Advertisement

Kaup ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ; ಶಿರ್ವ ಗ್ರಾಮ ಸಮಿತಿ ರಚನಾ ಸಭೆ

09:08 AM Aug 01, 2023 | Team Udayavani |

ಶಿರ್ವ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾಪು ಕ್ಷೇತ್ರದ ಶಿರ್ವ ಗ್ರಾಮ ಸಮಿತಿ ರಚನಾ ಸಭೆಯು ಶಿರ್ವದ ಹೊಟೇಲ್‌ ಶಾಮ್ಸ್‌ ಸ್ಕ್ಡೇರ್‌ ಸಭಾಂಗಣದಲ್ಲಿ ಜು. 29ರಂದು ನಡೆಯಿತು.

Advertisement

ಗ್ರಾಮದ 9 ಜನ ಮಹಿಳೆಯರು ಶ್ರೀ ದೇವಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಲಕ್ಷಾಂತರ ಭಕ್ತರ ಭಕ್ತಿಯ ತಾಣ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ನಡೆಸುವ ಕಾರ್ಯ ಚರಿತ್ರೆಗೆ ಸೇರುವಂತಾಗಿದ್ದು, ವಿಶ್ವದ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರಿರುವಂತೆ ಪ್ರಧಾನ ಸಮಿತಿಯ ಸಂಕಲ್ಪವಾಗಿದ್ದು, ಬೇರೆ ಬೇರೆ ಗ್ರಾಮಗಳ ಸಮಿತಿ ರಚಿಸಲಾಗಿದೆ. ಅದರಂತೆ ಶಿರ್ವ ಗ್ರಾಮ ಸಮಿತಿಯ ರಚನೆ ಮಾಡಲಾಗಿದ್ದು, ಭಕ್ತರು ಅಮ್ಮನ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಭಿವೃದ್ಧಿ ಸಮಿತಿಯ ವಿಜ್ಞಾಪನಾ ಪತ್ರವನ್ನು ಸಾಂಕೇತಿಕವಾಗಿ ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್‌ ಕುಮಾರ್‌ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

Advertisement

ಕ್ಷೇತ್ರ ಗ್ರಾಮ ಸಮಿತಿಯ ಸಂಚಾಲಕ ಅರುಣ್‌ ಶೆಟ್ಟಿ ಪಾದೂರು ಗ್ರಾಮ ಸಮಿತಿ ರಚನೆಯ ಬಗ್ಗೆ ಮಾಹಿತಿ ನೀಡಿದರು. ಶಿರ್ವ ಗ್ರಾಮ ವ್ಯಾಪ್ತಿಯ ಪುರುಷರ ಮತ್ತು ಮಹಿಳೆಯರ ಗ್ರಾಮ ಸಮಿತಿ ರಚಿಸಲಾಯಿತು.

ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್‌ ವಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧ‌ವ ಆರ್‌. ಪಾಲನ್‌, ಕಾಪು ಪುರಸಭೆ ವ್ಯಾಪ್ತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ ಆಚಾರ್ಯ, ಶಿರ್ವ ಬಂಟರ ಸಂಘದ ಅಧ್ಯಕ್ಷ ವೀರೆಂದ್ರ ಶೆಟ್ಟಿ ಪಂಜಿಮಾರು, ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಟ್ಠಲ ಅಂಚನ್‌, ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌, ಶಿರ್ವ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಶಿರ್ವ ಕೋಡು ಸದಾನಂದ ಶೆಟ್ಟಿ, ಹಿರಿಯರಾದ ಸುಂದರ ಶೆಟ್ಟಿ, ಉದ್ಯಮಿ ಸುಧೀರ್‌ ಶೆಟ್ಟಿ ಅಟ್ಟಿಂಜೆ,ರಾಜೇಶ್‌ ನಾಯ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಸೊರ್ಕಳ ಸಚ್ಚಿದಾನಂದ ಹೆಗ್ಡೆ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next