Advertisement
ಸಂಸದ ಸಂಗಣ್ಣ ಕರಡಿ ಅವರ ಸ್ವಂತ ಗ್ರಾಮ ಕೂಕನಪಳ್ಳಿಯೇ ತಾಪಂ ಕ್ಷೇತ್ರವನ್ನು ಕಳೆದುಕೊಂಡಿದೆ. ಇನ್ನೇನು ಜಿಪಂ ಹಾಗೂ ತಾಪಂ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾಗಿದೆ.
Related Articles
Advertisement
ರಾಜ್ಯ ಚುನಾವಣಾ ಆಯೋಗವು ಕಾತರಕಿ-ಗುಡ್ಲಾನೂರು ಜಿಪಂ ಕ್ಷೇತ್ರವನ್ನು ಘೋಷಣೆ ಮಾಡಬಹುದು. ಇಲ್ಲವೇ ಬೇರೆ ಗ್ರಾಮ ಆಯ್ಕೆ ಮಾಡಿ ಹೊಸ ಜಿಪಂ ಕ್ಷೇತ್ರವಾಗಿ ಬದಲಾವಣೆ ಮಾಡಬಹುದು. ಆಯೋಗಕ್ಕೆ ಈ ಅಧಿ ಕಾರವಿದೆ. ತಾಪಂ ಕ್ಷೇತ್ರ: ಕೊಪ್ಪಳ ತಾಲೂಕಿನಲ್ಲಿ ಈ ಮೊದಲು 29 ತಾಪಂ ಕ್ಷೇತ್ರಗಳಿದ್ದವು. ಆದರೆ ಕ್ಷೇತ್ರ ಮರು ವಿಂಗಡಣೆ ವೇಳೆ 24ಕ್ಕೆ ತಾಪಂ ಕ್ಷೇತ್ರ ಕುಸಿತ ಕಂಡಿವೆ.
ಈ ಪೈಕಿ ಬೆಟಗೇರಿ, ಕಾತರಕಿ-ಗುಡ್ಲಾನೂರು, ಹುಲಿಗಿ, ಕೂಕನಪಳ್ಳಿ, ಬಹದ್ದೂರಬಂಡಿ ಗ್ರಾಮಗಳು ಮೊದಲಿದ್ದ ತಾಪಂ ಕ್ಷೇತ್ರವನ್ನು ಕಳೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಹುಲಿಗಿ ಗ್ರಾಮವು ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿಯೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ ಈ ಬಾರಿ ಹುಲಿಗಿ ಗ್ರಾಮವು ತಾಪಂ ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ರದ್ದಾದ ತಾಪಂ ಕ್ಷೇತ್ರಗಳ ಹಳ್ಳಿಗಳನ್ನು ಅಕ್ಕಪಕ್ಕದ ತಾಪಂ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದೆ. ಸಂಸದರ ಸ್ವ ಗ್ರಾಮ ಕೂಕನಪಳ್ಳಿ ಕ್ಷೇತ್ರ ರದ್ದು: ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ಕ್ಷೇತ್ರದಲ್ಲಿ 30 ವರ್ಷದಿಂದ ರಾಜಕೀಯದಲ್ಲಿದ್ದಾರೆ. ತಾಲೂಕಿನ ಕೂಕನಪಳ್ಳಿಯೇ ಅವರ ಸ್ವಂತ ಗ್ರಾಮವಾಗಿದ್ದು, ಆ ಗ್ರಾಮವೇ ಇಂದು ತಾಪಂ ಕ್ಷೇತ್ರ ಕಳೆದುಕೊಂಡಿದೆ. ಇನ್ನೂ ಹೋರಾಟಕ್ಕೆ ಹೆಸರಾದ ತಾಲೂಕಿನ ಬೆಟಗೇರಿ ಗ್ರಾಮ ತಾಪಂ ಕ್ಷೇತ್ರವನ್ನು ಕಳೆದುಕೊಂಡಿದೆ.
ಸಂಸದರಿಗೆ ಬೆಟಗೇರಿ ಭಾಗ ಹಲವು ಬಾರಿ ಕೈ ಹಿಡಿದಿದೆ. ಆದರೆ ಅದೂ ಈ ಬಾರಿ ಕ್ಷೇತ್ರ ಕಳೆದುಕೊಂಡಿದ್ದು, ಹಲವು ಚರ್ಚೆಗಳಿಗೆ ಎಡೆಮಾಡಿ ಕೊಟ್ಟಿದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿದ್ದು, ತಾಪಂ ಕ್ಷೇತ್ರಗಳ ಸಂಖ್ಯೆಯು ಇಳಿಕೆಯಾಗಿದೆ. ಏರಿಳಿತದ ಅಂಕಿ-ಅಂಶದಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ ಕ್ಷೇತ್ರಗಳ ಹೆಸರು ಬದಲಾದರೂ ಅಚ್ಚರಿಪಡಬೇಕಿಲ್ಲ. ಹೆಸರು ಬದಲಾವಣೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪರಮಾಧಿ ಕಾರ ಇರುವ ಹಿನ್ನೆಲೆಯಲ್ಲಿ ಜನಸಂಖ್ಯೆ ಸೇರಿ ವಿವಿಧ ಆಯಾಮದಲ್ಲಿ ಲೆಕ್ಕಾಚಾರ ಹಾಕಿ ಕ್ಷೇತ್ರಗಳ ಹೆಸರು ಬದಲು ಮಾಡಿದರೂ ಅಚ್ಚರಿಪಡಬೇಕಿಲ್ಲ,