ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯ ವಾರ್ಷಿಕ ನಡು ದೀಪೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮವು ಮಿಮಿಕ್ರಿ, ನಾದ ಗಾನ ವೈಭವ ನಡೆಯಿತು. ಮಹಾಗಣಪತಿಮ್ ಗಣೇಶ ಸ್ತುತಿ ನಾಟ ರಾಗ ಏಕ ತಾಳದಲ್ಲಿ ಮುತ್ತು ಸ್ವಾಮಿ ದೀಕ್ಷಿತರ ರಚನೆಯ ಹಾಡನ್ನು ಅಮ್ಮ ಮಗಳು ಹಾಡಿದರು.ಪಾಹಿ ಪರ್ವತ ಆದಿ ತಾಳದಲ್ಲಿ ಹಳ್ಳಿ ಗಾಯಕಿಯರ ದಿವ್ಯ ಕಂಠದ ಸೋಗಸು ಮೂಡಿ ಸಂಗೀತ ಪ್ರಿಯರ ಬಹುಪರಾಕ್ ಎನಿಸಿತು. ಮಹಾದೇವ ಶಿವ ಶಂಭೋ, ರೇವತಿ ರಾಗ ಆದಿ ತಾಳದಲ್ಲಿ, ದೇಶೀಯ ಪ್ರತಿಭೆಯ ಸವಿ ಜೇನ ಕಂಠಕ್ಕೆ ಭಕ್ತ ಜನತೆ ಭಾವ ಪರವಶವಾಯಿತು.
ಗಣೇಶ್ ಸುಳ್ಯ ಮಿಮಿಕ್ರಿ, ಸಿನಿಮಾ ನಟರ ಮಾತಿನ ಶೈಲಿಯ ಅನುಕರಣೆ, ಹುಟ್ಟಿದರೆ ಕನ್ನಡ ನಾಡಲ್ಲಿ, ಮುನಿಸುತರವೇ ಹಾಡುಗಳ ಮೂಲಕ ರಂಜಿಸಿದರು. ನೀ ಸಿಗದೆ ಬಾಳೊಂದು ಬಾಳೇ, ಕಲ್ಲ ಕೆರಿ ಹುಡುಗಿ, ಹೃದಯ ಸಮುದ್ರ, ಆಟ ಹುಡುಗಾಟವೋ ಹಾಡುಗಳನ್ನು ಕು| ಸಿಂಚನ ಲಕ್ಷ್ಮೀ ಕೋಡಂದೂರು ಹಾಡಿದರು.
ಬಾಲ ತ್ರಿಪುರ ಸುಂದರಿ ರಾಗ ಶಂಕರಾಭರಣ ಆದಿ ತಾಳ ತೆಲುಗು ಭಾಷೆಯ ಭಕ್ತಿಗೀತೆಯ ಹಾಡನ್ನು ಸವಿತಾ ಕೋಡಂದೂರು ಹಾಡಿದರು, ಕಲ್ಯಾಣ ರಾಮ, ನಗು ಮೊಮೊ, ಗರುಡ ಗಮನ, ಜಲ್ಲೆ ಕಬ್ಬು, ಕಲಿಸು ಗುರುವೆ, ತತ್ವ ಗೀತೆ ಹಾಡನ್ನು ಹಾಡಿ ಮೈಮರೆಸಿದರು. ಶಾಸ್ತ್ರೀಯ, ಜನಪದ ಹಾಡುಗಾರಿಕೆಯಲ್ಲಿ ವಿಟ್ಲ ಸ್ವರ ಸಿಂಚನ ಸಂಗೀತ ಕಲಾ ಶಿಕ್ಷಕಿ ಸವಿತಾ ಕೋಡಂದೂರು, ಸಿಂಚನ ಲಕ್ಷ್ಮೀ ಕೋಡಂದೂರು, ಹಾಡು, ಮಿಮಿಕ್ರಿ ಯಲ್ಲಿ ಗಣೇಶ್ ಸುಳ್ಯ ರಂಜಿಸಿದರು. ತಬಲಾದಲ್ಲಿ ಸುಮನ್ ದೇವಾಡಿಗ, ರಿದಮ್ ಪ್ಯಾಡ್‌ನಲ್ಲಿ ಶ್ರೀಕಾಂತ್ ವರ್ಮಾ ವಿಟ್ಲ, ಕೀಬೋರ್ಡ್‌ನಲ್ಲಿ ಪ್ರಸಾದ್ ವರ್ಮಾ ವಿಟ್ಲ ಸಾಥ್ ನೀಡಿದರು.
ನಂದನ್ ಪೆರ್ನಾಜೆ