Advertisement

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

07:52 PM Oct 27, 2020 | mahesh |

ಕಟಪಾಡಿ: ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿರುವ ಕುಡಿಯುವ ನೀರಿನ ಒವರ್‌ಹೆಡ್‌  ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗುವ ಅಪಾಯವಿದೆ.

Advertisement

1 ಲಕ್ಷ ಲೀ. ನೀರು ಶೇಖರಣೆ ಸಾಮರ್ಥ್ಯದ ಈ ಟ್ಯಾಂಕ್‌ ಹೆದಾರಿ ಕಾಮಗಾರಿ ಸಂದರ್ಭ ಸಂಪರ್ಕ ಕಳೆದುಕೊಂಡು ನಿಷ್ಪ್ರಯೋಜಕವಾಗಿವೆ. ಈಗ ಅದರ ಪಿಲ್ಲರ್‌ಗಳೂ ಬಿರುಕು ಬಿಟ್ಟಿವೆ. ಅಡಿಭಾಗದ ಸಿಮೆಂಟ್‌ ಬಿದ್ದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಟ್ಯಾಂಕ್‌ ಕುಸಿದರೆ ಅನಾಹುತ ಕಟ್ಟಿಟ್ಟದ್ದು ಎನ್ನುವ ಆತಂಕ ಸಾರ್ವಜನಿಕರದ್ದಾಗಿದೆ.

ಕಟಪಾಡಿ ಪೇಟೆಯ ಜನನಿಬಿಡ ಸ್ಥಳದಲ್ಲೇ ಟ್ಯಾಂಕ್‌ ಇದೆ. ಇದು ಧರಾಶಾಯಿಯಾದರೆ ರಿಕ್ಷಾ ತಂಗುದಾಣ, ಅಂಗಡಿಗಳು, ಕ್ಲಿನಿಕ್‌ಗೆ ತೀವ್ರ ಅಪಾಯ ಕಾದಿದೆ. ಇಲ್ಲಿ ಪಾದಚಾರಿಗಳು, ವಾಹನಗಳ ಸಂಚಾರವೂ ಹೆಚ್ಚಿದೆ. ಜತೆಗೆ ವಿದ್ಯುತ್‌ ಕಂಬವೂ ಸನಿಹದಲ್ಲಿದ್ದು, ಸಂಭಾವ್ಯ ಅಪಾಯದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತು ಟ್ಯಾಂಕ್‌ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವೈದ್ಯರಾದ ಡಾ| ಎ. ರವೀಂದ್ರನಾಥ ಶೆಟ್ಟಿ ಹೇಳುತ್ತಾರೆ.

ಗಮನಹರಿಸಲಾಗುವುದು
ಸಾಧ್ಯವಾದಲ್ಲಿ ಸುಸಜ್ಜಿತಗೊಳಿಸಲು ಅಥವಾ ತೆರವಿನ ಬಗ್ಗೆ ಪರಿಶೀಲನೆ ನಡೆಸಲು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಬರೆದುಕೊಳ್ಳಲಾಗಿದೆ. ಕೂಡಲೇ ಈ ಬಗ್ಗೆ ಗಮನ ಹರಿಸುತ್ತೇವೆ .
-ಕೆ.ಎನ್‌. ಇನಾಯತುಲ್ಲಾ ಬೇಗ್‌,  ಪಿ.ಡಿ.ಒ. ಕಟಪಾಡಿ ಗ್ರಾ.ಪಂ.

Advertisement

ಪರಿಶೀಲನೆ ನಡೆಸಿ ಕ್ರಮ
ಈ ಟ್ಯಾಂಕ್‌ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ಸುನಿಲ್‌ ಕುಮಾರ್‌,  ಎಂಜಿನಿಯರ್‌, ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next