Advertisement

“ಸೌಹಾರ್ದ ಕಾಪಾಡುವಲ್ಲಿ ಇಫ್ತಾರ್‌ ಕೂಟ ಸಹಕಾರಿ’

01:40 PM May 27, 2019 | keerthan |

ಕಾಪು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಂಸ್ಥೆಯಾಗಿರುವ ಮೂಳೂರು ಮರ್ಕಝ್ ತಅಲೀಮಿಲ್‌ ಇಹ್ಸಾನ್‌ನಲ್ಲಿ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಮತ್ತು ಕುಂಬೋಲ್‌ ಸಾದಾತ್‌ಗಳ ಉಪಸ್ಥಿತಿಯಲ್ಲಿ ಮೇ 25ರಂದು ಸಾಮೂಹಿಕ ಇಫ್ತಾರ್‌ ಕೂಟ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ರಮ್ಜಾನ್‌ ಮಾಸವು ಅತ್ಯಂತ ವೈಶಿಷ್ಟಪೂರ್ಣವಾದ ಮಾಸವಾಗಿದ್ದು ಮುಸ್ಲಿಮರು ಅತ್ಯಂತ ಪ್ರಾಧಾನ್ಯತೆಯೊಂದಿಗೆ  ರಮ್ಜಾನ್‌ ರೋಜಾ ನಡೆಸುತ್ತಾರೆ. ಈ ಪ್ರಯುಕ್ತ ನಡೆಯುವ ಇಫ್ತಾರ್‌ ಕೂಟಗಳು ಸಮಾಜಕ್ಕೆ ಸಾಮಾಜಿಕ ಸಾಮರಸ್ಯ ಸಂದೇಶ ಬೀರುವ ಆಚರಣೆಯಾಗಿದೆ. ಇಫ್ತಾರ್‌ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಬೀರಲು ಸಾಧ್ಯ ಎಂದರು.

ಅಲ್‌ ಇಹ್ಸಾನ್‌ ಎಜುಕೇಶನ್‌ ಸೆಂಟರ್‌ ಕಾರ್ಯಾಧ್ಯಕ್ಷ ಅಸ್ಸಯ್ಯಿದ್‌ ಅಹಮ್ಮದ್‌ ಮುಕ್ತಾರ್‌ ತಂಙಳ್‌ ಕುಂಬೋಳ್‌ ರಮಳಾನ್‌ ಪ್ರಭಾಷಣ ನೆರವೇರಿಸಿದರು. ಅಲ್‌ ಇಹ್ಸಾನ್‌ ವುಮೆನ್ಸ್‌ ಶರೀಅತ್‌ ಕಾಲೇಜಿನ ಪ್ರಾಂಶುಪಾಲ ಬಹು ಮುಹಮ್ಮದ್‌ ಅಲ್‌ ಖಾಸಿಮಿ ಅಳಕೆಮಜಲ್‌, ಡಿಕೆಎಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಬಹು ಹಾತಿಂ ಕಾನ ಅಬ್ದುಲ್‌ ಕಾದರ್‌ ಕಂಚಿ, ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್‌ ಹಾಜಿ ಕಿಂಜ್ಞ, ದಮಾಮ್‌ ವಲಯದ ಅಧ್ಯಕ್ಷ ಹಸನ್‌ ಬಾವಾ ಕುಪ್ಪೆಪದವು, ಉಡುಪಿ ಸಂಯುಕ್ತ ಸಮಾಅತ್‌ ಅಧ್ಯಕ್ಷ ಅಬೂಬಕ್ಕರ್‌ ನೇಜಾರ್‌, ಅಲ್‌ ಇಹ್ಸಾನ್‌ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಯು.ಕೆ. ಮುಸ್ತಫಾ ಸಅದಿ, ಮೂಳೂರು ಮರ್ಕಝ್ ಮತ್ತು ಡಿಕೆಎಸ್ಸಿ ಪ್ರತಿನಿಧಿಗಳು, ಪದಾಧಿಕಾರಿಗಳು ,ಸಮಾಜದವರು ಕೂಟದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next