Advertisement
ಬ್ರಹ್ಮಕಲಶೋತ್ಸವದ ಕಾರ್ಯಗಳು ಪೂರ್ಣಗೊಂಡಿವೆ. ಜರಗಲಿರುವ ರಥೋತ್ಸವಕಾRಗಿ ರಥದ ಅಟ್ಟೆಯನ್ನು ಸ್ಟೀಲಿನಿಂದ ನೂತನವಾಗಿ ರಚಿಸಿ, ಸುಂದರಗೊಳಿಸಲಾಗಿದೆ. ಸುತ್ತಲೂ ಮರದ ಹಲಗೆಗಳಲ್ಲಿ ಹೊಸ ಕಲಾಕೃತಿಗಳನ್ನು ರಚಿಸಿ, ಇಡೀ ರಥವನ್ನು ಪಾಲಿಶ್ ಮಾಡಲಾಗಿದೆ. ಈ ಬಾರಿ ರಥಬೀದಿ ಅಂಗಡಿಗಳ ತೆರವಿನಿಂದ ದುಪ್ಪಟ್ಟು ಅಗಲವಾಗಿದ್ದು, ಜನರು ರಥೋತ್ಸವದ ಸಂಭ್ರಮವನ್ನು ಕಾಣುವಂತಾಗಲಿದೆ.
ಬೆಳಗ್ಗೆ 9ರಿಂದ ನಾಗೇಶ್ ಬಪ್ಪನಾಡು ಮತ್ತು ಬಳಗದವರಿಂದ ಮಂಗಳವಾದ್ಯ ನಾದಸ್ವರ, ಬೆಳಗ್ಗೆ 11ರಿಂದ ಶ್ರೀ ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ ಹರಿಕಥೆ, ಮಧ್ಯಾಹ್ನ 1ರಿಂದ ಬಾಲಕೃಷ್ಣ ಮಂಜೇಶ್ವರ ಮತ್ತು ಬಳಗ, ನಾಟ್ಯನಿಲಯಂ ಇವರಿಂದ ಭರತನಾಟ್ಯ, ಅಪರಾಹ್ನ 3ರಿಂದ ಬೆಂಗಳೂರು ಸಹೋದರರು ಮತ್ತು ಬಳಗ ಅವರಿಂದ ದಾಸರೆಂದರೆ ಸಂಪ್ರವಚನ, ಅಂಬಾಬಾಯಿ ದಾಸಿ, ಹಾಡುಗಾರಿಕೆ ಮತ್ತು ಪ್ರಸ್ತುತಿ, ಸಂಜೆ 5ರಿಂದ ಸಭಾ ಕಾರ್ಯಕ್ರಮ, ರಾತ್ರಿ 7ರಿಂದ ಲಯ ಲಾವಣ್ಯ, ನಿರ್ದೇಶನ ಆನೂರು ಅನಂತಕೃಷ್ಣ ಶರ್ಮ ಮತ್ತು ಬಳಗದಿಂದ, ರಾತ್ರಿ 9ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ದ್ಯುಸನ ವಧೆ ಎಂಬ ದೊಂದಿ ಬೆಳಕಿನ ಯಕ್ಷಗಾನ ಬಯಲಾಟ ನಡೆಯಲಿದೆ.
Related Articles
ಭ್ರಾಮರೀ ಅವತಾರಣಿಯಾದ ದುರ್ಗಾಪರಮೇಶ್ವರೀಗೆ ಬೆಳಗ್ಗೆ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು 9.37ಕ್ಕೆ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಇದರಿಂದ ಸಾನ್ನಿಧ್ಯವೂ ವೃದ್ಧಿಯಾಗಿ ಭಕ್ತರನ್ನು ಪೊರೆಯುತ್ತಾಳೆ.
– ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ತಂತ್ರಿಗಳು, ಶಿಬರೂರು
Advertisement