Advertisement

ಜೀರ್ಣೋದ್ಧಾರಕ್ಕೆ ನಿಧಿ ಕುಂಭ ಸ್ಥಾಪನೆ

12:30 AM Jan 24, 2019 | Team Udayavani |

ಕಾಪು: ಮಾರಿಯಮ್ಮ ಎಂದರೆ ಊರಿಗೆ ಬರುವ ಸಕಲ ದುರಿತಗಳನ್ನು ದೂರ ಮಾಡುವ ಮತ್ತು ದುರ್ಜನರನ್ನು ಶಿಕ್ಷಿಸಿ, ಸಜ್ಜನರನ್ನು ರಕ್ಷಿಸುವ ಶಕ್ತಿ ಎಂದರ್ಥ. ಮಾರಿಯಮ್ಮನ ಸನ್ನಿಧಾನ ಜೀರ್ಣೋದ್ಧಾರದ ಮೂಲಕ ಕರಾವಳಿ ಜಿಲ್ಲೆ, ರಾಜ್ಯಕ್ಕೆ ಅಂಟಿರುವ ದೋಷ ನಿವಾರಣೆಯಾಗಲಿ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Advertisement

35 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಳ್ಳಲಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬುಧವಾರ ನೂತನ ಗರ್ಭಗುಡಿಗೆ ನಿಧಿ ಕುಂಭ ಸ್ಥಾಪನೆ ಮಾಡಿ, ಉಚ್ಛಂಗಿ ಗುಡಿ ನಿರ್ಮಾಣಕ್ಕೆ ನವರತ್ನ ಸಮರ್ಪಿಸಿ ಅವರು ಆಶೀರ್ವಚನ ನೀಡಿದರು.

ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್‌. ಶೆಟ್ಟಿ ಮಾತನಾಡಿ, ದೇವಸ್ಥಾನದ ನಿರ್ಮಾಣದಲ್ಲಿ ಪಾಲ್ಗೊಳ್ಳುವುದು ಸೌಭಾಗ್ಯ ಎಂದರು. ಜೀರ್ಣೋದ್ಧಾರ ಕಾರ್ಯಗಳಿಗೆ ಮೂಲ ದೇಣಿಗೆಯಾಗಿ ನನ್ನ ತಾಯಿಯಸ್ಮರಣಾರ್ಥ 99,99,999 ರೂ. ದೇಣಿಗೆ ನೀಡುತ್ತೇನೆ ಎಂದು ಘೋಷಿಸಿದರು.

ಶಾಸಕ ಲಾಲಾಜಿ ಆರ್‌. ಮೆಂಡನ್‌ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರದ ಆರ್ಥಿಕ ಸಮಿತಿ, ಮುಂಬಯಿ ಹಾಗೂ ಬೆಂಗಳೂರು ಸಮಿತಿಗಳ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಸುರೇಶ್‌ಶೆಟ್ಟಿ ಗುರ್ಮೆ, ರವಿ ಸುಂದರ ಶೆಟ್ಟಿ, ಎಂ.ಆರ್‌.ಜೆ. ಗ್ರೂಪ್‌ನ ಪ್ರಕಾಶ್‌ ಶೆಟ್ಟಿಯವರಿಗೆ ಪ್ರಸಾದ ನೀಡಿ ಜವಾಬ್ದಾರಿ ವಹಿಸಿ ಕೊಡಲಾಯಿತು.

ಸಂಸದೆ ಶೋಭಾ ಕರಂದ್ಲಾಜೆ, ಮಾಜಿಸಚಿವ ವಿನಯಕುಮಾರ್‌ ಸೊರಕೆ, ಶಾಸಕ ವಿ. ಸುನಿಲ್‌ ಕುಮಾರ್‌, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ಎಸ್‌ಪಿ ಲಕ್ಷ್ಮಣ್‌ ಬ. ನಿಂಬರಗಿ, ರಾಜ್ಯ ಧಾರ್ಮಿಕ ಪರಿಷತ್‌ನ ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ಅತಿಥಿಗಳಾಗಿದ್ದರು.

Advertisement

ಉದ್ಯಮಿಗಳಾದ ಸುಧಾಕರ ಹೆಗ್ಡೆ, ಸುಧೀರ್‌ ವಿ. ಶೆಟ್ಟಿ, ಸುರೇಶ್‌ ಶೆಟ್ಟಿ ಗುರ್ಮೆ, ಬಾವುಗುತ್ತು ಸಚ್ಚಿದಾನಂದ ಶೆಟ್ಟಿ, ಗಣ್ಯರಾದ ಕೆ.ಪಿ. ಆಚಾರ್ಯ, ಡಾ| ಪ್ರಭಾಕರ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಮಲ್ಲಾರುಗುತ್ತು, ನಡಿಕೆರೆ ರತ್ನಾಕರ ಶೆಟ್ಟಿ, ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಮೋಹನ್‌ ಬಂಗೇರ, ಅನಿಲ್‌ ಬಲ್ಲಾಲ್‌ ಕಾಪು ಬೀಡು, ಮಾರಿಗುಡಿ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ನಿರ್ಮಲ್‌ ಕುಮಾರ್‌ ಹೆಗ್ಡೆ ಸ್ವಾಗತಿಸಿ, ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಉಪನ್ಯಾಸಕ ಶಿವಣ್ಣ ಬಾಯರ್‌ ಮತ್ತು ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರ್ವಹಿಸಿದರು.

99 ಮಂದಿ ಏಕಕಾಲದಲ್ಲಿ ದ್ವೀಪ ಪ್ರಜ್ವಲನೆ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಉಪಸ್ಥಿತಿಯಲ್ಲಿ ನಿಧಿಕುಂಭ ಸ್ಥಾಪನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next