Advertisement

ಕಟಪಾಡಿ: ಗಾಳಿಗೆ ಉರುಳಿದ ಮರ

12:19 PM Jun 11, 2019 | sudhir |

ಕಟಪಾಡಿ: ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕಟಪಾಡಿ, ಉದ್ಯಾವರ, ಕೋಟೆ, ಪಾಂಗಾಳ, ಉಳಿಯಾರಗೋಳಿ ಪರಿಸರದಾದ್ಯಂತ ಗಾಳಿಯಲ್ಲಿ ಮಣ್ಣಿನ ಧೂಳು, ಮರಳಿನ ಕಣಗಳು ಸೇರಿಕೊಂಡು ಧೂಳಿನಿಂದಾವೃತ ಗಾಳಿ ರವಿವಾರ ಬೀಸುತ್ತಿದೆ.

Advertisement

ಇದರೊಂದಿಗೆ ಎಲ್ಲೆಂದರಲ್ಲಿ ಬಿಸಾಡಿದ ತ್ಯಾಜ್ಯದ ರಾಶಿಯಿಂದ ಪ್ಲಾಸ್ಟಿಕ್‌ ಬಾಟಲಿ, ಹಾಳೆ, ಕಾಗದದ ಹಾಳೆಗಳು ಗಾಳಿಯಲ್ಲಿ ರಸ್ತೆಯತ್ತ ಹಾರುತ್ತಿವೆ.

ಉಳಿಯಾರಗೋಳಿ ದಂಡತೀರ್ಥ ವಿದ್ಯಾಸಂಸ್ಥೆಯ ಬಳಿಯ ಮಾಳವಿಕ ಕಟ್ಟಡದ ಮುಂಭಾಗದ ಹಣ್ಣಿನ ಗಿಡವೊಂದು ರಾಷ್ಟ್ರಿಯ ಹೆದ್ದಾರಿಯ ಭಾಗಕ್ಕೆ ಉರುಳಿ ಬಿದ್ದಿದೆ. ಕೋಟೆ, ಪಡುಕರೆ ಭಾಗದಲ್ಲಿ ಸ್ವಲ್ಪ ಸಮುದ್ರದ ಉಬ್ಬರ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next