Advertisement

ಕಾಲಿನ ಮೂಲಕ SSLC ಪರೀಕ್ಷೆ ಬರೆದು ಗಮನಸೆಳೆದಿದ್ದ ಕೌಶಿಕ್ ನ ಇನ್ನೊಂದು Video Viral

02:05 PM Aug 23, 2020 | sudhir |

ಬಂಟ್ವಾಳ : ಕಾಲಿನ ಮೂಲಕ ಎಸ್.ಎಸ್‌.ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಬಂಟ್ವಾಳ ದ ಕೌಶಿಕ್ ಚೌತಿಯ ದಿನದಂದು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟುತ್ತಿತರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಬಂಟ್ವಾಳ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ ಯನ್ನು ಕಾಲಿನ ಬೆರಳಿನ ಸಹಾಯದಿಂದ ಬರೆದಿದ್ದ, ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಮೆಚ್ಚುಗೆ ಯ ಮಾತುಗಳನ್ನು ಪಡೆದಿದ್ದ.

ಕಾಲಿನ ಮೂಲಕ ಪರೀಕ್ಷೆ ಬರೆದ ಕೌಶಿಕ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ. ಸಾಂಸ್ಕೃತಿಕ , ಸಾಹಿತ್ಯ ಹಾಗೂ ಆಟೋಟ ಸ್ಪರ್ಧೆಯಲ್ಲಿ ಮುಂದಿರುವ ಈತ ಪ್ರತಿ ವರ್ಷ ಅಷ್ಟಮಿ ಮತ್ತು ಚೌತಿಯ ದಿನದಂದು ಮನೆಯಲ್ಲಿ ಕೊಟ್ಟಿಗೆ ತಿಂಡಿ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಟ್ಟುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.

ಹುಟ್ಟಿನಿಂದಲೇ ಎರಡು ಕೈಗಳಲ್ಲಿದ ಕೌಶಿಕ್ ಯಾರಿಗೂ ಕಮ್ಮಿ ಯೂ ಇರದ ರೀತಿಯಲ್ಲಿ ಸಾಧನೆ ಮಾಡಿದ ಮಾಹಪೋರ.
ಈತನ ಮುಂದಿನ ಸಂಪೂರ್ಣ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next