Advertisement

ಕವಲುದಾರಿ ಫ‌ಸ್ಟ್‌ ಲುಕ್‌ ರಿಲೀಸ್‌

04:17 PM Jun 22, 2017 | |

ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ಹೊಂಬಾಳೆ ಫಿಲಂಸ್‌ ಜತೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ. ಆ ಚಿತ್ರವನ್ನು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನಿರ್ದೇಶಿಸಿದ್ದ ಹೇಮಂತ್‌ ರಾವ್‌ ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು.

Advertisement

ಈ ಮೊದಲು “ಅರ್ಧಸತ್ಯ’ ಎಂದು ನಾಮಕರಣ ಮಾಡಿದ್ದ ಚಿತ್ರದ ಶೀರ್ಷಿಕೆ “ಕವಲು ದಾರಿ’ ಎಂದು ಬದಲಾಗಿದ್ದು ಗೊತ್ತೇ ಇದೆ. ಈಗ “ಕವಲು ದಾರಿ’ ಚಿತ್ರತಂಡದಿಂದ ಹೊಸದೊಂದು ಸುದ್ದಿ ಬಂದಿದೆ. ಅದೇನೆಂದರೆ, ಚಿತ್ರದ ನಾಯಕ ರಿಷಿ ಅವರ ಫ‌ಸ್‌ ಲುಕ್‌ ಬಿಡುಗಡೆಯಾಗಿದೆ. ಹೌದು, ಪೊಲೀಸ್‌ ಅಧಿಕಾರಿಯ ಗೆಟಪ್‌ನಲ್ಲಿರುವ ಹೀರೋ ಮನೀಶ್‌ ಈ ರೀತಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಮನೀಶ್‌ ರಿಷಿ ಅವರು ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಎಂದಷ್ಟೇ ಗೊತ್ತಾಗಿದೆ. ಉಳಿದ ವಿಷಯಗಳಾÂವೂ ಗೊತ್ತಿಲ್ಲ.ಅಂದಹಾಗೆ, “ಕವಲು ದಾರಿ’ ಶೀರ್ಷಿಕೆಯಡಿ ನಿರ್ದೇಶಕ ಹೇಮಂತ್‌ರಾವ್‌ ಚಿತ್ರದಲ್ಲಿ ಏನೆಲ್ಲಾ ಹೇಳಲು ಹೊರಟಿದ್ದಾರೆ ಅನ್ನೋದು ಸಸ್ಪೆನ್ಸ್‌. 

Advertisement

Udayavani is now on Telegram. Click here to join our channel and stay updated with the latest news.

Next