Advertisement

ಕತ್ರಿನಾ ಕೈಫ್-ವಿಕ್ಕಿ ರಾಯಲ್‌ ಮದುವೆ

11:51 PM Dec 09, 2021 | Team Udayavani |

ಜೈಪುರ: ಬಾಲಿವುಡ್‌ ನಟಿ ಕತ್ರಿನಾ ಕೈಫ್ ಮತ್ತು ಉರಿ ಸಿನೆಮಾ ಖ್ಯಾತಿಯ ನಟ ವಿಕ್ಕಿ ಕೌಶಲ್‌ ಗುರುವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ರಾಜಸ್ಥಾನದ ಸಿಕ್ಸ್‌ ಸೆನ್ಸಸ್‌ ಕೋಟೆಯಲ್ಲಿ ಅದ್ದೂರಿ ಮದುವೆ ಕಾರ್ಯಕ್ರಮ ಜರಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನೆರವೇರಿದೆ. ಸಂಗೀತ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ಎಲ್ಲ ಸೇರಿ ಒಟ್ಟು 3 ದಿನಗಳ ಕಾಲ ಕೋಟೆಯಲ್ಲಿ  ಮದುವೆ ಯನ್ನು ನೆರವೇರಿಸಲಾಗಿದೆ.

ಮದುವೆ ಮುಹೂರ್ತಕ್ಕೆ ಕತ್ರಿನಾ ಕೈಫ್ ಕಡು ಕೆಂಪು ಬಣ್ಣದ ಲೆಹಂಗಾ ಧರಿಸಿ ಕಂಗೊಳಿಸಿದ್ದರೆ, ವಿಕ್ಕಿ ಕೌಶಲ್‌ ಪಂಜಾಬಿ ಶೈಲಿಯ ಶೆರ್ವಾನಿ ತೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next