Advertisement

ಕಟಪಾಡಿ: ಕಂಬಳಗದ್ದೆ ಹೆದ್ದಾರಿ ಬಳಿ ಅಪಘಾತಗಳಿಗೆ ತಡೆ 

01:00 AM Feb 03, 2019 | Team Udayavani |

ಕಾಪು: ರಾ.ಹೆ. ಹೆದ್ದಾರಿ 66 ಹಾದು ಹೋಗುವ ಕಟಪಾಡಿ ಕಂಬಳ ಗದ್ದೆ  ಅಪಘಾತಗಳ ತಾಣವಾಗಿದ್ದು, ಇಲ್ಲಿ ಅವಘಡಗಳನ್ನು ತಪ್ಪಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ. ಅದರಲ್ಲೂ ಫೆ.2 ಮತ್ತು 3 ರಂದು ಕಟಪಾಡಿ ಬೀಡು ಮೂಡು – ಪಡು ಜೋಡುಕರೆ ಕಂಬಳ ನಡೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.  

Advertisement

ಅಪಾಯಕಾರಿ ಪ್ರದೇಶ 
ಕಂಬಳ ಗದ್ದೆಗೆ ತಾಗಿಕೊಂಡಂತಿರುವ ಹೆದ್ದಾರಿ ಪ್ರದೇಶ ಅಪಾಯಕಾರಿ ಪ್ರದೇಶ ವಾಗಿದೆ. ಇಲ್ಲಿ 2013ರಲ್ಲಿ ನಡೆದಿರುವ ಬೈಕ್‌ ಮತ್ತು ಮಾರುತಿ ಆಮ್ನಿ ನಡುವಿನ ಅಪಘಾತದಲ್ಲಿ ಕಂಬಳ ವೀಕ್ಷಿಸಿ ಹಿಂತಿರುಗುತ್ತಿದ್ದ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದರು. 2014ರಲ್ಲಿ ಪೊಲೀಸ್‌ ಒಬ್ಬರು ಮೃತಪಟ್ಟಿದ್ದರು. ಅದೇ ವರ್ಷ ಫೆ. 27ರಂದು ಕಂಬಳಗದ್ದೆ ಬಳಿಯೇ ನಡೆದಿದ್ದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು.  

10 ವರ್ಷದಲ್ಲಿ 15ಕ್ಕೂ ಹೆಚ್ಚು ಬಲಿ 
ಮೂಡಬೆಟ್ಟು – ಕಲ್ಲಾಪು ನಡುವೆ 1 ಕಿ.ಮೀ. ಅಂತರದಲ್ಲಿ 10 ವರ್ಷಗಳ‌ಲ್ಲಿ 15ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಅಪಘಾತಗಳು ಸಂಭವಿ ಸಿದ್ದು, ಗಾಯಾಳುಗಳ ಸಂಖ್ಯೆಅತ್ಯಧಿಕವಿದೆ.  

ವೇಗ ನಿಯಂತ್ರಣಕ್ಕೆ ಬ್ಯಾರಿ ಕೇಡ್‌
ಕಂಬಳ ದಿನಗಳಂದು ವೇಗ ನಿಯಂತ್ರಣಕ್ಕೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್‌ ಮಾಡದಂತೆ ಎಚ್ಚರಿಕೆ ಫ‌ಲಕ ಹಾಕಲಾಗಿದೆ. ಕಂಬಳ ವೀಕ್ಷಣೆಗೆ ಬರುವವರು 
ಕಲ್ಲಾಪು ಜಂಕ್ಷನ್‌ನಿಂದ ಮೂಡಬೆಟ್ಟು ಜಂಕ್ಷನ್‌ವರೆಗೆ ಹೆದ್ದಾರಿ ಬದಿ ವಾಹನ ನಿಲ್ಲಿಸುವುದು ಎಲ್ಲ ರೀತಿಯ ಸಮಸ್ಯೆಗೆ ಕಾರಣವಾಗುತ್ತಿತ್ತು.

ಅಪಘಾತ ತಡೆಗೆ ಒತ್ತು.  
ಕಂಬಳ ಜಾಗದ ಪ್ರದೇಶ ಅಪಾಯಕಾರಿ ಸ್ಥಳವಾಗಿದ್ದು, ಅಪಘಾತ ತಡೆಗೆ ಬ್ಯಾರಿಕೇಡ್‌ ಅಳವಡಿಕೆ, ಎಚ್ಚರಿಕೆ ಫ‌ಲಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗಿದೆ.  
-ಬಿ. ಲಕ್ಷ್ಮಣ್‌ ಪ್ರಭಾರ ಠಾಣಾಧಿಕಾರಿ, ಕಾಪು ಪೊಲೀಸ್‌ ಠಾಣೆ

Advertisement

ಸಮಿತಿಯ ಸಹಯೋಗ
ಕಟಪಾಡಿ ಕಂಬಳದ ವೇಳೆ ಹೆದ್ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವುದು ಶ್ಲಾಘನೀಯ ಕ್ರಮವಾಗಿದೆ. ಪೊಲೀಸ್‌ ಇಲಾಖೆ ನಡೆಸುವ ಮುನ್ನೆಚ್ಚರಿಕಾ ಪ್ರಯತ್ನಕ್ಕೆ ಕಂಬಳ ಸಮಿತಿ ಕೂಡ ಸಹಯೋಗ ನೀಡುತ್ತಿದೆ. 
-ಕೆ. ವಿನಯ ಬಲ್ಲಾಳ್‌,ಕಟಪಾಡಿ ಬೀಡು

Advertisement

Udayavani is now on Telegram. Click here to join our channel and stay updated with the latest news.

Next