Advertisement

ಕಾಪು: ಯುವಕರಿಬ್ಬರ “ಗೋ ಹಿಮಾಲಯನ್‌’ಬೈಕ್‌ ಯಾತ್ರೆಗೆ ಚಾಲನೆ

06:10 AM Jul 28, 2018 | Team Udayavani |

ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹೊರಟ ಈ ಬೈಕ್‌ ಯಾತ್ರೆಯು ಜು. 28ರಂದು ಮಹಾರಾಷ್ಟ್ರದ ಸತಾರಾ ಮೂಲಕ ಮುಂಬಯಿ ತಲುಪಲಿದೆ. ಆ ಬಳಿಕ ಮಧ್ಯಪ್ರದೇಶದ ಇಂದೋರ್‌, ಉತ್ತರ ಪ್ರದೇಶದ ಜಾನ್ಸಿ, ಲಕೌ°, ನೇಪಾಳದ ಸನೌಲಿ, ಕಾಠ್ಮಂಡು, ಭೂತಾನ್‌ನ ತಿಂಪು, ಅಸ್ಸಾಂನ ಗುವಾಹಟಿ, ನಾಗಲ್ಯಾಂಡ್‌ನ‌ ಕೊಹಿಮಾ, ಮಣಿಪುರದ ಇಂಫಾಲ್‌, ಮೇಘಾಲಯದ ಶಿಲ್ಲಾಂಗ್‌, ಪಶ್ಚಿಮ ಬಂಗಾಲದ ಸಿಲಿಗುರಿ, ಕೋಲ್ಕತ್ತಾ, ಒರಿಸ್ಸಾದ ಪುರಿ, ಆಂಧ್ಯಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ರಾಜ್ಯದ ಬೆಂಗಳೂರು, ಮಂಗಳೂರು ಮೂಲಕ ಕಾಪು ತಲುಪಲಿದ್ದಾರೆ. ಒಟ್ಟು 40 ದಿನಗಳ ಈ ಯಾತ್ರೆಯಲ್ಲಿ 13,560 ಕಿಮೀ. ದೂರವನ್ನು ಈ ಸಾಹಸಿಗರು ಕ್ರಮಿಸಲಿದ್ದಾರೆ.

Advertisement

ಕಾಪು: ಭಾರತ, ನೇಪಾಳ, ಭೂತಾನ್‌ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಆಧ್ಯಯನ ನಡೆಸಲು ಶುಕ್ರವಾರ ಬೆಳಗ್ಗೆ ಕಾಪುವಿನಿಂದ ಖ್ಯಾತ ಛಾಯಾಗ್ರಾಹಕ ಸಚಿನ್‌ ಶೆಟ್ಟಿ ಮತ್ತು ಆತನ ಮಿತ್ರ ಅಭಿಷೇಕ್‌ ಶೆಟ್ಟಿ ಜತೆಗೂಡಿ ಆರಂಭಿಸಿರುವ “ಗೋ ಹಿಮಾಲಯನ್‌’ ಎಂಬ ಬೆ„ಕ್‌ ಯಾತ್ರೆಗೆ ಕಾಪುವಿನ ಹೊಸ ಮಾರಿಯಮ್ಮ ದೇವಸ್ಥಾನದ ಎದುರಿನಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್‌ ಚಾಲನೆ ನೀಡಿದರು.

ಶಾಸಕ ಲಾಲಾಜಿ ಮೆಂಡನ್‌ ಮಾತ ನಾಡಿ, ಕಾಪುವಿನ ಈ ಇಬ್ಬರು ಯುವಕರ ಸಾಧನೆ  ರಾಷ್ಟ್ರಕ್ಕೆ ಮಾದರಿಯಾಗಲಿ. ಈ ಯಾತ್ರೆಯ ಇನ್ನಷ್ಟು ಯುವಕರಿಗೆ  ಪ್ರೇರಣೆಯಾಗಲಿ ಎಂದರು. ಸಚಿನ್‌ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌, ಅಭಿಷೇಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬೆ„ಕ್‌ಗಳಲ್ಲಿ ತಮ್ಮ ಪ್ರಯಾಣ ಬೆಳೆಸಿದ್ದಾರೆ. 

ಕಳೆದ ವರ್ಷ ಸಾಕ್ಷ್ಯ ಚಿತ್ರ ನಿರ್ಮಿಸಲು ಸಚಿನ್‌ ಶೆಟ್ಟಿ ಏಕಾಂಗಿಯಾಗಿ ವಿವಿಧ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿ ಬಗ್ಗೆ ಕುರಿತ ಅಧ್ಯಯನ ನಡೆಸಲು “ಲೈಟ್ಸ್‌ ಕೆಮರಾ ಲಡಾಕ್‌ ಟೂರ್‌’ ಎಂಬ ಹೆಸರಿನಲ್ಲಿ 11,000 ಕಿ.ಮೀ. ಲಡಾಕ್‌ವರೆಗೆ ಬೈಕ್‌ ಯಾತ್ರೆ ನಡೆಸಿ ಗಮನಸೆಳೆದಿದ್ದರು. 

ಇದೀಗ ಬಾಲ್ಯದ ಸ್ನೇಹಿತ ಅಭಿಷೇಕ್‌ ಶೆಟ್ಟಿ ಜತೆಗಿದ್ದಾರೆ. ಅದ್ದರಿಂದ ಇನ್ನಷ್ಟು ವಿಷಯ ಸಂಗ್ರಹಣೆ ಮಾಡಲು ಅನುಕೂಲ ಆಗಲಿದೆ. ಭಾರತ, ನಾಪಾಳ, ಭೂತಾನ್‌ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ  ಬಗ್ಗೆ ಆಧ್ಯಯನ ನಡೆಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ಯಾತ್ತೆಗೆ ಸುಮಾರು  2.5ಲಕ್ಷ ರೂ., ಖರ್ಚಾಗಲಿದ್ದು, ಇದಕ್ಕೆ ಹಲವು ಮಂದಿ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಯಾತ್ರೆಯ ಸಂಪೂರ್ಣ ಚಿತ್ರಿಕರಣ ಮಾಡಲಿದ್ದು, ಚಿತ್ರೀಕರಣಗೊಳಿಸಿದ ಈ  ವೀಡಿಯೋವನ್ನು ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದೇವೆ.  ಅಲ್ಲಲ್ಲಿ ನಮ್ಮ ಮಿತ್ರರು ನಮ್ಮೊಂದಿಗೆ ಜತೆಗೂಡಲಿದ್ದಾರೆ ಎಂದು ಸಚಿನ್‌ ಶೆಟ್ಟಿ ಹೇಳಿದ್ದಾರೆ. 

Advertisement

ಸಚಿನ್‌ ಶೆಟ್ಟಿಯವರು ಅತ್ಯತ್ತಮ ಛಾಯಾ ಚಿತ್ರಗ್ರಾಹಕನಾಗಿದ್ದು, ಸೌತ್‌ ಕೆನರಾ ಫೊಟೊಗ್ರಾಫರ್ ಅಸೋಶಿಯೇಶನ್‌ನ ಕಾಪು ವಲಯದ ಸಕ್ರಿಯ ಸದಸ್ಯ. ಕನ್ನಡ ಹಾಗೂ ತುಳು ಚಲನ ಚಿತ್ರಕ್ಕೂ ಛಾಯಾಚಿತ್ರಗ್ರಹಣ ಮಾಡಿದ್ದು, ಇತ್ತೀಚೆಗೆ ಬಿಡುಗಡೆ ಆದ ಅಮ್ಮೆರ್‌ ಪೊಲೀಸ್‌ ಚಿತ್ರ ಅವರಿಗೆ ಉತ್ತಮ ಹೆಸರು ತಂದು ಕೊಟ್ಟದೆ. ಹವ್ಯಾಸಿ ಬೈಕ್‌ ರೈಡರ್‌ ಆಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಸಚಿನ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾಪು ಪಿಎಸ್‌ಐ ನಿತ್ಯಾನಂದ ಗೌಡ, ಸೌತ್‌ ಕೆನರಾ ಫೋಟೊಗ್ರಾಫರ್ ಅಸೋಶಿಯೇಶನ್‌ನ ಕಾಪು ವಲಯದ ಅಧ್ಯಕ್ಷ ಉದಯ ಪೂಜಾರಿ ಮುಂಡ್ಕೂರು, ಕಾರ್ಯದರ್ಶಿ ವೀರೇಂದ್ರ ಶಿರ್ವ, ಕೋಶಾಧಿಕಾರಿ ಸಂತೋಷ್‌ ಕಾಪು, ಶ್ರೀಧರ ಶೆಟ್ಟಿಗಾರ, ಪ್ರವೀಣ್‌ ಕುರ್ಕಾಲು, ಸಚಿನ್‌ ಉಚ್ಚಿಲ, ರವಿ ಕಟಪಾಡಿ ಮತ್ತು ಸದಸ್ಯರು, ಸಚಿನ್‌ ಹಾಗೂ ಅಭಿಷೇಕ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next