Advertisement
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜರುಗಿದ ಕಸ್ತೂರಿ ರಂಗನ್ ವರದಿ- ಚಿಂತನಾ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಯಿತು.
Related Articles
Advertisement
ಜಿಲ್ಲಾದ್ಯಂತ ಪ್ರತಿಭಟನೆ ಮತ್ತು ರ‍್ಯಾಲಿ ಗೂ ತೀರ್ಮಾನ:ಉತ್ತರ ಕನ್ನಡ ಜಿಲ್ಲೆಯ 6,998 ಚ.ಕೀ.ಮೀ ಪ್ರದೇಶದಲ್ಲಿನ, 9 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಯಾಗಿರುವ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಜಿಲ್ಲೆಯ ಜನತೆಯ ಮೇಲೆ ಉಂಟಾಗುವ ವ್ಯತಿರಿಕ್ತವಾದ ಪರಿಣಾಮವನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜಿಲ್ಲಾದ್ಯಂತ ಪ್ರತಿಭಟನೆ ಮತ್ತು ರ‍್ಯಾಲಿ ಸಂಘಟಿಸಲು ತಿರ್ಮಾನಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. ಈ ವೇಳೆ ಲಕ್ಷ್ಮಣ ಮಾಳ್ಳಕ್ಕನವರ, ದೇವರಾಜ ಮರಾಠಿ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಉದಯ ನಾಯ್ಕ, ರಾಜು ನರೇಬೈಲ್. ಎಮ್ ಕೆ ನಾಯ್ಕ ಕಂಡ್ರಾಜಿ, ಜೈ ಪ್ರಕಾಶ ಹಬ್ಬು, ಇಬ್ರಾಹಿಂ ಗೌಡಳ್ಳಿ ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ದುಗ್ಗು ಮರಾಠಿ, ರಾಮ ಪೂಜಾರಿ, ಬೆಳ್ಳಪ್ಪ ಗೌಡ್ರು, ಶಿವು ಗೌಡ್ರು, ಸುರೇಶ ನಾಯ್ಕ, ಅನಂತ ನಾಯ್ಕ, ಗೋವಿಂದ ಮಂಜಪ್ಪ ಗೌಡ, ನಾರಾಯಣ ಸರ್ವಾ ಗೌಡ ಮುಂತಾದವರು ಉಪಸ್ಥಿತರಿದ್ದರು.