ಮುಂಬಯಿ: ಭವಾನಿ ಕ್ರಿಯೇಷನ್ಸ್ ಚೆಲ್ಲಡ್ಕ ದಡ್ಡಂಗಡಿ ಅರ್ಪಿಸುವ ಧಾರ್ಮಿಕ ಚಿಂತನೆಯ ನೂತನ ಪೌರಾಣಿಕ ಧಾರಾವಾಹಿ “ಕಟೀಲು ಶ್ರೀ ದೇವಿ ಚರಿತೆ’ ಇದರ ಶೀರ್ಷಿಕೆಯ ಹಾಡುಗಳ ಚಿತ್ರೀಕರಣವು ಸೆ. 2 ರಿಂದ ಸೆ. 4 ರವರೆಗೆ ಶ್ರೀ ಕ್ಷೇತ್ರ ಕಟೀಲು ಮತ್ತು ಮಂಗಳೂರು ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿತು.
ಚಲನಚಿತ್ರ ಹಾಗೂ ಕೋಟಿ-ಚೆನ್ನಯ ಧಾರಾವಾಹಿಯ ನಿರ್ದೇಶಕ ಚಂದ್ರಹಾಸ ಆಳ್ವ ಚೆಲ್ಲಡ್ಕ ನಿರ್ದೇಶನದಲ್ಲಿ ಮುಂಬಯಿ ಉದ್ಯಮಿಗಳಾದ ಕೆ. ಡಿ. ಶೆಟ್ಟಿ ಚೆಲ್ಲಡ್ಕ ಮತ್ತು ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನ, ಸಂಪೂರ್ಣ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಹಾಗೂ ಅನುವಂಶಿಕ ಅರ್ಚಕರಾದ ಆಸ್ರಣ್ಣ ಪರಿವಾರದ ಪ್ರೋತ್ಸಾಹದೊಂದಿಗೆ ಧಾರಾವಾಹಿಯ ಚಿತ್ರೀಕರಣವು ಭರದಿಂದ ಸಾಗುತ್ತಿದೆ.
ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಚಂದ್ರಹಾಸ ಆಳ್ವ ಚೆಲ್ಲಡ್ಕ, ನಿರ್ಮಾಪಕರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ, ಪ್ರಕಾಶ್ ಶೆಟ್ಟಿ, ಚೆಲ್ಲಡ್ಕ ದಡ್ಡಂಗಡಿ, ನಿರ್ಮಾಪಕ ಮತ್ತು ಪ್ರೊಡಕ್ಷನ್ ಕಂಟ್ರೋಲರ್ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಅವರ ನೇತೃತ್ವದಲ್ಲಿ ಧಾರಾವಾಹಿ ಶೀರ್ಷಿಕೆಯ ಹಾಡುಗಳು ಹಾಗೂ ನೃತ್ಯವು ಪ್ರಸಿದ್ಧ ನಿರ್ದೇಶಕ,ಕೊರಿಯೋಗ್ರಾಫರ್‌ಆದ ಬೆಂಗಳೂರಿನ ಮದನ್ ಹರಿಣಿ ಸಾರಥ್ಯದಲ್ಲಿ ಚಿತ್ರೀಕರಣಗೊಂಡಿತು.
ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ, ಡಬ್ಬಿಂಗ್ ಆಗಲಿರುವ ಕಟೀಲು ಶ್ರೀ ದೇವಿ ಚರಿತೆ ಧಾರಾವಾಹಿಯಲ್ಲಿ ಪ್ರತಿಭಾನ್ವಿತ ಕಲಾವಿದೆಯರಾದ ಶಿಖಾ ಕುಸುಮೋದರ ಶೆಟ್ಟಿ, ಸನ್ನಿಧಿ ಹರೀಶ್ ಶೆಟ್ಟಿ, ಸನ್ನಿಧಿ ಪ್ರೇಮನಾಥ್ ಶೆಟ್ಟಿ, ಅನುಕ್ಷಾ ಶೆಟ್ಟಿ, ಭಾರತಿ ಗೋಪಾಲನ್, ಸಮನ್ವಿ ರೈ, ಅಶಿಕಾ ಶೆಟ್ಟಿ, ಶ್ರುತಿ ಶೆಟ್ಟಿ ಹಾಗೂ ಸುಕೃತಿ ನವದುರ್ಗೆಯರಾಗಿ ತೆರೆಯಲ್ಲಿ ಮಿಂಚಲಿದ್ದಾರೆ. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಜರಗಿದ ಎರಡು ದಿನಗಳ ಚಿತ್ರೀಕರಣವು ಸೆ. 3ರಿಂದ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ಧಾರಾವಾಹಿಯ ಮಾರ್ಗದರ್ಶಕರಾದ ಕೆ. ಡಿ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಜೀಕ್ಷಿತ್ ಕೆ. ಶೆಟ್ಟಿ, ವಿಠಲ್ ಆಳ್ವ, ನಿರ್ಮಾಪಕರಾದ ಚಂದ್ರಹಾಸ ಆಳ್ವ, ರಾಧಾಕೃಷ್ಣ ಡಿ. ಶೆಟ್ಟಿ, ಪ್ರಕಾಶ್ ಡಿ. ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ಅವರನ್ನು ದೇವಸ್ಥಾನದ ಪದಾಧಿಕಾರಿಗಳು ಶಾಲು ಹೊದೆಸಿ, ಪ್ರಸಾದವನ್ನಿತ್ತು ಶುಭ ಹಾರೈಸಿದರು. ಧಾರವಾಹಿಯ ಪ್ರೊಡಕ್ಷನ್ ಮ್ಯಾನೇಜರ್‌ಗಳಾದ ಜಗಜ್ಜೀವನ್ ರಾಮ್ ಶೆಟ್ಟಿ, ಪುಷ್ಪಾಕರ್ ರೈ ಚೆಲ್ಲಡ್ಕ, ಶ್ರೇಯಸ್ ರೈ, ರಂಜಿತ್ ಆರ್. ಶೆಟ್ಟಿ ಮೊದಲಾದವರು ಸಹಕರಿಸಿದರು.