Advertisement
ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕೃಷ್ಣಾ ಜಲನಿಧಿಗೆ ಬಾಗಿನ ಅರ್ಪಣೆಗೂ ಮುನ್ನ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿಯೇ ಬೃಹತ್ ನೀರಾವರಿ ಯೋಜನೆಗಳಲ್ಲೊಂದಾದ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾಗಿ ಅರ್ಧ ಶತಮಾನ ಕಳೆದರೂ ಕೂಡ ಇನ್ನೂವರೆಗೆ ಯೋಜನೆ ಪೂರ್ಣಗೊಳ್ಳದಿರಲು ರಾಜ್ಯವನ್ನಾಳಿದ ಸರ್ಕಾರಗಳೇ ಕಾರಣವಾಗಿವೆ. ಉತ್ತರ ಕರ್ನಾಟಕದ ಸಮಗ್ರ ನೀರಾವರಿಗಾಗಿಯೇ ಯೋಜಿಸಲಾದ ಯೋಜನೆ ಇನ್ನೂವರೆಗೆ ಪೂರ್ಣಗೊಳ್ಳದಿರುವುದರಿಂದ ಹಾಗೂ ಸಕಾಲಿಕವಾಗಿ ಸಮರ್ಪಕ ಮಳೆ ಸುರಿಯದಿರುವುದರಿಂದ ರೈತಾಪಿ ವರ್ಗ ತೀವ್ರ ತೊಂದರೆಗೀಡಾಗುವಂತಾಗಿದೆ ಎಂದರು.
ಸಂಗ್ರಹವಾಗುವ ಕಾವೇರಿ ಬಗ್ಗೆ ಇರುವ ಕಾಳಜಿಯನ್ನು ಬೃಹತ್ ನೀರಾವರಿ ಯೋಜನೆ ಕೃಷ್ಣೆಗೂ ಆದ್ಯತೆ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಂಡು ಇದರ ಲಾಭ ರೈತರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು. ರೈತ ಮುಖಂಡ ಪಂಚಪ್ಪ ಕಲುºರ್ಗಿ ಮಾತನಾಡಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಈ ಭಾಗ ಸಂಪೂರ್ಣ ನೀರಾವರಿಯಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೇ ಒಂದೇ ಧ್ವನಿಯಲ್ಲಿ ಸರ್ಕಾರವನ್ನು ಪಕ್ಷಾತೀತವಾಗಿ ಎಚ್ಚರಿಸಬೇಕು ಎಂದರು. ಸಾನ್ನಿಧ್ಯವಹಿಸಿದ್ದ ನಿಡಗುಂದಿ ರುದ್ರಮುನಿ ಸ್ವಾಮೀಜಿ ಮಾತನಾಡಿ, ರೈತರು ಜಾಗೃತರಾಗಿ ನೀರು ಹಾಗೂ ಮಣ್ಣು ಬಳಕೆ ಬಗ್ಗೆ ಅರಿತುಕೊಂಡು ನಡೆಯಬೇಕು ಹಾಗೂ ಜಾನುವಾರುಗಳ ಸಾಕಣೆಯಿಂದ ಹಲವಾರು ಬಗೆಯಲ್ಲಿ ಲಾಭಗಳಿವೆ ಎಂದರು.
Related Articles
Advertisement
ಪೂಜಾ ಕೈಂಕರ್ಯವನ್ನು ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಾಮಾಚಾರಿ ಚಿಮ್ಮಲಗಿ ಹಾಗೂ ಶ್ರೀಶೈಲಯ್ಯ ಹಿರೇಮಠ ನಡೆಸಿಕೊಟ್ಟರು. ಸಾಹಿತಿ ಅರವಿಂದ ಕೊಪ್ಪ, ಅಶೋಕ ಹಂಚಲಿ, ದಸ್ತಗೀರ ಸಾಲೋಡಗಿ, ಶಾಂತಪ್ಪ ಮನಗೂಳಿ, ಸಿದ್ದಲಿಂಗಚೌಧರಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಅಂದಾನಿ ತೋಳಮಟ್ಟಿ, ರಮೆಶ ಆಲಮಟ್ಟಿ, ರಾಮುಜಗತಾಪ, ಮಕಬುಲ ಬಾಗವಾನ, ರಾಜು ಬೋರಣ್ಣವರ, ಪ್ರಕಾಶ ಕಾರಕೂನ, ನಿಂಗರಾಜ ಆಲೂರ, ಲಕ್ಷ್ಮೀ ದೇಸಾಯಿ, ವಿಜಯಾ ಮುಚ್ಚಂಡಿ, ವಿದ್ಯಾವತಿ ಪಟ್ಟಣಶೆಟ್ಟಿ, ಲಕ್ಷ್ಮೀ ಸಜ್ಜನ ಸೇರಿದಂತೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ವಡವಡಗಿ, ಯರಝರಿ, ಯಲಗೂರ, ಕಾಳಗಿ, ಬಳಬಟ್ಟಿ ಗ್ರಾಮಗಳ ರೈತರು ಭಾಗವಹಿಸಿದ್ದರು.