Advertisement

ನರೇಗಾ ಯೋಜನೆ: 22 ಲಕ್ಷ ರೂ. ವೆಚ್ಚದಲ್ಲಿ 32 ಕಾಮಗಾರಿಗಳು

08:37 PM Jul 16, 2019 | mahesh |

ಕಟೀಲು: ಕಟೀಲು ಗ್ರಾ. ಪಂ.ಗೆ ಒಳಪಟ್ಟ ಕೊಂಡೆಮೂಲ, ನಡುಗೋಡು, ಕಿಲೆಂಜೂರು ಗ್ರಾಮಗಳ 2019-20 ಸಾಲಿನ ಪ್ರಥಮ ಹಂತದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋ ಧನೆಯ ವಿಶೇಷ ಗ್ರಾಮ ಸಭೆ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಜು. 16 ರಂದು ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.

Advertisement

ತಾಲೂಕು ಸಂಯೋಜಕಿ ಧನಲಕ್ಷ್ಮೀ ನರೇಗಾ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಅವರು, ಪಂಚಾಯತ್‌ ವ್ಯಾಪ್ತಿ ಯಲ್ಲಿ ಒಟ್ಟು 148 ಜಾಬ್‌ಕಾರ್ಡ್‌ ಗಳಿದ್ದು 72 ಜಾಬ್‌ ಕಾರ್ಡ್‌ಗಳು ಚಾಲ್ತಿಯಲ್ಲಿವೆ. 22 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಶೆಡ್‌ರಚನೆ, ರಸ್ತೆ ಅಭಿವೃದ್ಧಿ , ಮಳೆಕೊಯ್ಲು ಬಸವ ವಸತಿ ಮನೆ ಸಹಿತ ಆರು ತಿಂಗಳಲ್ಲಿ 185 ಕಾಮಗಾರಿ ನಡೆದಿವೆ. ಒಟ್ಟು 6 ತಿಂಗಳಲ್ಲಿ 32 ಕಾಮಗಾರಿಗಳು, 3947 ಮಾನವ ದಿನಗಳು ನಡೆದಿವೆ ಎಂದರು.

ಮಳೆಕೊಯ್ಲು ಕಾಮಗಾರಿಗೆ ನರೇಗಾ ಯೋಜನೆಯನ್ನು ನೀಡಬೇಕು ಎಂದು ಚಂದ್ರಶೇಖರ ಶೆಟ್ಟಿ ಬರ್ಕೆ ಕೇಳಿದರು, ಅದಕ್ಕೆ ಅವಕಾಶ ಇಲ್ಲ ಎಂಬ ಉತ್ತರ ಬಂತು.
ಬೇರೆ ರಾಜ್ಯದಲ್ಲಿ ನರೇಗಾ ದಲ್ಲಿ ಹೆಚ್ಚಿನ ಕೆಲಸಗಳಿಗೆ ಅವಕಾಶವಿದ್ದು ನಮ್ಮಲ್ಲಿ ಅವಕಾಶ ನೀಡಬೇಕು ಎಂದು ಪುರುಷೋತ್ತಮ ಕೋಟ್ಯಾನ್‌ ಮಿತ್ತಬೈಲ್‌ ಸಭೆಯಲ್ಲಿ ಪ್ರಶ್ನೆ ಕೇಳಿದರು.

ಆಗ ಧನಲಕ್ಷ್ಮೀ ಉತ್ತರಿಸಿ, ಹೆಚ್ಚಿನ ಎಲ್ಲ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಪ್ರದೀಪ್‌ ಡಿ’ಸೋಜ ನೋಡಲ್‌ ಅಧಿಕಾರಿಯಾಗಿದ್ದರು. ಪಂಚಾಯತ್‌ ಅಧ್ಯಕ್ಷೆ ಗೀತಾ ಪೂಜಾರ್ತಿ, ಪಂಚಾಯತ್‌ ಪಿಡಿಒ ಪ್ರಕಾಶ್‌ ಬಿ. ಮೊದಲಾದವರು ಉಪಸ್ಥಿತರಿದ್ದರು.

ಯಂತ್ರೋಪಕರಣ ಉಪಯೋಗಿಸುವಂತಿಲ್ಲ
ನರೇಗಾ ಯೋಜನೆಯಲ್ಲಿ ಪರಂಬೊಕು ತೋಡಿನ ಹೂಳೆತ್ತಲು ಅವಕಾಶ ಇದೆಯೇ ಎಂದು ಸಂಜೀವ ಮಡಿವಾಳ ಅವರ ಪ್ರಶ್ನೆಗೆ ಉತ್ತರಿಸಿದ ಧನಲಕ್ಷ್ಮೀ ಅವರು ನರೇಗಾ ಯೋಜನೆಯಲ್ಲಿ ಹೂಳೆತ್ತಲು ಅವಕಾಶ ಇದೆ. ಯಾವುದೇ ಯಂತ್ರ ಉಪಯೋಗಿಸಬಾರದು ಅನಿವಾರ್ಯ ಆದಲ್ಲಿ ಉಪಯೋಗಿಸಬಹುದು ಅದಕ್ಕೆ ಅದರದ್ದೇ ಆದ ವಿಧಾನವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next