Advertisement

Kaup: ರಕ್ಷಣಾಪುರ ಜವನೆರ್ ವತಿಯಿಂದ ಕಾಪು ಪಿಲಿ ಪರ್ಬ ಸ್ಪರ್ಧೆ ಉದ್ಘಾಟನೆ

06:52 PM Oct 11, 2024 | Team Udayavani |

ಕಾಪು : ರಕ್ಷಣಾಪುರ ಜವನೆರ್ ಕಾಪು ಸಾರಥ್ಯದಲ್ಲಿ ದಸರಾ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಎರಡನೇ ವರ್ಷದ ಕಾಪು ಪಿಲಿ ಪರ್ಬ ಸ್ಪರ್ಧೆಯನ್ನು ಸರ್ವಧರ್ಮೀಯ ಧಾರ್ಮಿಕ ಮುಖಂಡರುಗಳು ಉದ್ಘಾಟಿಸಿದರು. ‌

Advertisement

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ರಕ್ಷಣಾಪುರ ಕಾಪು ಎಲ್ಲರನ್ನೂ ರಕ್ಷಿಸಿ, ಕಾಪಾಡುವ ಊರು. ಇಲ್ಲಿನ‌ ಯುವಕರನ್ನು ಸಂಘಟಿಸಿಕೊಂಡು ತುಳುನಾಡಿನ ಪರಂಪರೆ, ನಂಬಿಕೆ, ದೈವಾರಾಧನೆ, ಯಕ್ಷಗಾನ, ಜನಪದ, ಸಾಹಿತ್ಯ, ಕಲೆಯನ್ನು ಅನಾವರಣಗೊಳಿಸುವುದಕ್ಕಾಗಿ ಕಾಪು ಪಿಲಿ ಪರ್ಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ತಂತ್ರಿ ಜ್ಯೊತಿಷ್ಯ ವಿದ್ವಾನ್ ಕೆ. ಪಿ. ಶ್ರಿನಿವಾಸ ತಂತ್ರಿ, ರೆ. ಫಾ. ಪ್ರಕಾಶ್ ಅನಿಲ್ ಕೆಸ್ತಲಿನೋ, ಧರ್ಮದರ್ಶಿ ಸತೀಶ್ ಬಂದಲೆ ಶಭಿ ಅಹಮದ್ ಖಾಝಿ ಶುಭಾಶಂಸನೆಗೈದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಗುಡ್ಡ ಪಾಣಾರ, ಗಣ್ಯರಾದ ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ಕಾಪು ದಿವಾಕರ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಮಾಧವ ಆರ್. ಪಾಲನ್, ಜಿತೇಂದ್ರ ಪುರ್ಟಾಡೋ, ವೈ. ಸುಕುಮಾರ್, ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ಸುನೀಲ್ ಡಿ. ಬಂಗೇರ, ಶರ್ಪುದ್ದೀನ್ ಶೇಖ್, ಶೇಖರ್ ಹೆಜಮಾಡಿ, ರತನ್ ಶೆಟ್ಟಿ ಶಿರ್ವ, ಅಮೀರ್ ಮಹಮ್ಮದ್, ದೀಪಕ್ ಕೋಟ್ಯಾನ್ ಇನ್ನ, ಶಾಂತಲತಾ ಶೆಟ್ಟಿ, ರಕ್ಷಣಾಪುರ ಜವನೆರ್ ಸಂಘಟಕರಾದ ದೀಪಕ್ ಕುಮಾರ್ ಎರ್ಮಾಳು, ಸುಧೀರ್ ಕರ್ಕೇರ, ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ರಮೀಜ್ ಹುಸೇನ್, ಮಹಮ್ಮದ್ ಸಾಧಿಕ್, ರಾಜೇಶ್ ಶೇರಿಗಾರ್, ಲಕ್ಷ್ಮೀಶ ತಂತ್ರಿ, ಅಶ್ವಿನಿ ನವೀನ್, ಅಖಿಲೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Advertisement

ಕಾಪು ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಸ್ವಾಗತಿಸಿದರು. ವಿ.ಜೆ. ಮಧುರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಭಾರೀ ಬಹುಮಾನ : ಉಡುಪಿ ಮತ್ತು ದ.ಕ. ಜಿಲ್ಲೆಯ ಆಯ್ದ ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿಜೇತ ತಂಡಗಳಿಗೆ ಕ್ರಮವಾಗಿ ಒಂದು ಲಕ್ಷ, 75 ಸಾವಿರ ಮತ್ತು 30 ಸಾವಿರ ರೂ. ನಗದು ಸಹಿತ ಪ್ರಶಸ್ತ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ಕುಣಿತ ಭಜನೆ ಸಹಿತ ಮನೋರಂಜನಾ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next