Advertisement
ಸಂಸದ ಬಿ.ವೈ. ರಾಘವೇಂದ್ರ ಅವರ ಮುತುವರ್ಜಿಯಲ್ಲಿ ನಬಾರ್ಡ್ ಯೋಜನೆಯಡಿ ಈ ಸೇತುವೆಗೆ 3.48 ಕೋ.ರೂ. ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಪ್ರಸ್ತಾವನೆ ಸಲ್ಲಿಸಿದ್ದರು.
ಗ್ರಾಮ-ಗ್ರಾಮಗಳ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ “ಉದಯವಾಣಿ’ ಕಳೆದ ಜು. 2ರಿಂದ ಆರಂಭಿಸಿದ ಗ್ರಾಮಭಾರತ ಸರಣಿಯಲ್ಲಿ ಮೊದಲಿಗೆ ಹಳ್ಳಿ ಹೊಳೆ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ “ಇಳಿದಷ್ಟೂ ಸಮಸ್ಯೆ ಆಳ’ ಹಾಗೂ “ಸಾಗರದಷ್ಟು ಸಮಸ್ಯೆಗಳಿಗೆ ಸಾಸಿವೆಯಷ್ಟೇ ಪರಿಹಾರ!’ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಇದರಲ್ಲಿ ಕಬ್ಬಿನಾಲೆ, ಕಟ್ಟಿನಾಡಿ, ಬೊಮ್ಮನಾಡಿ ಪರಿಸರದ ಜನ ಸೇತುವೆಯಿಲ್ಲದೆ ಅನುಭವಿಸುತ್ತಿರುವ ಸಂಕಷ್ಟದ ಕುರಿತಂತೆ ಬೆಳಕು ಚೆಲ್ಲಲಾಗಿತ್ತು. ವರದಿಗೆ ಸ್ಪಂದಿಸಿದ ಸಂಸದರು, ಶಾಸಕರು ಸೇತುವೆ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದಾರೆ.
Related Articles
Advertisement
ಇದನ್ನೂ ಓದಿ:ಮುಂಬೈನಲ್ಲಿ ವಾಟರ್ ಟ್ಯಾಕ್ಸಿಗೆ ಸದ್ಯದಲ್ಲೇ ಚಾಲನೆಸೌಡ ಸೇತುವೆ ಮಂಜೂರು
ಸೌಡ – ಶಂಕರನಾರಾಯಣ ಸೇತುವೆಗೂ ಇದೇ ವೇಳೆ ನಬಾರ್ಡ್ ಯೋಜನೆಯಡಿ 15.42 ಕೋ.ರೂ. ಅನುದಾನ ಮಂಜೂರಾಗಿದೆ. ಹಳ್ಳಿಹೊಳೆ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆಗೆ ಅನುದಾನ ಮಂಜೂರಾಗಿದೆ. ಈಗಾಗಲೇ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಉದಯವಾಣಿ ಪತ್ರಿಕೆ ಅಲ್ಲಿನ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದು, ಶಾಸಕ ಸುಕುಮಾರ ಶೆಟ್ಟರು ಬೇಡಿಕೆ ಸಲ್ಲಿಸಿದ್ದರು.
– ಬಿ.ವೈ. ರಾಘವೇಂದ್ರ, ಸಂಸದ