Advertisement

ಕಟ್ಟತ್ತಿಲ: ಕುತೂಹಲ ತರಿಸುವ ಭೂಗತಶಾಸ್ತ್ರ!

10:21 AM Jan 11, 2020 | Sriram |

ಉಡುಪಿ: ಬಂಟ್ವಾಳ ತಾಲೂಕಿನ ಕಟ್ಟತ್ತಿಲ ಕ್ಷೇತ್ರ ವಿಶಿಷ್ಟ ಜಾಗೃತ ಸನ್ನಿಧಾನ. ಇದನ್ನು ಕಟ್ತಿಲ ಎಂದೂ ಕರೆಯುತ್ತಾರೆ. ಸೇತು ತಿಲ ಎನ್ನುವುದು ಸಂಸ್ಕೃತದ ಹೆಸರು. ಸೇತು ಅಂದರೆ ಕಟ್ಟ. ಸೇತು ತಿಲ ಹೋಗಿ ಕಟ್ಟತಿಲ, ಕಟ್ಟತ್ತಿಲ ಆಗಿರಬಹುದು. ಇಲ್ಲಿಗೆ ಬಿಸಿ ರೋಡ್‌, ಮೇಲ್ಕಾರ್‌, ಪಣೋಲಿಬೈಲು, ಮಂಚಿ, ಸಾಲೆತ್ತೂರು ಮೂಲಕ ಅಥವಾ ತೊಕೊಟ್ಟು, ದೇರ್ಲಕಟ್ಟೆ, ಮುಡಿಪು, ಬಾಕ್ರಬೈಲು, ಸಾಲೆತ್ತೂರು ಮೂಲಕ ತಲುಪಬಹುದು. ಇದರ ಆಡಳಿತವನ್ನು ಅದಮಾರು ಮಠದವರು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.

Advertisement

ಇಲ್ಲಿನ ದೇವರು ಗೋಪಾಲಕೃಷ್ಣ. ಹಿಂದೆ ಇಲ್ಲಿ ಬ್ರಹ್ಮಚಾರಿಗಳೇ ಪೂಜೆ ಮಾಡುತ್ತಿದ್ದರು. ಕೆಲವು ದಶಕಗಳ ಹಿಂದೆ ಪೂಜೆ ಮಾಡುವುದು ಸಮಸ್ಯೆಯಾದಾಗ ಶ್ರೀವಿಬುಧೇಶತೀರ್ಥ ಶ್ರೀಪಾದರು ತಮ್ಮ ಮಠದ ಪಟ್ಟದ ದೇವರೊಂದಿಗೆ ಪೂಜಿಸಲು ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೂ ಹೀಗೆಯೇ ನಡೆಯುತ್ತಿದೆ. ಅಲ್ಲಿ ವರ್ಷಕ್ಕೆ ಒಮ್ಮೆ ವಾರ್ಷಿಕ ಪೂಜೆಗಳನ್ನು ಶ್ರೀಅದಮಾರು ಮಠಾಧೀಶರು ನಡೆಸುತ್ತಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಭಜನಾ ಮಂಗಳ್ಳೋತ್ಸವವನ್ನು ನಡೆಸುತ್ತಾರೆ. ಇದು ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿನಲ್ಲಿ ಬರುತ್ತದೆ. ಇತ್ತೀಚಿಗೆ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಕಟ್ತಿಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.

ಕಟ್ತಿಲ ಪರಿಸರದಲ್ಲಿ ಮಠದ ಅಭಿಮಾನಿಗಳ ತಂಡದಲ್ಲಿ ಸುಮಾರು 500 ಸದಸ್ಯರಿದ್ದಾರೆ. ಸುಮಾರು ನೂರು ಕಾರ್ಯಕರ್ತರು ಅದಮಾರು ಮಠದ ಪರ್ಯಾಯದ ಯಶಸ್ಸಿಗೆ ಶ್ರಮಿಸುತ್ತಾರೆ.

ಕಟ್ತಿಲ  ಮಠದ ಪರಿಸರದಲ್ಲೊಂದು ಸಣ್ಣ ನೀರಿನ ಗುಂಡಿ ಇದೆ. ಇಲ್ಲಿ ಆಚಾರ್ಯ ಮಧ್ವರು ತಾಮ್ರದ ತಗಡಿನಲ್ಲಿ ಗ್ರಂಥಗಳನ್ನು ಬರೆದು ಭೂಗತ ಮಾಡಿದ್ದಾರೆಂಬ ನಂಬಿಕೆ ಇದೆ. ಮುಂದೊಂದು ದಿನ ಧರ್ಮಗ್ಲಾನಿಯಾಗುವಾಗ ಆಚಾರ್ಯ ಮಧ್ವರ ಪೂರ್ವಾಶ್ರಮದ ತಮ್ಮ ಶ್ರೀವಿಷ್ಣುತೀರ್ಥರು ಕುಮಾರಪರ್ವತದಿಂದ ಇಳಿದು ಧರ್ಮವನ್ನು ಪುನರುತ್ಥಾನ ಮಾಡುತ್ತಾರೆಂಬ ನಂಬಿಕೆಯೂ ಇದೆ.

ಕೆಲವು ದಶಕಗಳ ಹಿಂದೆ ಶ್ರೀಪೇಜಾವರ ಶ್ರೀಗಳು, ಶ್ರೀವಿದ್ಯಾಮಾನ್ಯತೀರ್ಥರು, ಶ್ರೀಅದ ಮಾರು ಶ್ರೀಗಳು ವಿದ್ವಾಂಸ ಡಾ|ಬನ್ನಂಜೆ ಗೋವಿಂದಾಚಾರ್ಯರನ್ನು ಕರೆದುಕೊಂಡು ಕಟಿ¤ ಲಕ್ಕೆ ಪರಿಶೀಲಿಸಲು ಹೋಗಿದ್ದರು. ಆಚಾರ್ಯ ಮಧ್ವರ ಗ್ರಂಥಗಳು ಈಗಲೇ ಸಿಗುತ್ತಿರುವಾಗ ಏಕೆ ಹೂತು ಹಾಕಿರಬಹುದು? ಅಥವಾ ಅವರು ಉಲ್ಲೇಖೀಸುವ ಕೆಲವು ಗ್ರಂಥಗಳು ಸಿಗದೆ ಇರುವ ಕಾರಣ ಅದನ್ನು ಭೂಗತ ಮಾಡಿರಬಹುದೆ ಎಂಬುದು ಬನ್ನಂಜೆಯವರ ಪ್ರಶ್ನೆಯಾಗಿತ್ತು. ಬನ್ನಂಜೆಯವರೇ ಗುಂಡಿಗೆ ಇಳಿದು ನೀರನ್ನೆಲ್ಲಾ ಕೊಡಪಾನದಲ್ಲಿ ಎತ್ತಿ ಹೊರಗೆ ಹಾಕಿದರು. ನೀರು ಖಾಲಿಯಾದ ಬಳಿಕ ಅಡಿ ಹಾಸುಗಲ್ಲು ಕಾಣಿಸಿತು. ಅಲ್ಲಿ ಸಿಕ್ಕಿದ ನೀರಿನಲ್ಲಿ ಕೆಂಪು ಬಣ್ಣದಿಂದ ಕೂಡಿದ್ದಲ್ಲದೆ ಲೋಹದ ವಾಸನೆ ಬರುತ್ತಿತ್ತು.

Advertisement

ಹಾಸುಗಲ್ಲು ಹಾಕಿರಬೇಕಾದರೆ ಅದರಡಿ ಏನೋ ಇರಬೇಕು. ಹಾಸುಗಲ್ಲು ತೆಗೆಯ ಬೇಕಾದರೆ ಅದರ ಸುತ್ತಲೂ ಮೇಲ್ಭಾಗವನ್ನು ತೆಗೆಯಬೇಕು. ನೀರಿನಲ್ಲಿ ಲೋಹದ ವಾಸನೆ ಬರುತ್ತಿದ್ದ ಕಾರಣ ಮತ್ತೆ ಶೋಧಿಸಲು ಹೋಗಲಿಲ್ಲ ಎಂದು ಬನ್ನಂಜೆಯವರು ಹೇಳುತ್ತಾರೆ.

ಹಿಂದೆ ವರ್ಷವಿಡೀ ಈ ಗುಂಡಿಯಲ್ಲಿ ನೀರು ನಿಲ್ಲುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸುತ್ತಮುತ್ತಲಿನವರು ನೀರಿಗಾಗಿ ಭೂಗರ್ಭಕ್ಕೆ ಬೆಡಿ ಹಾಕಿದ ಕಾರಣ ಪರಿಸರ ಅಸಮತೋಲನಗೊಂಡು ಕಟ್ಟತ್ತಿಲದ ಗುಂಡಿನಲ್ಲಿ ನೀರು ಬತ್ತುತ್ತಿದೆ.

ಹೆಬ್ರಿ ಚಾರದಲ್ಲಿ ಬೆಳೆದ ಬಾಳೆ
ಅದಮಾರು ಮಠದ ಪರ್ಯಾಯಕ್ಕೆ ಹೆಬ್ರಿ ಚಾರದ ಬಳಿ ಬೆಳೆಸಿದ ಬಾಳೆಗಿಡಗಳು ಹುಲುಸಾಗಿ ಬೆಳೆದಿವೆ. ಕೆಲವು ಬಾಳೆ ಗಿಡಗಳು ಗೊನೆಯನ್ನೂ ಹಾಕಿವೆ. ಪರ್ಯಾಯ ಉತ್ಸವಕ್ಕೆ ಚಾರದವರು ಬೆಳೆಸಿದ ಬಾಳೆ ಎಲೆಗಳು, ಬಾಳೆಗೊನೆಗಳು ಬರುತ್ತಿವೆ. ಅಲ್ಲಿ ಸುಮಾರು 18 ಎಕ್ರೆ ಪ್ರದೇಶದಲ್ಲಿ ಮಿಥುನ್‌ ಶೆಟ್ಟಿ, ರವೀಂದ್ರನಾಥ ಶೆಟ್ಟಿಯವರ ನೇತೃತ್ವದಲ್ಲಿ ಬಾಳೆ ಬೇಸಾಯ ಮಾಡಲಾಗಿದೆ. ವಿಶೇಷವಾಗಿ ಯುವಕರಿಗೆ ಕೃಷಿ ಮೇಲೆ ವಿಶೇಷ ಆಸ್ಥೆ ಬಂದಿದೆ. ಈ ಬಾರಿ 10,000 ಬಾಳೆ ಎಲೆಗಳನ್ನು ಉಚಿತವಾಗಿ ಕೊಡುತ್ತಿದ್ದಾರೆ, 10,000 ಎಲೆಗಳನ್ನು ಬೆಳೆಗಾರರಿಂದ ಖರೀದಿಸಲಾಗುತ್ತದೆ.
-ಗೋವಿಂದರಾಜ್‌, ಶ್ರೀಕೃಷ್ಣಸೇವಾ ಬಳಗ, ಪರ್ಯಾಯ ಶ್ರೀಅದಮಾರು ಮಠ, ಉಡುಪಿ.

ಸಾಂಸ್ಕೃತಿಕ ಕಾರ್ಯಕ್ರಮ
ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಸಂಜೆ 5.30ರಿಂದ 7ರ ವರೆಗೆ ಈ ಕೆಳಗಿನಂತೆ ನಡೆಯಲಿವೆ.
ಜ. 10- ಗಾನ- ಆಖ್ಯಾನ: ವಿ| ಗಣಪತಿ ಭಟ್‌ ಯಲ್ಲಾಪುರ, ವಿ| ಕೆ. ಶ್ರೀಪತಿ ಉಪಾಧ್ಯಾಯ ಕುಂಭಾಸಿ
ಜ. 11- ಮಂಗಳೂರಿನ ಅನುಶ್ರೀ ರಾವ್‌ ಮತ್ತು ಸ್ವಾತಿ ರಾವ್‌ ಸಹೋದರಿಯರಿಂದ ಸಂಗೀತ
ಜ. 12- ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕಲಾ ಕೇಂದ್ರದಿಂದ ಶಾಸ್ತ್ರೀಯ, ಜನಪದ, ನೃತ್ಯ
ಜ. 13- ಬ್ರಹ್ಮಾವರ ಚಾಂತಾರಿನ ಭರತಾಂಜಲಿ ನೃತ್ಯ ಕಲಾ ಶಾಲೆಯ ಪ್ರೀತಿ ಪುರುಷೋತ್ತಮರಿಂದ ನೃತ್ಯ, ಭಾವನಾ ಕೆರೆಮಠ ಅವರಿಂದ “ಅಹಲ್ಯಾ’ ಏಕಾಯಣ ರಂಗ ಪ್ರಸ್ತುತಿ
ಜ. 14- ದಾಮೋದರ ಶೇರಿಗಾರ್‌ ಬಳಗದಿಂದ ಸ್ಯಾಕೊÕàಫೋನ್‌ ವಾದನ
ಜ. 15- ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ರಾಧಾಕೃಷ್ಣ ಬಳಗದಿಂದ ನೃತ್ಯ ಸಂಗಮ
ಜ. 16- ಜಗದೀಶ ಶಿವಪುರ ಅವರಿಂದ ಭಕ್ತಿ ಭಾವ ಗಾನಾಮೃತ
ಜ. 17ರ ಸಂಜೆಯಿಂದ ಜ. 18ರ ಮುಂಜಾನೆವರೆಗೆ: ಕಲ್ಲಡ್ಕದ ವಿಟuಲ ನಾಯಕರಿಂದ ಗೀತ ಸಾಹಿತ್ಯ ಸಂಭ್ರಮ, ಸಭೆ, ಕಟೀಲಿನ ದುರ್ಗಾ ಮಕ್ಕಳ ಮೇಳದಿಂದ “ಚಕ್ರವ್ಯೂಹ’ ಯಕ್ಷಗಾನ, ಉಡುಪಿಯ ಯಕ್ಷಗಾನ ಕೇಂದ್ರದಿಂದ “ಜಟಾಯು ಮೋಕ್ಷ’

Advertisement

Udayavani is now on Telegram. Click here to join our channel and stay updated with the latest news.

Next