ಮಂಡ್ಯ: ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಬಗೆಹರಿಸಿಕೊಳ್ಳಲು ಕಾವೇರಿ ಕುಟುಂಬದಲ್ಲಿದ್ದನಾಯಕರ ಒಗ್ಗಟ್ಟಿನಂತೆ ತಮಿಳುನಾಡಿನ ನಾಯಕರಲ್ಲಿ ಇರಲಿಲ್ಲ. ಇದರಿಂದ ಐಕ್ಯತೆ ಸಾಧ್ಯವಾಗದೆ ಕಾವೇರಿ ವಿವಾದ ಇನ್ನೂ ಜೀವಂತವಾಗಿದೆ ಎಂದುವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ “ಕಾವೇರಿ:ಇತ್ತೀಚಿನ ವಿದ್ಯಮಾನಗಳ ಕುರಿತು’ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿದರು.
ರಾಜಕೀಯವೇ ವಿವಾದದ ಮೂಲ: ಕಾವೇರಿ ನೀರು ಹಂಚಿಕೆ ವಿವಾದದ ಮೂಲ, ಕರ್ನಾಟಕ ಹಾಗೂ ತಮಿಳುನಾಡಿನ ರಾಜಕೀಯ ವಿದ್ಯಮಾನ,ಕೃಷಿ ಭೂಮಿ ವಿಸ್ತಾರದಲ್ಲಿನ ಬೆಳವಣಿಗೆ, ನ್ಯಾಯಾಲಯ ಮತ್ತು ಪ್ರಾ ಕಾರದಲ್ಲಿ ನಡೆದ ವೈರುಧ್ಯಗಳ ಕುರಿತು ಸಮಗ್ರ ಮಾಹಿತಿಯೊಂದಿಗೆ ವಿಶ್ಲೇಷಣೆಮೂಲಕ ರಾಜ್ಯ ಮತ್ತು ತಮಿಳುನಾಡಿನ ಹೋರಾಟಗಳ ಮೇಲೆ ಬೆಳಕು ಚೆಲ್ಲಿದರು ಎಂದರು.
ಕಳೆದುಕೊಂಡಿದ್ದರ ಬಗ್ಗೆ ಆಲೋಚನೆಯೇ ಇಲ್ಲ: 1990ರ ಮೇ ತಿಂಗಳಲ್ಲಿ ಸರ್ವೋತ್ಛ ನ್ಯಾಯಾಲಯ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆಕಾವೇರಿ ನ್ಯಾಯಾಧೀಕರಣ ರಚಿಸಿತು. ಈ ನ್ಯಾಯಾಧೀಕರಣ ಸುಮಾರು 17 ವರ್ಷಗಳ ಸತತ ವಾದ, ಪ್ರತಿವಾದ, ಅಧ್ಯಯನ, ಸಮೀಕ್ಷೆ, ಪ್ರವಾಸ ತಜ್ಞರ ವರದಿ ಆಧರಿಸಿ 2007ರ ಫೆ.27 ರಂದುಅಂತಿಮ ತೀರ್ಪು ಪ್ರಕಟಿಸಿತು. ಈ ತೀರ್ಪಿನ ನೀರುಹಂಚಿಕೆ ವಿರೋಧಿ ಸಿ ತಮಿಳುನಾಡು ಸರ್ವೋತ್ಛ ನ್ಯಾಯಾಲಯದಲ್ಲಿ ಖಟ್ಲೆ ಹೂಡಿತು. ಇದರಿಂದಾಗಿ ಕರ್ನಾಟಕವೂ ವಿಶೇಷ ಖಟ್ಲೆ ಹೂಡಿತು. ಇದರೊಂದಿಗೆ ಕೇರಳ, ಪುದುಚೇರಿ ಸರ್ಕಾರವೂಖಟ್ಲೆ ಹೂಡಿದವು. 10 ವರ್ಷದ ಬಳಿಕ ಸರ್ವೋತ್ಛ ನ್ಯಾಯಾಲಯ 2017ರಲ್ಲಿ ನ್ಯಾಯಾಧೀ ಕರಣದ ತೀರ್ಪಿನ ಮೇಲೆ ತನ್ನ ತೀರ್ಪು ಪ್ರಕಟಿಸಿತು. ತಮಿಳುನಾಡಿನ ಅಚ್ಚುಕಟ್ಟು ಪ್ರದೇಶದಲ್ಲಿ ದೊರೆಯಬಹುದಾದ ಅಂತರ್ಜಲ ಪರಿಗಣಿಸಿ ಕರ್ನಾಟಕಕ್ಕೆ 14.75ಟಿಎಂಸಿ ಹೆಚ್ಚುವರಿ ನೀರನ್ನು ನೀಡಿತು. ಆಗ ಕರ್ನಾಟಕ ತನಗೆ ಸಿಕ್ಕ 14.75 ಟಿಎಂಸಿ ನೀರು ಗಮನಿಸಿ ಬೀಗಿತ್ತು. ಆದರೆ, ಕಳೆದುಕೊಂಡದ್ದರ ಬಗ್ಗೆ ಆಲೋಚನೆಯೇ ನಡೆಯಲಿಲ್ಲ ಎಂದರು.
ಬಳಿಕ ರೈತ ಮುಖಂಡರ ಪ್ರಶ್ನೆಗಳಿಗೆ ಕಾನೂನಿ ನಂತೆಯೇ ಉತ್ತರಿಸಿ ಗಮನ ಸೆಳೆದರು.ವೇದಿಕೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ದಸಂಸ ಮುಖಂಡ ಎಂ.ಬಿ.ಶ್ರನಿವಾಸ್, ರೈತ ಮುಖಂಡ ಇಂಡುವಾಳುಚಂದ್ರಶೇಖರ್ ಸೇರಿದಂತೆ ಮತ್ತಿತರರಿದ್ದರು.
ಮೇಕೆದಾಟು ಯೋಜನೆಗೆ ತಡೆ :
ಕರ್ನಾಟಕ ಮೇಕೆ ದಾಟು ಯೋಜನೆ ಪ್ರಸ್ತಾಪಿಸಿಕೇಂದ್ರ ನೀರಾವರಿ ಆಯೋಗದಿಂದ ವರದಿಗೆ ಒಪ್ಪಿಗೆ ಪಡೆದು ಕೊಂಡಿದೆ. ಆದರೆ, ಇದರವಿರುದ್ಧ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದಲ್ಲಿ ಆಯೋಗದ ವಿರುದ್ಧ ದೂರುನೀಡಿದೆ. ತಮಿಳುನಾಡು ಈಗಾಗಲೇ ವೈಗೈ, ಗುಂಡಾರು, ವೆಲ್ಲಾರು ನದಿಗಳನ್ನು ಕಾವೇರಿ ನದಿ ಜತೆ ಜೋಡಿಸುವ ಯೋಜನೆ ತಯಾರಿಸಿಕೇಂದ್ರ ಸರ್ಕಾರದಿಂದ 6941 ಕೋಟಿ ರೂ. ಯೋಜನೆಗೆ ಒಪ್ಪಿಗೆ ಪಡೆದಿದೆ. ಇದು ಕರ್ನಾಟಕ ನ್ಯಾಯಾಧೀಕರಣದ ತೀರ್ಪಿಗೆ ಹೊರತಾದ ಹೆಚ್ಚುವರಿ ನೀರಿನ ಬಳಕೆ ಮಾಡದಂತೆ ತಡೆಯುವ ಹುನ್ನಾರ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ವಿವರಿಸಿದರು