Advertisement

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

01:25 PM Jun 25, 2024 | Team Udayavani |

ಮುಂಬಯಿ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಾನು ಪ್ರೀತಿಸಿದ ಹುಡುಗನ ಜೊತೆ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಎರಡೂ ಕುಟುಂಬದ ಆತ್ಮೀಯರ ಸಮ್ಮುಖದಲ್ಲಿ ಮುಂಬಯಿಯಲ್ಲಿ ಸೋನಾಕ್ಷಿ – ಜಹೀರ್‌ ಇಕ್ಬಾಲ್‌ ಅವರ ವಿವಾಹ ನಡೆದಿದೆ.

ವಿವಾಹ ಕಾರ್ಯಕ್ರಮದ ಬಳಿಕ ಆರತಕ್ಷತೆ ಕಾರ್ಯಕ್ರಮಕ್ಕೆ ಬಾಲಿವುಡ್‌ ಖ್ಯಾತ ನಟ-ನಟಿಯರು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.

ಆರತಕ್ಷತೆ ಕಾರ್ಯಕ್ರಮದಲ್ಲಿ ಮ್ಯೂಸಿಕ್‌ ಹಾಕಿ, ಪಾರ್ಟಿಯ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅತಿಥಿಗಳೊಂದಿಗೆ ನವಜೋಡಿಯೂ ಕುಣಿದು ಕುಪ್ಪಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮದ್ಯದ ಅಮಲಿಯಲ್ಲಿ ಕುಣಿದಿದ್ದಾರೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ʼ

ಚಯ್ಯಾ ಚಯ್ಯಾʼ ಹಾಡು ಸೇರಿದಂತೆ ದಬಂಗ್ ಚಿತ್ರದ ಹಾಡಿಗೆ ಸೋನಾಕ್ಷಿ – ಇಕ್ಬಾಲ್‌ ಹೆಜ್ಜೆ ಹಾಕಿದ್ದು, ಮದ್ಯ ಸೇವಿಸಿ, ನಶೆಯಿಂದ ಇಬ್ಬರು ಕುಣಿದಿದ್ದಾರೆ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

Advertisement

ಮದ್ವೆ ದಿನನೇ ಕುಡಿದು ನಶೆಯಲ್ಲಿ ತೂರಾಡಿದ್ದಾನೆ ಇವರ ಮದ್ವೆ ಜೀವನ ಜಾಸ್ತಿ ದಿನ ಇರಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಈತ ಗಾಂಜಾ ನಶೆಯಲ್ಲಿದ್ದಾನೆ. ಈತ ಎಣ್ಣೆ ಪಾರ್ಟಿ, ಸೋನಾಕ್ಷಿ ತನ್ನ ಹುಡುಗನ ಆಯ್ಕೆಯಲ್ಲಿ ಎಡವಿದರು ಎಂದು ಬರೆದುಕೊಂಡಿದ್ದಾರೆ.

ಮದುವೆಯಲ್ಲಿ ಸೋನಾಕ್ಷಿ ಸಿನ್ಹಾ ತಂದೆ- ತಾಯಿ, ಜಹೀರ್‌ ಕುಟುಂಬದ ಸದಸ್ಯರು ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next