Advertisement

ಸೆ.3ರಂದು “ಕಾವೇರಿ ಕೂಗು’ಸಂಚಾರ ಆರಂಭ

10:53 PM Aug 28, 2019 | Lakshmi GovindaRaj |

ಮಂಡ್ಯ: ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಅವರು ಸೆ.3ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ “ಕಾವೇರಿ ಕೂಗು’ ಸಂಚಾರ ಆರಂಭಿಸಲಿದ್ದಾರೆ ಎಂದು ಈಶ ಫೌಂಡೇಷನ್‌ನ ಸ್ವಯಂಸೇವಕ ಬಿ.ಎನ್‌.ಸುಬ್ರಹ್ಮಣಿ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 3.30ಕ್ಕೆ ಮಡಿಕೇರಿಯ ಕ್ರಿಸ್ಟಲ್‌ ಹಾಲ್‌ ಬಳಿ ನಡೆಯುವ ಬೃಹತ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಾವೇರಿ ಕೂಗಿನ ಬಗ್ಗೆ ಸದ್ಗುರು ಅವರು ತಿಳಿಸಿ ಕೊಡಲಿದ್ದಾರೆ.

Advertisement

ಸೆ.4ರಂದು ಸಂಜೆ 4 ಗಂಟೆಗೆ ಹುಣಸೂರಿನ ಮುನೇಶ್ವರ ಮೈದಾನ, 5 ರಂದು ಸಂಜೆ 6 ಗಂಟೆಗೆ ಮೈಸೂರಿನ ಮಾನಸಗಂಗೋತ್ರಿಯ ಆಂಫಿ ಥಿಯೇಟರ್‌, 6ರಂದು ಸಂಜೆ 4 ಗಂಟೆಗೆ ಮಂಡ್ಯದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ, 8ರಂದು ಸಂಜೆ 5.30ಕ್ಕೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಂತರ, ತಮಿಳುನಾಡಿನ ಪೂಂಪುಹಾರದಲ್ಲಿರುವ ತಿರುವಾವುರ್‌ ಮೂಲಕ ಸಂಚಾರ ಮುಂದುವರಿಸಿ, ಚೆನ್ನೈನಲ್ಲಿ ಮುಕ್ತಾಯಗೊಳಿಸಲಿದ್ದಾರೆ ಎಂದರು.

ಇದು 1,500 ಕಿ.ಮೀ.ದೂರದ ಪ್ರಯಾಣವಾಗಿದ್ದು, ಹಾದಿಯುದ್ದಕ್ಕೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿಗೆ ಸೇರಿದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 242 ಕೋಟಿ ಮರಗಳನ್ನು ನೆಟ್ಟು ಬೆಳೆಸುವುದು ಯೋಜನೆಯ ಮೂಲ ಉದ್ದೇಶ. ಸ್ಥಳೀಯ ನೀರು, ಮಣ್ಣು, ಹವಾಮಾನಗಳಿಗೆ ತಕ್ಕಂತೆ 17 ಜಾತಿಯ ಸಸಿಗಳನ್ನು ಎಚ್ಚರಿಕೆಯಿಂದ ಆರಿಸಲಾಗಿದೆ. ಜೊತೆಗೆ, ಅವುಗಳ ವಾಣಿಜ್ಯ ಮೌಲ್ಯವನ್ನೂ ಪರಿಗಣಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next