Advertisement

“ಕಟೀಲು ಶ್ರೀ ದೇವಿ ಚರಿತೆ’ಚಲನಚಿತ್ರ-ಧಾರಾವಾಹಿಗೆ ಕಲಾವಿದರ ಆಯ್ಕೆ

12:32 PM Jun 13, 2017 | Team Udayavani |

ಮುಂಬಯಿ:  ಕಟೀಲು ಶ್ರೀ ಜಗನ್ಮಾತೆಗೆ ನಮ್ಮ ಜನನಿದಾತೆಯ ಹೆಸರಿನ ಸೇವೆಗೈಯಲು ನಮ್ಮ ಪಾಲಿಗೆ ಒದಗಿದ ಈ ಯೋಜನೆ ಚೆಲ್ಲಡ್ಕ ಪರಿವಾರದ ಸೌಭಾಗ್ಯವೇ ಸರಿ. ಭವಾನಿ ಮಾತೆಯ ಮಮತೆಯಿಂದ ಭ್ರಮರಾಂಬಿಕೆಗೆ  ಸೇವಾರ್ಥವಾಗಿ ಈ ಯೋಜನೆ ಅರ್ಪಿಸಲಾಗಿದೆ. ಬಂಟರ ಸಂಘದಲ್ಲಿ ಕೈಗೊಂಡ ಎಲ್ಲಾ ಯೋಜನೆಗಳು  ಸಫಲತೆ ಕಂಡಿದ್ದು ಇದೂ ಕೂಡಾ ಎಲ್ಲವನ್ನೂ ಮೀರಿ ಸಿದ್ಧಿಯಾಗುವ ಭರವಸೆ ನನಗಿದೆ.  ಇದು ದೇವರ ಪುಣ್ಯದ ಕಾರ್ಯಕ್ರಮವಾಗಿದ್ದು ಏನೋ ಶಕ್ತಿ ಈ ಕಾಯಕದಲ್ಲಿ ಅಡಗಿದೆ. ಇದನ್ನು ಜಾಗತಿಕವಾಗಿ ಧಾರಾವಾಹಿ ಮಾಧ್ಯಮದ ಮೂಲಕ ಪ್ರಸಾರಿಸುವುದು ಅಭಿಮಾನವೆನಿಸುತ್ತಿದೆ. ತುಳುನಾಡಿನಲ್ಲಿ ಅವತಾರ ಎತ್ತಿದ ಮಾತೆಯ ಮಹಿಮೆಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಇದಾಗಿದೆ  ಎಂದು ಭವಾನಿ ಫೌಂಡೇಶನ್‌ ಮುಂಬಯಿ ಸಂಸ್ಥಾಪಕ ಅಧ್ಯಕ್ಷ‌ ದಡªಂಗಡಿ ಚೆಲ್ಲಡ್ಕ ಕುಸುಮೋದ‌ರ ಡಿ. ಶೆಟ್ಟಿ ಅವರು ನುಡಿದರು.

Advertisement

ಜೂ. 8 ರಂದು  ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್‌ ಕಟ್ಟಡದಲ್ಲಿನ ವಿಜಯಲಕ್ಷ್ಮೀ ಮಹೇಶ್‌ ಶೆಟ್ಟಿ (ಬಾಬಾ ಗ್ರೂಪ್‌) ಕಿರು ಸಭಾಗೃಹದಲ್ಲಿ ವಿಟ್ಲ ಚೆಲ್ಲಡ್ಕ ದಡ್ಡಂಗಡಿಯ ಭವಾನಿ ಕ್ರಿಯೇಶನ್ಸ್‌ ವತಿಯಿಂದ ನಿರ್ಮಾಣಗೊಳ್ಳಲಿರುವ “ಕಟೀಲು ಶ್ರೀ ದೇವಿ ಚರಿತೆ’ ಚಲನಚಿತ್ರ ಮತ್ತು ಧಾರವಾಹಿಗೆ  ಕಲಾವಿದರ  ಆಯ್ಕೆ ಪ್ರಕ್ರಿಯೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ರೀಡಾಪಟು, ಚಲನಚಿತ್ರ ನಟ ರೋಹಿತ್‌ ಕುಮಾರ್‌ ಕಟೀಲ್‌, ಬಂಟರ ಸಂಘ ಮುಂಬಯಿ ಗೌ| ಕೋಶಾಧಿಕಾರಿ ಸಿಎ| ಐ. ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ಕುಮಾರ್‌ ಶೆಟ್ಟಿ ಕುತ್ಯಾರು, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಸಮಾಜ ಸೇವಕರುಗಳಾದ ಎಂ.ಎಸ್‌ ಭಟ್‌, ಐಕಳ ಗುಣಪಾಲ್‌ ಶೆಟ್ಟಿ, ರಾಘು ಪಿ. ಶೆಟ್ಟಿ, ಸಂಜೀವ ಎನ್‌.ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ನವೀನ್‌ ಶೆಟ್ಟಿ ಇನ್ನಬಾಳಿಕೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಶ್ರೀ ಕಟಿಲೇಶ್ವರಿ ಮಾತೆ ನಮ್ಮೆಲ್ಲರ ಪರಂಪರೆ ಕುಲದೇವರು. ಇಂತಹ ಮಾತೆಯ ನಾಡಿನ ಚರಿತ್ರೆಯನ್ನು  ತಿಳಿದು ಇನ್ನೊಬ್ಬರಿಗೆ ತಿಳಿಸುವುದು ನಮ್ಮ ಕರ್ತವ್ಯ. ಭಕ್ತಿ ಪರಂಪರೆ, ನಾಡಿನ ಸಂಸ್ಕೃತಿ ತೋರಿಸುತ್ತಿರುವ ಧಾರಾವಾಹಿಗೆ ಎಲ್ಲರೂ ಪ್ರೋತ್ಸಾಹಿಸಿ ಮಾತೆಯ ಕೃಪೆಗೆ ಪಾತ್ರರಾಗಬೇಕು ಎಂದರು.

ಭವಾನಿ ಕ್ರಿಯೇಶನ್ಸ್‌  ಪ್ರಾಯೋಜಕತ್ವದಲ್ಲಿ ಜಗನ್ಮಾತೆಯ ಧಾರಾವಾಹಿ ನಿರ್ಮಿಸಲು ಪ್ರಧಾನ ಭೂಮಿಕೆ ವಹಿಸಿದ ಕೆ. ಡಿ. ಶೆಟ್ಟಿ ಮತ್ತು ಚಂದ್ರಹಾಸ ಆಳ್ವ ಅವರು ಶ್ರೀ ಕ್ಷೇತ್ರ ಕಟೀಲು ಭ್ರಮರಾಂಭಿಕೆಯನ್ನು ಪೂಜಿಸಿ ಧಾರಾವಾಹಿಯ ಯೋಜನೆಯ ಯಶಸ್ಸಿಗೆ ಪ್ರಾರ್ಥಿಸಿದರು. ಇವರನ್ನು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು. ಬಂಟರ ಸಂಘದ ಗೌರವ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಬಂಟರ ಸಂಘದ ಪರವಾಗಿ ಶುಭ ಹಾರೈಸಿದರು.

Advertisement

ಧಾರಾವಾಹಿಯ ನಿರ್ದೇಶಕ ಚೆಲ್ಲಡ್ಕ ಚಂದ್ರಹಾಸ ಆಳ್ವ ಪ್ರಾಸ್ತವಿಕ ನುಡಿಗಳನ್ನಾಡಿ, ಇದು ದೈವಾನುಗ್ರಹ ಮತ್ತು ಮತ್ತೂಮ್ಮೆ ನಮ್ಮ ಪಾಲಿಗೆ ಒಲಿದ ಯೋಗ. ಇದೊಂದು ಕಟೀಲು ಅಮ್ಮನ ಪ್ರಸಾದ ರೂಪವಾಗಿದೆ. ಈ ಪ್ರಸಾದ ಶೀಘ್ರವೇ ಕಿರುತೆರೆ ಕಂಡು ತುಳುನಾಡ ಮಾತೆಯ ಸರ್ವರ ಏಳಿಗೆ ಕಾಣಲಿ. ಆ ಮಾತೆ ಸರ್ವರನ್ನೂ ಆಶೀರ್ವಾದಿಸಲಿ. ಸರ್ವರ ಸಾಧನೆಗೆ ಪ್ರೋತ್ಸಾಹ ದೊರೆತು ರಾಷ್ಟ್ರದ ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುವ ಭರವಸೆ ನನಗಿದೆ. ಆ ಮೂಲಕ ಭ್ರಮರಾಂಬಿಕೆಯ ಕೀರ್ತಿ ವಿಶ್ವದಾದ್ಯಂತ ಮೆರೆಯಲಿ.  ಇಂದಿನ ಈ ಕಾರ್ಯಕ್ರಮದ ಮುಖೇನ‌ ಧಾರಾವಾಹಿಗೆ  ಮುನ್ನುಡಿ ಬರೆಯಲಾಗಿದ್ದು ಮಾತೆಯ ಇಚ್ಛಾfನುಸಾರ ಯೋಜನೆ ಸಿದ್ಧಿಯಾಗುವ ಆಶಯ ನಮ್ಮಲಿದೆ ಎಂದರು.

ಆರಂಭದಲ್ಲಿ ಬಂಟರ ಭವನದ ಆವರಣದಲ್ಲಿನ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್‌ ಅರವಿಂದ ಬನ್ನಿಂತ್ತಾಯ ಪೂಜಾದಿಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸುಶೀಲಾ ಶೆಟ್ಟಿ ಪ್ರಾರ್ಥನೆಗೈದರು. ಕೆ. ಡಿ. ಶೆಟ್ಟಿ ಅವರು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಶೋಕ್‌ ಪಕ್ಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಚಲನಚಿತ್ರ-ಧಾರಾವಾಹಿ ತಯಾರಿಕಾ ಮೇಲ್ವಿಚಾರಕ, ಸಹ ನಿರ್ಮಾಪಕ ಪ್ರೇಮನಾಥ್‌ ಬಿ. ಶೆಟ್ಟಿ ಮುಂಡ್ಕೂರು ವಂದಿಸಿ, ಹೆಚ್ಚುವರಿ ಕಲಾವಿದರ ಆಯ್ಕೆಯು ಜೂ. 18ರಂದು  ಬೆಳಗ್ಗೆ ಕಾರ್ಕಳದ ಹೊಟೇಲ್‌ ಕಟೀಲ್‌ ಇಂಟರ್‌ನೆàಶನಲ್‌ನಲ್ಲಿ ನಿರ್ಮಾಪಕ ದಡªಂಗಡಿ ಚೆಲ್ಲಡ್ಕ ರಾಧಾಕೃಷ್ಣ ಡಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಬಂಟರ ಸಂಘದ ವ್ಯವಸ್ಥಾಪಕ ಪ್ರವೀಣ್‌ ಎಸ್‌. ಶೆಟ್ಟಿ, ಕೊಲ್ಯಾರು ರಾಘು ಪಿ. ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಪ್ರವೀಣ್‌ ಶೆಟ್ಟಿ ಕಣಂಜಾರು, ಅಶೋಕ್‌ ಶೆಟ್ಟಿ ಕಾಪು, ಕಲಾವಿದೆಯರಾದ ಪೂಜಾ ಪೂಜಾರಿ ಕಾರ್ಕಳ,  ಚಂದ್ರಾವತಿ ದೇವಾಡಿಗ ಮತ್ತಿತರರು ಹಾಜರಿದ್ದು ಕಲಾವಿದರ ಆಯ್ಕೆಪ್ರಕ್ರಿಯೆ ನಡೆಸಿದರು.         

 ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next