Advertisement

ಕಟೀಲು ಬ್ರಹ್ಮಕಲಶ: ದುರ್ಗಾಶಾಂತಿ ಹೋಮ, ಕಲಶಾಭಿಷೇಕ

07:56 PM Jan 31, 2020 | Sriram |

ಕಟೀಲು/ಬಜಪೆ: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಆರನೇ ದಿನವಾದ ಸೋಮ ವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 5ರಿಂದ ದುರ್ಗಾಶಾಂತಿಹೋಮ, ಶಾಸ್ತಶಾಂತಿ ಪ್ರಾಯಶ್ಚಿತ್ತಗಳು, ಬೆಳಗ್ಗೆ ಭ್ರಾಮರೀವನದಲ್ಲಿ ತತ್ವ ಹೋಮ, ಶಾಂತಿಪ್ರಾಯಶ್ಚಿತ್ತಗಳು, ಕಲಶಾಭಿಷೇಕ, ಬುಧಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿಜಪ ಯಜ್ಞ ಜರಗಿದವು. ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳನ್ನು ಸ್ಥಾಪಿಸ ಲಾಯಿತು.

Advertisement

ಸಂಜೆ 5ರಿಂದ ಭದ್ರಕ ಮಂಡಲಪೂಜೆ, ಅರ್ಚನೆ, ಮಹಾಬಲಿಪೀಠ ಮತ್ತು ಕ್ಷೇತ್ರ ಪಾಲಕಲಶಾಭಿಷೇಕ, ದಿಶಾ ಹೋಮ ಗಳು, ಚೋರಶಾಂತಿ, ಉತ್ಸವಬಲಿ ಭಾÅಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ ಜರಗಿದವು. ಸೋಮವಾರ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಭೋಜನಾಲಯದಲ್ಲಿ ಸುಮಾರು 30 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಸೋಮವಾರ ಬೆಳಗ್ಗೆ ಉಪಾಹಾರಕ್ಕೆ ಮೂಡೆ ಹಾಗೂ ಸಾಂಬಾರು , ಕಾರ್ಕಳ ಕೇಕ್‌ ಮಾದರಿಯ ಸಿಹಿ ತಿಂಡಿ ಮಾಡಲಾಗಿತ್ತು. ಸುಮಾರು 150 ಕೆ.ಜಿ. ಅಕ್ಕಿಯಿಂದ 9,000 ಸಾವಿರ ಜನರಿಗೆ ಬೇಕಾಗುವಷ್ಟು ಮೂಡೆ ತಯಾರಿಸಲಾಗಿದೆ.

ಬಸ್‌ ನಿಲ್ದಾಣ, ಊಟದ ಕೌಂಟರ್‌, ರಥಬೀದಿಯಲ್ಲಿ ಬೆಳಗ್ಗೆ ಮತ್ತೆ ಸಂಜೆಯ ಸಮಯದಲ್ಲಿ ಪಾನಕ, ಕೊಕಮ್‌ ಜ್ಯೂಸ್‌ ವಿತರಿಸಲಾಯಿತು.

ಇಂದಿನ ಕಾರ್ಯಕ್ರಮ
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಏಳನೇ ದಿನವಾದ ಮಂಗಳವಾರದಂದು ಬೆಳಗ್ಗೆ 5ರಿಂದ ಚಂಡಿಕಾಯಾಗ, ಶ್ರೀ ಸೂಕ್ತ ಪುರುಷಸೂಕ್ತ ಹೋಮ, ಮಹಾಶಾಂತಿ, ಶಾಸ್ತ್ರಕಲಶಾಭಿಷೇಕ, ಮಂಟಪಸಂಸ್ಕಾರ ಜರಗುವುದು. ಬೆಳಗ್ಗೆ ಭ್ರಾಮರೀವನದಲ್ಲಿ ಬೃಹಸ್ಪತಿಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾವೃಕ್ಷಗಳ ಸ್ಥಾಪನೆ ನಡೆಯಲಿದೆ. ಸಂಜೆ 5ರಿಂದ ಶಕ್ತಿದಂಡಕಮಂಡಲಪೂಜೆ, ಅರ್ಚನೆ, ರಕ್ತೇಶ್ವರೀ ಸನ್ನಿ ಧಿಯಲ್ಲಿ ಕಲಶಾಭಿಷೇಕ, ಭ್ರಾಮರೀ ದುರ್ಗಾಹೋಮ, ಶಾಂತಿ ದುರ್ಗಾಹೋಮ, ಅಸ್ತ್ರಮಂತ್ರ ಹೋಮ, ಉತ್ಸವ ಬಲಿ, ಭ್ರಾಮರೀ ವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ ಜರಗುವುದು.

Advertisement

ರಾಜನಾಥ್‌ ಸಿಂಗ್‌ ಭೇಟಿ; ಬಿಗಿ ಭದ್ರತೆ
ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಕಟೀಲಿನ ಕ್ಷೇತ್ರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಸಂಜೆ 4 ರಿಂದ 6 ರತನಕ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಮಧ್ಯಾಹ್ನ 12 ರಿಂದ ಡಿಕೆಕ್ಟರ್‌ ಯಂತ್ರ ಅಳವಡಿಸಿ ಜನರನ್ನು ತಪಾಸಣೆ ಮಾಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next