(ಡಬ್ಲ್ಯೂಡಬ್ಲ್ಯೂಇ)ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕಿತ್ತಳೆ ಬಣ್ಣದ ಚೂಡಿ, ದುಪ್ಪಟ್ಟಾ ತೊಟ್ಟುಕೊಂಡೇ ಎದುರಾಳಿ ವಿರುದ್ಧ ಕದನ ನಡೆಸಿ ಭಾರೀ ಸುದ್ದಿಯಾಗಿದ್ದಾರೆ. ಪಂದ್ಯದಲ್ಲಿ ಸೋತರೂ ಮೊದಲ ಸ್ಪರ್ಧೆಯಲ್ಲಿಯೇ ಕೋಟ್ಯಂತರ ಭಾರತೀಯ ಅಭಿಮಾನಿಗಳ ಹೃದಯ ಸಿಂಹಾಸನ ಕವಿತಾ ಗೆದ್ದಿದ್ದಾರೆ.
Advertisement
ಸ್ಪರ್ಧೆಯ ಅಧಿಕೃತ ವಿಡಿಯೋವನ್ನು ಡಬ್ಲ್ಯೂಡಬ್ಲ್ಯೂಇ ಸಂಸ್ಥೆ ಯೂ ಟ್ಯೂಬ್‌ನಲ್ಲಿ ಪ್ರಕಟಿಸಿದೆ. ಇದು ಭಾರೀ ಸಂಖ್ಯೆಯ ವೀಕ್ಷಣೆಗೆ ಕಾರಣವಾಗಿದೆ. ಅಮೆರಿಕದ ಮೆ ಯಂಗ್ ಕ್ಲಾಸಿಕ್‌ನಲ್ಲಿ ನಡೆದ ಕೂಟದಲ್ಲಿ ಹರ್ಯಾಣದ ಹುಡುಗಿ ನ್ಯೂಜಿಲೆಂಡ್‌ನ ಡಕೊಟಾ ಕಾ ಅವರನ್ನು ಎದುರಿಸಿದರು. ಒಂದು ಹಂತದಲ್ಲಿ ಕಾಯ್ ಅವರನ್ನು ಮೇಲಕ್ಕೆ ಎತ್ತಿ ಕವಿತಾ ಎಸೆದರು. ಆದರೆ ನಂತರ ನಡೆದಹಣಾಹಣಿಯಲ್ಲಿ ಕವಿತಾ ಸೋಲು ಕಂಡು ನಿರಾಶೆ ಅನುಭವಿಸಿದರು. ಹರ್ಯಾಣದ ಮೂಲದ ಕವಿತಾ ಡಬ್ಲ್ಯೂಡಬ್ಲ್ಯೂಇ ನಲ್ಲಿ ಭಾಗವಹಿಸಿದ ಮೊದಲ ಮಹಿಳಾ ಸ್ಪರ್ಧಿ. ಒಟ್ಟಾರೆ 2ನೇ ಸ್ಪರ್ಧಿಯಾಗಿದ್ದಾರೆ. ಖಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ.