Advertisement

ಕಾವೇರಿಯ ಅಲೆಗೂ ಜಗ್ಗದ ಕಣ್ವರು!

10:01 PM Oct 18, 2019 | Lakshmi GovindaRaju |

ಮಂಡ್ಯ ಜಿಲ್ಲೆಯ ಕಾವೇರಿ ನದಿ ತೀರದ ಒಂದು ಗ್ರಾಮ, ಕನ್ನಂಬಾಡಿ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರೆಂಬ ಐತಿಹ್ಯವಿದೆ. ಅವರ ತಪಸ್ಸು ಎಷ್ಟು ಘೋರವಿತ್ತು ಎಂದರೆ, ಕಾವೇರಿ ನದಿಯು ಆರ್ಭಟಿಸಿ, ಆಳೆತ್ತರದ ಅಲೆಗಳನ್ನು ಸೃಷ್ಟಿಸಿದರೂ, ಕಣ್ವರ ತಪಸ್ಸಿಗೆ ಭಂಗವಾಗಲಿಲ್ಲವಂತೆ. ಕಣ್ವರ ಕಾರಣಕ್ಕಾಗಿಯೇ ಈ ಊರಿಗೆ, ಕಣ್ವಪುರಿ, ಕಣ್ಣಂಬಾಡಿ, ಮನ್ನಂಬಾಡಿ- ಎಂಬ ಹೆಸರುಗಳು ಬಂದವು ಎನ್ನಲಾಗುತ್ತದೆ. ಗ್ರಾಮವು ಮುಳುಗಡೆ ಆಗುವ ಭೀತಿ ಇದ್ದಿದ್ದರಿಂದ, ನಾಲ್ವಡಿ ಕೃಷ್ಣರಾಜ ಒಡೆಯರು ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ತೀರ್ಮಾನಿಸಿದರು. ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಇದು ಕೈಗೂಡಿತು.

Advertisement

* ಪ್ರಹ್ಲಾದ ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next