Advertisement

Kannada Cinema; ಮೂಲ ನಂಬಿಕೆ-  ಮೂಢನಂಬಿಕೆಯ ಸುತ್ತ ‘ಕೌಮುದಿ’

05:19 PM May 23, 2024 | Team Udayavani |

ಕೌಮುದಿ ಎಂಬ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಹಾರೋಹಳ್ಳಿಯ ದಿಂಬದಹಳ್ಳಿಯಲ್ಲಿರುವ ಬಿಸಲಮ್ಮ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿದೆ. ಯಶೋದ ಪ್ರಕಾಶ್‌ ಕೊಟ್ಟುಕತ್ತೀರ ಬಂಡವಾಳ ಹೂಡುವುದರ ಜತೆಗೆ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಶಿಕ್ಷಣ ಹಾಗೂ ವೈಜ್ಞಾನಿಕ ಕೊರತೆಯಿಂದಾಗಿ ಮೂಲನಂಬಿಕೆ ಹಾಗೂ ಮೂಡನಂಬಿಕೆಯ ವ್ಯತ್ಯಾಸ ತಿಳಿಯದೆ ಬದುಕಿಗೆ ಅಪಾಯ ತಂದೊಡ್ಡುವ ಸಂಪ್ರದಾಯ, ಆಚರಣೆಗಳ ಸತ್ಯ-ವಾಸ್ತವಗಳ ಸುತ್ತ ಸಿನಿಮಾವು ಬೆಳಕು ಚೆಲ್ಲಲಿದೆ.

Advertisement

ಗತಕಾಲದಿಂದ ಇಂದಿನವರೆಗೂ ಗ್ರಾಮೀಣ ಭಾಗದಲ್ಲಿ ಇಂತಹ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಕಥಾನಾಯಕಿ ಇದರ ವಿರುದ್ದ ಧ್ವನಿ ಎತ್ತಿ, ಯಾವ ರೀತಿ ಹೋರಾಟ ಮಾಡುತ್ತಾಳೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

“ಪಿಂಕಿ ಎಲ್ಲಿ’ ಮತ್ತು “ಕೋಳಿಎಸ್ರು’ ಚಿತ್ರಗಳಲ್ಲಿ ನಟಿಸಿರುವ ಅಕ್ಷತಾ ಪಾಂಡವಪುರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಕುಮಾರಿ ದೀಪಿಕಾ, ಪ್ರತೀಕ, ಅಂಕಿತಾ ಮೂರ್ತಿ, ನೀನಾಸಂ ನಟರಾಜ್, ಕಾವೇರಿ ಶ್ರೀಧರ್‌, ಪಿ.ಬಿ.ರಾಜುನಾಯಕ, ರೋಹಿಣಿ, ತಾರರಘು, ಬಂಗಾರಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾಾರೆ.

ಚಿತ್ರಕ್ಕೆ ಶ್ರೀಸುರೇಶ್‌ ಸಂಗೀತ, ನಾಗೇಶ್‌.ಎನ್‌ ಸಂಭಾಷಣೆ, ಸಂಕಲನ, ನಾಗೇಶ್‌.ಎನ್‌, ಹರೀಶ್‌. ಎಸ್‌ ಚಿತ್ರಕಥೆ ಇದೆ. ದಿಂಬಹಳ್ಳಿ, ಬಾಚಹಳ್ಳಿ ದೊಡ್ಡಿ ಹಾಗೂ ಕನಕಪುರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಸಿಂಕ್‌ ಸೌಂಡ್‌ನ‌ಲ್ಲಿ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next