Advertisement

ಹಳ್ಳಿಯಲ್ಲಿ ಸದ್ದಿಲ್ಲದೆ ಉದ್ಭವಿಸುವ ಕಾವೇರಿ

12:19 AM Oct 17, 2019 | sudhir |

ವಿದ್ಯಾನಗರ:ಭಾರತೀಯ ಸಂಸ್ಕೃತಿ ಯಲ್ಲಿ ಪುರಾಣ ಪ್ರಸಿದ್ಧ ಏಳು ನದಿಗಳಾದ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತು. ದಕ್ಷಿಣ ಭಾರತದ ಜೀವಮದಿ ಎಂದೇ ಕರೆಯಲ್ಪಡುವ ಕಾವೇರಿಯ ಉಗಮ ಸ್ಥಾನ ಕೊಡಗಿನ ಬ್ರಹ್ಮಗಿರಿಯ ತಪ್ಪಲಲ್ಲಿ ತಲಕಾವೇರಿಯಲ್ಲಿದೆ. ತುಲಾ ಸಂಕ್ರಮಣ ದಂದು ಈ ಪವಿತ್ರ ತೀರ್ಥಕುಂಡದಲ್ಲಿ ತೀಥೋìದ್ಭವವಾಗುತ್ತದೆ.

Advertisement

ಅದೇ ದಿನ ಜಿಲ್ಲೆಯ ಕಾರಡ್ಕ ಪಂಚಾಯತು ಬೆಳ್ಳೂರು ಸಮೀಪದ ಮಿಂಚಿಪದವು ಕಾವೇರಿಯಮ್ಮ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಕಾವೇರಿ ತೀರ್ಥದ ಸಂಭ್ರಮ.

ಗುರುವಾರ ತಡರಾತ್ರಿ 1ಗಂಟೆ 5ನಿಮಿಷದ ಶುಭ ಮುಹೂರ್ತದಲ್ಲಿ ತೀರ್ಥ ಕುಂಡದಲ್ಲಿ ಕಾವೇರಿ ಉದ್ಭವವಾಗಲಿದ್ದು ಕುಂಡದಿಂದ ಪವಿತ್ರ ಜಲ ಎದುರು ಭಾಗದ ಕೆರೆಗೆ ಉಕ್ಕಿ ಹರಿಯುತ್ತದೆ.

ಈ ಸಂದರ್ಭದಲ್ಲಿ ಭಕ್ತರು ಕೊಳದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿ ಪುನೀತರಾಗುವರು.

ಪ್ರತಿವರ್ಷ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಊರ ಪರವೂರ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.

Advertisement

ಗುರುವಾರ ರಾತ್ರಿ ಪ್ರಾರಂಭಗೊಂಡು ನಾಳೆ(ಶುಕ್ರವಾರ) ಮಧ್ಯಾಹ್ನದವರೆಗೂ ವಿವಿಧ ದೆ„ವಿಕ ಕಾರ್ಯಕ್ರಮಗಳು ಜರಗಲಿದ್ದು ಮಧ್ಯಾಹ್ನ ವಿಶೇಷ ರುದ್ರಾಭಿಷೇಕ, ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಬೇವಿಂಜೆ ಕಕ್ಕಿಲ್ಲಾಯ ಕುಟುಂಬಸ್ಥರ ಅಧೀನದಲ್ಲಿರುವ ಶ್ರೀ ಕ್ಷೇತ್ರದ ಎಲ್ಲಾ ಕಾರ್ಯ ನಿರ್ವಹಣೆಯು ಕುಟುಂಬಸ್ಥರ ಮೇಲುಸ್ತವಾರಿಯಲ್ಲಿ ನಡೆಯುತ್ತದೆ.

ಊರ ಜನರ ಸಂಪೂರ್ಣ ಸಹಕಾರವೂ ಅವರಿಗಿದೆ. ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರಿಗೂ ದೇವರ ದರ್ಶನ, ತೀರ್ಥಸ್ನಾನ ಮಾಡಬಹುದಾದವ ಕ್ಷೇತ್ರವು ಇದಾಗಿದೆ.

ಸುತ್ತಲೂ ಹಸಿರಿನ ವನಸಿರಿ
ಪ್ರಕೃತಿ ರಮಣೀಯವಾದ ಪ್ರದೇಶದಲ್ಲಿ ನೆಲೆಯಾಗಿರುವ ಕಾವೇರಿಯಮ್ಮ ಮಹಾಲಿಂಗೇಶ್ವರ ಕ್ಷೇತ್ರವು ಸುತ್ತಲೂ ಹಸಿರಿನ ವನಸಿರಿ, ಗುಡ್ಡಗಳಿಂದ ಆವೃತವಾಗಿದ್ದು ನೋಡುಗರನ್ನು ಕೈಬೀಸಿ ಕರೆಯುವಂತೆ ಭಾಸವಾಗುತ್ತದೆ.
ಇಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯವೂ ಪ್ರಕೃತಿ ನಾಶಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸುತ್ತಿರುವುದು ಇಲ್ಲಿನ ಜನರ ಪ್ರಕೃತಿ ಪ್ರೀತಿಗೆ ಸಾಕ್ಷಿ.

ಶ್ರೀಮಂತವಾದ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಹರಿಯುವ ಕಾವೇರಿ ಮಾತೆಯ ದರ್ಶನಕ್ಕಾಗಿ, ತೀರ್ಥಸ್ನಾನಗೆ„ದು ಪುನೀತ ರಾಗುವ ಉದ್ಧೇಶದಿಂದ ಈ ಊರಿನಿಂದ ಹೊರಗಿರುವ ಜನರು ಉತ್ಸವ ಸಂದರ್ಭದಲ್ಲಿ ಊರಿಗೆ ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡು ಮರಳುತ್ತಾರೆ.

ತಿಂಗಳು ಪೂರ್ತಿ ತೀರ್ಥಸ್ನಾನ
ನಾಳೆ ಪ್ರಾರಂಭವಾಗುವ ತೀರ್ಥಸ್ನಾನವು ಮುಂದಿನ ತಿಂಗಳ ಸಂಕ್ರಮಣದವರೆಗೂ ಮುಂದುವರಿಯುತ್ತದೆ. ಹಾಗಾಗಿ ಒಂದು ತಿಂಗಳು ದೇಗುಲ ಸಂದರ್ಶಿಸುವ ಭಕ್ತರ ಸಂಖ್ಯೆಯೂ ಹೆಚ್ಚು.

ಮುಳ್ಳೇರಿಯದಿಂದ 12 ಕಿ.ಮೀ.
ಮುಳ್ಳೇರಿಯದಿಂದ 12 ಕಿಲೋ ಮೀಟರ್‌ ದೂರದಲ್ಲಿರುವ ದೇಗುಲಕ್ಕೆ ಬಸ್ಸಿನ ವ್ಯವಸ್ಥೆಯಿದೆ. ಸುಳ್ಯ, ಕಾಸರಗೋಡು ಭಾಗದಿಂದ ಬರುವ ಭಕ್ತ ಜನರು ಮುಳ್ಳೇರಿಯಕ್ಕೆ ಬಂದು ಬೆಳ್ಳೂರು ಮಾರ್ಗವಾಗಿ ಮಿಂಚಿಪದವು ತಲುಪಬಹುದು.

ಪುತ್ತೂರು=ವಿಟ್ಲ ಪೆರ್ಲ, ಭಾಗ ದಿಂದ ಬದಿಯಡ್ಕ- ಮುಳ್ಳೇರಿಯ ಮಾರ್ಗವಾಗಿಯೂ, ಮಂಗಳೂರು ಭಾಗದಿಂದ ಕುಂಬಳೆ- ಬದಿಯಡ್ಕ- ಮುಳ್ಳೇರಿಯ ಮಾರ್ಗದ ಮೂಲಕವೂಈ ದೆವಸ್ಥಾನಕYಕೆ ಆಗಮಿಸಬಹುದಾಗಿದೆ.

ಹೆಚ್ಚಿನ ಜನರಿಗೆ ತಿಳಿದಿಲ್ಲ
ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದುದರಿಂದ ಶೀÅಕ್ಷೇತ್ರದ ವಿಶೇಷತೆಗಳನ್ನು, ಮಹತ್ವವನ್ನು ಜನರಿಗೆ ತಿಳಿಯುವಂತೆ ಮಾಡಬೇಕು. ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಆಭಿವೃದ್ಧಿ ಕಾರ್ಯಗಳು ನಡೆಯುವಂತಾಗಬೇಕು.
– ಪುಷ್ಪಾವತಿ ನೆಟ್ಟಣಿಗೆ,
ಸದಸ್ಯೆ, ಕರ್ನಾಟಕ ಜಾನಪದ ಪರಿಷತ್ತು, ಕೇರಳ ಗಡಿನಾಡ ಘಟಕ

ಪರಿಸರದ ಜಲಮೂಲ, ವನರಾಶಿ ರಕ್ಷಣೆಗೆ ಆದ್ಯತೆ
ಪ್ರಾಕೃತಿಕವಾಗಿ ದೊರೆತ ಜಲಮೂಲ, ವನರಾಶಿಯನ್ನು, ಹಾಗೆಯೇ ಸಂರಕ್ಷಿಸಿಕೊಂಡು ಹೋಗುವತ್ತ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಕಾಮಗಾರಿಗಳನ್ನೂ ಪ್ರಕೃತಿಗೆ ತೊಂದರೆ ಆಗದ ರೀತಿಯಲ್ಲಿಯೇ ಮಾಡಲಾಗಿದೆ. ಇನ್ನು ಮುಂದೆಯೂ ಹಾಗೆಯೇ ಮುಂದುವರಿಯುವುದು.

ಕಳೆದ ವರ್ಷ ಸುಮಾರು 1500 ಭಕ್ತರು ತೀರ್ಥಸ್ನಾನ ಮಾಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಈ ವರ್ಷ ಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಸೇವಾ ಸಮಿತಿ ರೂಪೀಕರಿಸಲಾಗಿದ್ದು ತೀರ್ಥಕೆರೆಯ ನವೀಕರಣ ಕಾರ್ಯ ಸಧ್ಯದಲ್ಲಿಯೇ ಪ್ರಾರಂಭಿಸುವತ್ತ ಗಮನ ಹರಿಸುತ್ತಿದ್ದೇವೆ. ಅದಕ್ಕೆ ಊರ ಪರವೂರ ಭಕ್ತರ ಸರ್ವ ವಿಧದ ಸಹಕಾರದ ಅಗತ್ಯವಿದೆ.
– ಸದಾನಂದ ಮಿಂಚಿಪದವು, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next