Advertisement

ಮಗಳನ್ನು ನೋಡಲೆಂದು ತೆರಳುತ್ತಿದ್ದವರು ಅಪಘಾತಕ್ಕೆ ಬಲಿಯಾದರು

09:41 AM Sep 03, 2019 | Hari Prasad |

ಸುಳ್ಯ: ಇಂದು ಮುಂಜಾನೆ ಕೌಡಿಚಾರ್ ಮಡ್ಯಂಗಳದಲ್ಲಿ ಕಾರು ಹೆದ್ದಾರಿ ಪಕ್ಕದ ಕೆರೆಗೆ ಉರುಳಿ ದುರಂತ ಅಂತ್ಯ ಕಂಡ ಅಶೋಕ್ ನಿಡ್ಯಮಲೆ ಕುಟುಂಬ ಮೂಡಬಿದಿರೆಯಲ್ಲಿ ಓದುತ್ತಿರುವ ತಮ್ಮ ಹಿರಿಮಗಳನ್ನು ಕಾಣಲೆಂದು ಹೋಗುತ್ತಿದ್ದರೆಂದು ತಿಳಿದುಬಂದಿದೆ.

Advertisement

ಭಾಗಮಂಡಲದ ನಿಡ್ಯಮಲೆಯವರಾದ ಅಶೋಕ್ ಮಡಿಕೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದಾರೆ. ಅವರ ಪತ್ನಿ ಶ್ರೀಮತಿ ಹೇಮಲತ ಅವರು ಶುಂಠಿಕೊಪ್ಪದಲ್ಲಿ ಶಿಕ್ಷಕಿಯಾಗಿರುವುದರಿಂದ ಅಶೋಕ್ ಕುಟುಂಬ ಶುಂಠಿಕೊಪ್ಪದಲ್ಲೇ ಮನೆ ಮಾಡಿ ನೆಲೆಸಿತ್ತು.

ಅಶೋಕ್ ದಂಪತಿಯ ಹಿರಿಯ ಪುತ್ರಿ ಪ್ರಕೃತಿ ಎನ್.ಎ. ಮೂಡಬಿದ್ರೆಯಲ್ಲಿ ಕಾಲೇಜು ವ್ಯಾಸಾಂಗ ಮಾಡುತ್ತಿದ್ದರು. ಇಂದು ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದ್ದ ಕಾರಣ ಮಗಳನ್ನು ಕಾಣಲೆಂದು ಅಶೋಕ್ ದಂಪತಿ ತಮ್ಮ ಇನ್ನಿಬ್ಬರು ಮಕ್ಕಳ ಸಹಿತ ಮೂಡಬಿದಿರೆಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು, ದಾರಿಮಧ್ಯೆ ಮಡ್ಯಂಗಳದಲ್ಲಿ ಕಾದಿದ್ದ ಜವರಾಯ ನಾಲ್ವರನ್ನೂ ಸೆಳೆದೊಯ್ದಿದ್ದಾನೆ.

ಹೆದ್ದಾರಿ ಇಲಾಖೆ ಮತ್ತು ಸ್ಥಳೀಯಾಡಳಿತದ ನಿರ್ಲಕ್ಷ್ಯಕ್ಕೆ ನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next