Advertisement

ಕತ್ರೀನಾ –ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

08:22 PM Dec 05, 2021 | Team Udayavani |

ಮುಂಬೈ: ಬಾಲಿವುಡ್‌ ನಟಿ ಕತ್ರೀನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್‌ ವಿವಾಹ ಈಗಾಗಲೇ ಹಲವು ಕಾರಣಕ್ಕೆ ಕುತೂಹಲ ಸೃಷ್ಟಿಸಿದೆ. ಅವರಿಬ್ಬರು ಡಿ.7ರಿಂದ 9ರ ವರೆಗೆ ರಾಜಸ್ಥಾನದ ಸವಾಯ್‌ ಮಾಧವಪುರ ಜಿಲ್ಲೆಯ ಚೌತ್‌ ಕಾ ಬರ್ವಾರ ಪಟ್ಟಣದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನ ಪ್ರವೇಶಿಸಲಿದ್ದಾರೆ.

Advertisement

ಹೊಸ ಮಾಹಿತಿ ಏನಪ್ಪಾ ಅಂದರೆ ವರ ವಿಕ್ಕಿ ಕೌಶಲ್‌ ಬಾರಾತ್‌ (ವರನ ದಿಬ್ಬಣ)ನಲ್ಲಿ ಕುದುರೆಯನ್ನು ಏರಿ ಬರಲಿದ್ದಾರೆ. ಅವರ ಜತೆಗೆ ಶ್ವೇತ ವರ್ಣದಿಂದ ಕೂಡಿದ ಏಳು ಕುದುರೆಗಳು ಇರಲಿವೆಯಂತೆ. ವಿವಾಹ ಕಾರ್ಯಕ್ರಮ ನಡೆಯಲಿರುವ ಮಂಟಪ ಕೂಡ ಅದ್ಧೂರಿಯಾಗಿಯೇ ಇರಲಿದೆಯಂತೆ.

ಮದುವೆಗೆ ಕೇವಲ ಆತ್ಮೀಯರಷ್ಟೇ ಇರಲಿದ್ದಾರೆ. ಮದುವೆ ಕಾರ್ಯಕ್ರಮ ಮುಕ್ತಾಯವಾದ ಕೂಡಲೇ ನಟಿ ಕತ್ರೀನಾ ಕೈಫ್ “ಮೇರಿ ಕ್ರಿಸ್‌ಮಸ್‌’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.

ಇದನ್ನೂ ಓದಿ : ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next