಾದ ಸಹಾಯ ನೀಡಲು ಸಿದ್ಧ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಜಾನ್‌ ಪಿಂಟೋ, ಎನ್ನೆಸ್ಸೆಸ್‌ ಸಂಯೋಜನಾಧಿಕಾರಿ ರೇಖಾ, ಚೇತನಾ ಶಾಲೆಯ ವಿಶೇಷ ಶಿಕ್ಷಕ ಕುಶ ನಾೖಕ್‌ ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಸೌಮ್ಯಲತಾ ಸಹಕರಿಸಿದರು. ವಿಶೇಷ ಮಕ್ಕಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾದ ವಿದ್ಯಾರ್ಥಿಗಳು ಉತ್ತೇಜನ ನೀಡಿ ಸಹಕರಿಸಿದ್ದು, ಸಮಾಜಕ್ಕೆ ಮಾದರಿಯಾಗಿತ್ತು. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಯ ಬಗ್ಗೆ ಯಶ ಟ್ರಸ್ಟ್‌ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಟ್ರಸ್ಟಿ ಜಿ.ಕೆ. ಭಟ್‌ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಟ್ರಸ್ಟಿ ದುರ್ಗಾಲಕ್ಷ್ಮೀ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಚಂದ್ರಿಕಾ ವಂದಿಸಿದರು ಮತ್ತು ಸುನೀಲ್‌ ಜಿ.ಬಿ. ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next