Advertisement

ನನ್ನ “ಬೇಬಿ’ಕ್ಯಾಟ್ ಎಂದ ಸಲ್ಮಾನ್ ಖಾನ್: ವೀಡಿಯೋ ವೈರಲ್

06:18 PM Jul 08, 2018 | |

ಇಬ್ಬರು ಹಳೆಯ ಲವರ್ಸ್ ಒಳ್ಳೆಯ ಸ್ನೇಹಿತರಾಗಿರಬಹುದು ಎಂಬುದನ್ನು ಅಮೇರಿಕಾ ಪ್ರವಾಸದಲ್ಲಿರುವ ಬಾಲಿವುಡ್ ಮಾಜಿ ಕಪಲ್ಸ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Advertisement

ಹೌದು! ಸಲ್ಮಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕ್ಯಾಟ್‍ರನ್ನು “ತಮ್ಮ ಬೇಬಿ’ ಎಂದು ಹೇಳಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


https://twitter.com/bestofsalkat/status/1015160060790628353

ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ವರದಿಗಾರರೊಬ್ಬರು ಇದೇ ತಿಂಗಳ ಜುಲೈ 15ರಂದು ತಮ್ಮ ಬೀಬಿ ಬರ್ತಡೇ ಇದೆ ಎಂದು ಹೇಳಿದ ಕೂಡಲೇ ಅದಕ್ಕೆ ನಗು-ನಗುತ್ತಾ ಉತ್ತರಿಸಿದ ಸಲ್ಮಾನ್, “ನನ್ನ ಬೇಬಿ ಹುಟ್ಟುಹಬ್ಬ ಜುಲೈ 15ರಂದು ಅಲ್ಲ, ಜುಲೈ 16ರಂದು” ಎಂದಿದ್ದಾರೆ.

ಅಲ್ಲದೇ ಸಲ್ಮಾನ್ ಹಾಗೆ ಹೇಳುತ್ತಿದ್ದಂತೆಯೇ ಕತ್ರಿನಾ ನಾಚಿ ನೀರಾಗಿದ್ದು, ಅವರ ಕೆನ್ನೆ ಕೆಂಪಾಗಿದೆ. ಕೂಡಲೇ ಇದರಿಂದ ಎಚ್ಚೆತ್ತ ಸಲ್ಮಾನ್ “ಈ ಬೇಬಿ ಅಲ್ಲ, ಆ ಬೇಬಿ” ಮಾತು ಬದಲಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next