ಒಂದು ಯಶಸ್ವಿ ಕಾರ್ಯಕ್ರಮಕ್ಕೆ ತೆರೆ ಬೀಳುವುದು ಚಂದದ ಸಮಾರೋಪ ಸಮಾರಂಭದಿಂದ. ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರ ಬೆವರಿನ ಬಿಂದುವನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವದು.
ಹೊಂಬಾಳೆ ಪ್ರತಿಭಾರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ “ಕವಿದನಿ’ ಕಾರ್ಯಕ್ರಮ ಸರಣಿ ಮುಕ್ತಾಯಗೊಳ್ಳುತ್ತಿದ್ದು, ಈ ನಿಮಿತ್ತ ಸುಂದರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಜೊತೆಗೆ ಜಿ.ಪಿ.ರಾಮಣ್ಣ ಅವರ, “ರಜತ ಕವಿ ದರ್ಶನ’ (ಕವಿದನಿಯಲ್ಲಿ ಪ್ರಸ್ತುತಪಡಿಸಲಾದ 25 ಕವಿಗಳ ಪರಿಚಯ ಲೇಖನ) ಕೃತಿ ಹಾಗೂ “ಕವಿದನಿ ದರ್ಪಣ’ ನೆನಪಿನ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಹಿರಿಯ ಗಾಯಕಿ ಎಚ್.ಆರ್.ಲೀಲಾವತಿ, ಹಿರಿಯ ಕವಿ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಭಾಗವಹಿಸಲಿದ್ದಾರೆ. ಶಿವಮೊಗ್ಗ ಸುಬ್ಬಣ್ಣ, ಪಾರ್ವತಿಸುತ, ಪುತ್ತೂರು ನರಸಿಂಹನಾಯಕ್, ಡಾ. ರೋಹಿಣಿ ಮೋಹನ್, ಕೆ.ಎಸ್.ಸುರೇಖಾ, ಪಂಚಮ್ ಹಳಿಬಂಡಿ,
ಶ್ರೀರûಾ ಪ್ರಿಯರಾಮ್, ನರಹರಿ ದೀಕ್ಷಿತ್, ಗಣೇಶ್ ದೇಸಾಯಿ, ಮಾಲಿನಿ ಕೇಶವ ಪ್ರಸಾದ್, ವರ್ಷಾ ಸುರೇಶ್ ಹಾಗೂ ಇತರರಿಂದ ಗಾಯನ ಮತ್ತು ಎಂ.ಆರ್.ಸತ್ಯನಾರಾಯಣ ಅವರಿಂದ ಗಮಕವಾಚನವಿದೆ. ವಸಂತಕುಮಾರ್ ಕುಂಬ್ಳೆ, ಬಿ.ಕೆ.ಶಶಿಧರ್, ಎಸ್.ಮಧುಸೂದನ್, ಎಲ್.ಎನ್.ವಸಂತಕುಮಾರ್ ವಾದ್ಯ ಸಹಕಾರ ನೀಡಲಿದ್ದಾರೆ.
ಎಲ್ಲಿ?: ನಯನ ಸಭಾಂಗಣ
ಯಾವಾಗ?: ಫೆ. 4, ಭಾನುವಾರ ಸಂಜೆ 5