Advertisement

Katapadi ಶ್ರೀ ಕ್ಷೇತ್ರ ಪೇಟೆಬೆಟ್ಟು; ಬಬ್ಬುಸ್ವಾಮಿ, ಕೊರಗಜ್ಜ , ಪರಿವಾರ ದೈವಗಳ ನೇಮ

11:37 PM Jan 07, 2024 | Team Udayavani |

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್‌ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಭಗವಾನ್‌ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮವು ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

Advertisement

ಮಧ್ಯಾಹ್ನ ಶ್ರೀ ಕ್ಷೇತ್ರ ಶುದ್ಧಿ ಪೂಜೆಯ ಬಳಿಕ ಭಂಡಾರ ಹೊರಟು ಕಟಪಾಡಿ ಪೇಟೆಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದು ರಾತ್ರಿ ಭಗವಾನ್‌ ಶ್ರೀ ಬಬ್ಬುಸ್ವಾಮಿಯ ನೇಮ ಮತ್ತು ಆದಿಶಕ್ತಿ ಶ್ರೀ ತನ್ನಿಮಾನಿಗ ದೇವಿಯ ನೇಮ ಜರಗಿತು.

ಅವಿಭಜಿತ ದ.ಕ. ಜಿಲ್ಲೆಯ ಪ್ರಸಿದ್ಧ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ ನಡೆಯಿತು. ದಾನಿಗಳು, ಸೇವಕರು ಹಾಗೂ ಸಾಧಕರನ್ನು ಸಮ್ಮಾನಿಸಲಾಯಿತು.

ರವಿವಾರ ಬೆಳಗ್ಗೆ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮ, ಮಧ್ಯಾಹ್ನ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮ ಜರಗಿತು. ಮಹಾರಾಷ್ಟ್ರ, ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಭಕ್ತರು ಪಾಲ್ಗೊಂಡಿದ್ದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಪಾಂಗಾಳ ನಾಯಕ್‌ ಮನೆತನದವರು, ಕಟಪಾಡಿ ಹೊಸಮನೆ ವೈ. ಭರತ್‌ ಹೆಗ್ಡೆ, ಗರಡಿ ಮನೆ ಅಶೋಕ್‌ ಎನ್‌. ಪೂಜಾರಿ, ಕೆ. ಪ್ರೇಮ್‌ ಕುಮಾರ್‌, ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ಗುರಿಕಾರ ಹರಿಶ್ಚಂದ್ರ ಪಿಲಾರ್‌, ನಿವೃತ್ತ ಪೊಲೀಸ್‌ ಉಪ ನಿರೀಕ್ಷಕ ರಾಜ್‌ಗೋಪಾಲ್ , ಪ್ರಮುಖರಾದ ತುಕಾರಾಮ ಎಸ್‌. ಉರ್ವ, ಉಮೇಶ್‌, ಪ್ರಧಾನ ಅರ್ಚಕ ಜಯಕರ್‌ ವಿ., ಯಶವಂತ್‌, ರಾಜಕಲ ಮಧ್ಯಸ್ಥ ರವಿ ಶೆಟ್ಟಿ ಮಣಿಪಾಲ, ಮಧ್ಯಸ್ಥ ಪ್ರಸಾದ್‌ ಕೊರಂಗ್ರಪಾಡಿ, ಮಧುಚಂದ್ರ ಪಾತ್ರಿ, ಪ್ರಶಾಂತ್‌ ಪಾತ್ರಿ, ಕೃಷ್ಣ ಪಾತ್ರಿ, ಸುದೀಪ್‌, ನವೀನ್‌ ಕುಮಾರ್‌, ಸಂದೇಶ್‌, ಭವನೇಶ್‌, ಸಂಜೀವ, ಗೋಪಾಲ ಆರ್‌.ಎಂ., ವಿಜಯರಾಜ್‌, ಲಕ್ಷ್ಮಣ್‌, ಕೌಶಿಕ್‌, ಸ್ವರೂಪ್‌, ಸತ್ಯರಾಜ್‌, ಶಂಕರ್‌ ಜೆ.ಎನ್‌. ನಗರ, ಜಯಕರ್‌, ಸುಧಾಕರ್‌, ತಂಗಡಿ ಮಹಿಳಾ ಬಳಗ, ಸಂಗಮ ಫ್ರೆಂಡ್ಸ್‌ ಕಟಪಾಡಿ, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next