Advertisement
ಬ್ರಹ್ಮಾವರ ತಾಲೂಕು ಕೂಡಾ ಈ ಬಗ್ಗೆ ಪ್ರಕಟನೆ ಹೊರಡಿಸಿದೆ. ಪೌತಿ ಅದಾಲತ್‌ಗೆ ವಂಶವೃಕ್ಷ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ವಂಶವೃಕ್ಷ ನೀಡಲು ಗ್ರಾಮ ಕರಣಿಕರು ಕಡಿಮೆಯೆಂದರೆ 7-15 ದಿನಗಳ ನೊಟೀಸು ನೀಡಬೇಕಾಗುತ್ತದೆ. ವಂಶವೃಕ್ಷ ಅನುಮೋದನೆಗೆ ಆನ್‌ಲೈನ್‌ನಲ್ಲಿ 14 ದಿನ ಬೇಕು. ಇದಕ್ಕಾಗಿ ಜನರು ದಾಖಲೆಗಳನ್ನು ಸಂಗ್ರಹಿಸಲೂ ಸಮಯಾವಕಾಶ ಬೇಕು. ಇದು ಅರ್ಜಿ ಸಲ್ಲಿಕೆ ದಿನದಿಂದ ಅನುಕ್ರಮವಾಗಿ ಅನುಮೋದನೆ ಮಾಡುವಂಥದ್ದು,ಆದರೆ ವಿಪರ್ಯಾಸವೆಂದರೆ ವಂಶವೃಕ್ಷವನ್ನು ಕಡ್ಡಾಯವಾಗಿಸಿದ ಪೌತಿ ಆಂದೋಲನಕ್ಕೆ ಅರ್ಜಿ ಸಲ್ಲಿಸಲು 8 ದಿನದ ಕಾಲಾವಕಾಶ ಮಾತ್ರವೇ ಇದೆ.ಇದರಲ್ಲಿ 2 ದಿನ ಈಗಾಗಲೇ ಕಳೆದಿದೆ.
Related Articles
Advertisement
ತಾ. ಆಡಳಿತ ಅದಾಲತ್‌ಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿ ಜನೋಪಯೋಗಿಯಾಗಿ ಮತ್ತು ಪರಿಣಾಮಕಾರಿಯಾಗಿ ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಅಥವಾ ಗ್ರಾಮ ಕರಣಿಕರು, ಕಂದಾಯ ಪರಿವೀಕ್ಷಕರು ಪೌತಿದಾರರ ವಂಶವೃಕ್ಷವನ್ನು ಹೇಳಿಕೆ ಮಹಜರಿನ ಆಧಾರದಲ್ಲಿ ಸ್ಥಳದಲ್ಲೇ ದೃಢೀಕರಿಸುವ ಈ ಹಿಂದಿನ ಕ್ರಮವನ್ನು ಮತ್ತೆ ಆರಂಭಿಸಬೇಕು, ಇದರಿಂದ ಗ್ರಾಮೀಣ ಭಾಗದ ನಾಗರಿಕರ ವರುಷಗಳಿಂದ ಬಾಕಿಯುಳಿದ ಹಲವಾರು ಪ್ರಕರಣಗಳನ್ನು ಬಗೆಹರಿಸಿದಂತಾಗುತ್ತಿದೆ ಮತ್ತು ಪೌತಿ ಆಂದೋಲನವು ಕೂಡಾ ಯಶಸ್ವಿಯಾಗುತ್ತದೆ.
ಜನ ಜಾಗೃತಿಗಾಗಿ ಪೌತಿ ಆಂದೋಲನ: ಪೌತಿ ಆಂದೋಲನಕ್ಕೆ ಯಾವುದೇ ಸೀಮಿತ ಕಾಲಮಿತಿ ಇಲ್ಲ.ಪೂರಕ ದಾಖಲೆಗಳೊಂದಿಗೆ ಜನರು ಯಾವುದೇ ಸಮಯದಲ್ಲಿ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಬಹುದು. ಜಾಗ ಹಿರಿಯರ ಹೆಸರಿನಲ್ಲೇ ಇದ್ದು ,ಜನರು ಅದನ್ನು ಗಮನಿಸಲು ಹೋಗುವುದಿಲ್ಲ.ಹಿರಿಯರ ಹೆಸರಿನಲ್ಲಿರುವ ಜಾಗವನ್ನು ತಮ್ಮ ಹೆಸರಿನಲ್ಲಿ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆದ್ಯತೆಯ ಮೇರೆಗೆ ಜ. 1 ರಿಂದ 8ರ ವರೆಗೆ ಪೌತಿ ಆಂದೋಲನ ನಡೆಸ ಲಾಗುತ್ತಿದೆ. ಎಲ್ಲಾ ಪೌತಿಗಳನ್ನು ಮುಗಿಸಿಬಿಡುವ ಲೆಕ್ಕದಲ್ಲಿ ಆಂದೋಲನ ಪ್ರಾರಂಭಿಸಲಾಗಿದ್ದು, ಮುಂದೆಯೂ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿಗದಿತ ಸಮಯದಲ್ಲಿ ಜನರಿಗೆ ಸಂತತಿ ನಕ್ಷೆ ,ಮರಣಪ್ರಮಾಣ ಪತ್ರ ತರಲು ಕಷ್ಟವಾಗುತ್ತಿದೆ. ವಂಶವೃಕ್ಷ, ಮರಣ ಪ್ರಮಾಣಪತ್ರ,ಹೇಗೆ ಹಕ್ಕು ಬಂತು,ಆಧಾರ್ ಕಾರ್ಡ್ ಮತ್ತಿತರ ಪೂರಕ ದಾಖಲೆ ನೀಡಿದರೆ ಕೂಡಲೇ ಪೌತಿ ಖಾತೆಯಾಗುತ್ತದೆ. ಸರಿಯಾದ ಮಾಹಿತಿ ನೀಡದಿದ್ದರೆ ವಿಳಂಬವಾಗುತ್ತದೆ.-ಡಾ| ಪ್ರತಿಭಾ .ಆರ್. ಕಾಪು ತಹಶೀಲ್ದಾರ್
-ಸತೀಶ್ಚಂದ್ರ ಶೆಟ್ಟಿ