ಮುಂಬಯಿ:ಕಾಪು ಮೊಗವೀರ ಸಭಾ ಮುಂಬಯಿ ಇದರ ವಾರ್ಷಿಕ ಮಹಾಸಭೆಯ ಫೆ. 17ರಂದು ಬೆಳಗ್ಗೆ 9.30ರಿಂದ ಸಾಕಿನಾಕಾದ ಮೆಟ್ರೋ ಸ್ಟೇಷನ್ ಬಳಿ ಇರುವ ಸಭಾದ ಕಾರ್ಯಾಲಯದಲ್ಲಿ ಸತೀಶ್ ಕುಮಾರ ಎನ್. ಕರ್ಕೇರ ಅಧ್ಯಕ್ಷತೆಯಲ್ಲಿ ಜರಗಿತು.
ಆರಂಭದಲ್ಲಿ ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜತೆ ಕಾರ್ಯದರ್ಶಿ ರೂಪೇಶ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಎಸ್. ಸಾಲ್ಯಾನ್ ಮತ್ತು ಕೋಶಾಧಿಕಾರಿ ಸುಕುಮಾರ್ ಕರ್ಕೇರ ಅವರು ಕ್ರಮವಾಗಿ ಮಹಾಸಭಾ ಹಾಗೂ ಅದರ ಸಂಚಾಲಕತ್ವದಲ್ಲಿರುವ ಮೊಗವೀರ ಸದಸ್ಯರ ಸಹಾಯಕ ಸಂಘದ ಹಿಂದಿನ ವರ್ಷದ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಬಳಿಕ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯಲ್ಲಿ ಕಾಪು ಪಡುಗ್ರಾಮದಲ್ಲಿ ಮಾಡುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಅದಕ್ಕಾಗಿ ಶಾಶ್ವತ ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಸದಸ್ಯರ ಪರವಾಗಿ ಡಿ. ಎಲ್. ಅಮೀನ್, ವಿಶ್ವನಾಥ ಕೋಟ್ಯಾನ್, ಸೋಮನಾಥ ಕರ್ಕೇರ, ಪುರುಷೋತ್ತಮ ಎಲ್. ಪುತ್ರನ್, ಲೋಕೇಶ್ ಎಂ. ಕರ್ಕೇರ, ನೀಲಾಧರ ಎಂ. ಸಾಲ್ಯಾನ್, ಮೋಹನ್ ಮೆಂಡನ್, ರಮೇಶ್ ಎಂ. ಬಂಗೇರ, ರಮೇಶ್ ಟಿ. ಮೆಂಡನ್, ಸುಕುಮಾರ್ ಮೆಂಡನ್, ಆನಂದ ಕೋಟ್ಯಾನ್ ಅವರು ಮಾತನಾಡಿ ಸಂಘದ ಪ್ರಗತಿಯ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಭೆಗೆ ಹೊಸ ಸದಸ್ಯರಾಗಿ ಸೇರಿಕೊಂಡ ವಿನೀತ್ ಕೋಟ್ಯಾನ್ ಮತ್ತು ಯತೀಶ್ ಕೋಟ್ಯಾನ್ ಅವರನ್ನು ಸ್ವಾಗತಿಸಲಾಯಿತು. ಸತೀಶ್ ಕುಮಾರ್ ಎನ್. ಕರ್ಕೇರ ಅವರು ಮಾತನಾಡಿ, ಅಧಿಕ ಸಂಖ್ಯೆಯಲ್ಲಿ ಹಾಜರಿರುವ ಸದಸ್ಯರನ್ನು ಕಂಡು ಸಂತೋಷವಾಗುತ್ತಿದೆ. ಸಭೆಯು ಸಮಾಜಪರ ಸೇವೆಯು ನಿರಂತರವಾಗಿ ಮುಂದುವರಿಯುವಂತೆ ಮಾಡಲು ಸರ್ವ ಸದಸ್ಯರು ಸಹಕರಿಸಬೇಕು. ಸಭೆಯು ಮಹಿಳಾ ವಿಭಾಗವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.
ಲೇಖಕ, ನಾಟಕಕಾರ ಕಾಪು ಮಹಾಸಭಾ ಇದರ ಲೆಕ್ಕ ಪರಿಶೋಧಕ ಸೋಮನಾಥ ಎಸ್. ಕರ್ಕೇರ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ರೂಪೇಶ್ ಸುವರ್ಣ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.