Advertisement
ಹೌದು.., ರಾಮನಗರ ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾ ಕಾಂಕ್ಷಿ 456 ಕೋಟಿ ರೂ.ಗಳ ನೆಟ್ಟಕಲ್ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡ ಜಿಲ್ಲಾ ಕೇಂದ್ರದ ನಾಗರಿಕರಿಗೆ ಸಾಕಾಗುವಷ್ಟು ನೀರು ಲಭ್ಯವಾಗಲಿದೆ.
Related Articles
Advertisement
60 ಕಿಮೀ ದೂರದಿಂದ ನೀರು: ರಾಮನಗರಕ್ಕೆ 60 ಕಿಮೀ ದೂರದಲ್ಲಿರುವ ತೊರೆಕಾಡನಹಳ್ಳಿ ಜಲಶುದ್ಧೀಕರಣ ಕೇಂದ್ರಕ್ಕೆ, ನೆಟ್‌ಕಲ್ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಮತೋಲನ ಅಣೆಕಟ್ಟೆ ಯಿಂದ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಕೊಳವೆಗಳಲ್ಲಿ ತರಲಾಗುವುದು. ಶುದ್ಧೀಕರಣ ಕೇಂದ್ರದಲ್ಲಿ ನೀರನ್ನು ಶುದ್ಧೀಕರಿಸಿ ಪಂಪು ಮೋಟರ್‌ಗಳ ಸಹಾಯದಿಂದ ರಾಮನಗಕ್ಕೆ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿ ಪಂಪ್ ಹೌಸ್ ಅನ್ನು ನಿರ್ಮಿಸಲಾಗಿದೆ. ರಾಮನಗರದ ಜನತೆಗೆ ನೀರು ಪೂರೈಕೆ ಮಾಡುವುದಕ್ಕಾಗಿ ಕೊತ್ತೀಪುರದ ಬಳಿ 100 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕ್ ಮತ್ತು ಬೋಳಪ್ಪನಹಳ್ಳಿ ಬಳಿಕ 200 ಲಕ್ಷಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕ್ ನಿರ್ಮಿಸಿದ್ದು, ಈ ಟ್ಯಾಂಕ್‌ಗಳ ಸಹಾಯದಿಂದ ಮನೆಗಳಿಗೆ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ 800 ಎಚ್‌ಪಿ ಸಾಮರ್ಥ್ಯದ ಪಂಪು ಮೋಟರ್‌ಗಳನ್ನು ಬಳಕೆ ಮಾಡಲಾಗಿದೆ.
30 ವರ್ಷದ ಗುರಿ: ಪ್ರಸ್ತುತ 25 ಎಂಎಲ್‌ಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆ 2052ರ ವೇಳೆಗೆ 62 ಎಂಎಲ್‌ಡಿಗೆ ಹೆಚ್ಚಳಗೊಳ್ಳಲಿದೆ. 2ಸಾವಿರ ಎಚ್‌ಪಿ ವರೆಗೂ ನೀರನ್ನು ಪಂಪ್ ಮಾಡುವ ಈ ಯೋಜನೆಯ ಕೊಳವೆ ಹಾಯ್ದು ಹೋಗಿರುವ 12 ಗ್ರಾಮಗಳಿಗೂ ನೀರು ಪೂರೈಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ರಾಮನಗರದ ಜನತೆಗೆ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಮಹತ್ವದ ಪಾತ್ರ ವಹಿಸಲಿದೆ. ಇದುವರೆಗೆ ಅರ್ಕಾವತಿಯ ಕಲುಷಿತ ನೀರನ್ನು ಪೂರೈಕೆ ಮಾಡ ಲಾಗುತ್ತಿದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಜನವರಿಯಿಂದ ಎಲ್ಲಾ ಮನೆಗಳಿಗೆ ದಿನದ 24 ತಾಸು ವಾರದ 7 ದಿನ ನೀರು ಲಭ್ಯವಾಗಲಿದೆ.-ಇಕ್ಬಾಲ್ ಹುಸೇನ್, ಶಾಸಕ ರಾಮನಗರ
– ಸು.ನಾ.ನಂದಕುಮಾರ್