Advertisement

Kasturiranganವರದಿ: ಕೇರಳ ಹೊರತು ಉಳಿದ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿವರದಿ ನೀಡಿಲ್ಲ

10:02 AM Jan 02, 2025 | Team Udayavani |

ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಫಿಸಿಕಲ್ ಸರ್ವೆ ನಡೆಸಿದಾಗ ಮಾತ್ರ ಯಥಾಸ್ಥಿತಿ ತಿಳಿಯಲಿದೆ. ಆದರೆ ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಾಧ್ಯಮ ಕೈಗಾರಿಕಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಕಡಬ ತಾಲೂಕಿನ ಕೇರ್ಪಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ ಮಾಡಿ ಈ ವರದಿ ಮಾಡಲಾಗಿದೆ. ಫಿಸಿಕಲ್ ಸರ್ವೆ ಮಾಡಬೇಕು. ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಎಷ್ಟು ತೋಟ ಇದೆ, ಎಷ್ಟು ಕಾಡು ಎಂಬ ಸರ್ವೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ ಕಸ್ತೂರಿ ರಂಗನ್ ವರದಿ ಸರ್ವೆ ಮಾಡಿರುವುದು ಹೆಲಿಕಾಪ್ಟರ್ ಮೂಲಕ ಎಂದ ಅವರು, ಎಲ್ಲಿ ಕಾಫಿ, ಅಡಿಕೆ, ತೆಂಗಿನ ಮತ್ತಿತರ ತೋಟ ಇದೆಯೋ ಅಲ್ಲಿ ಹಸುರು ಬಂದಿದೆ. ಈ ಕಾರಣದಿಂದ ಈ ಎಲ್ಲವನ್ನೂ ಕಾಡು ಎಂದು ಅವರು ತೀರ್ಮಾನ ಮಾಡಿದ್ದಾರೆ. ಇದು ತಪ್ಪು ಎಂಬುದನ್ನು ನಾವು ಬಹಳ ಹಿಂದೆಯೇ ತಿಳಿಸಿದ್ದೆವು ಎಂದು ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ತಿಳಿಸಿದ್ದೆವು. ಆದರೆ ಕೇರಳ ಒಂದೇ ರಾಜ್ಯ ಫಿಸಿಕಲ್ ಸರ್ವೆ ಮಾಡಿ ವರದಿ ನೀಡಿದೆ. ಕರ್ನಾಟಕದಲ್ಲಿ ಮಾತ್ರ ಈವರೆಗೆ ಯಥಾಸ್ಥಿತಿಯಲ್ಲಿ ಫಿಸಿಕಲ್ ಸರ್ವೆ ಆಗಿಲ್ಲ. ಫಿಸಿಕಲ್ ಸರ್ವೆ ಮಾಡಿದಾಗ ಮಾತ್ರ ಈ ಭಾಗದಲ್ಲಿರುವ ತೋಟ, ವಿದ್ಯಾಸಂಸ್ಥೆ, ಕಲ್ಚರಲ್ ಸೆಂಟರ್, ಕಾಡು, ತೋಟ ಇರುವುದು ತಿಳಿಯುತ್ತದೆ ಎಂದರು.

ಕಾಡು ಮತ್ತು ತೋಟವನ್ನು ಬೈಫರ್ಗಿಕೇಟ್ ಮಾಡುವ ಕೆಲಸ ಆಗಬೇಕಿತ್ತು. ಈ ರೀತಿಯ ಯಥಾ ಸ್ಥಿತಿಯ ವರದಿಯನ್ನು ಕೇರಳ ರಾಜ್ಯ ಹೊರತು ಪಡಿಸಿ ಉಳಿದ ಯಾವ ರಾಜ್ಯವೂ ನೀಡಿಲ್ಲ, ಈ ವರದಿ ನೀಡಬೇಕು ಎಂಬುದು ಸುಪ್ರೀಂ ಕೋರ್ಟ್ ಅಪೇಕ್ಷೆ. ಅದನ್ನು ನಾವು ಹಿಂದಿನಿಂದ ಹಾಗೂ ಇವತ್ತೂ ಒತ್ತಾಯಿಸುತ್ತೇವೆ. ಆಗ ಮಾತ್ರ ಇದಕ್ಕೆ ನ್ಯಾಯ ಸಿಗಲು ಸಾಧ್ಯ‌ ಎಂದು ಹೇಳಿದರು.

Advertisement

ಈ ಹಿಂದೆ ಸುಪ್ರೀಂ ಕೋರ್ಟ್‌ ಹೇಳಿತ್ತು, ಇಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು, ಆದರೆ ಇವಾಗ ರೆಡ್ ಝೋನ್ ಇಂಡಸ್ಟ್ರೀಸ್ ಹೊರತುಪಡಿಸಿ ಬಾಕಿ ಯಾವುದೇ ರೈತರು ಮಾಡುವ ಕೆಲಸಕ್ಕೆ ಯಾವುದೇ ಆತಂಕ ಇಲ್ಲ. ಕಸ್ತೂರಿ ರಂಗನ್ ವರದಿ ಸಹಜವಾಗಿ ನಮಗೆ ಆತಂಕ ತರುವಂತಹದ್ದೇ. ಆದರೆ ಈಗ ಕೇಂದ್ರ ಸರಕಾರ ಹೇಳಿದೆ ನಮ್ಮ ರೈತರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಬಾರದು ಮತ್ತು ಯಥಾ ಸ್ಥಿತಿ ವರದಿಯನ್ನು ರಾಜ್ಯ ಸರಕಾರಗಳು ನೀಡಲು ತಿಳಿಸಿದೆ. ಅದಕ್ಕಾಗಿ ಕೇಂದ್ರ ಸರಕಾರ ರೈತರ ಪರವಾಗಿ ನಿಂತಿದೆ, ರೈತರ ಪರವಾಗಿ ವಾದ ಮಂಡನೆ ಮಾಡುತ್ತಿದೆ. ಸರ್ವೆ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕಾಗಿದ್ದು, ಅದನ್ನು ರಾಜ್ಯ ಸರಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು‌.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next