Advertisement

ರೈತರ ಸುತ್ತ ‘ಕಾಸಿನ ಸರ’; ಮಾರ್ಚ್ 3 ರಿಲೀಸ್

02:51 PM Mar 01, 2023 | Team Udayavani |

ಸದ್ಯ ಎಲ್ಲೆಡೆ ಸಾವಯವ ಕೃಷಿ, ಸಿರಿ ಧಾನ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಸಾಯನಿಕಗಳಿಂದ ನಮ್ಮ ಭೂಮಿಯನ್ನು ಮುಕ್ತವಾಗಿಸಿ, ರೈತರ ಬಾಳಲ್ಲಿ ನಿಜವಾದ ಸಂಕ್ರಾಂತಿ ಮೂಡಿಸುವ ಚಿತ್ರವೊಂದು ತಯಾರಾಗಿದೆ.

Advertisement

ಎನ್‌ ಆರ್‌. ನಂಜುಂಡೇಗೌಡ ಅವರ ನಿರ್ದೇಶನ ಹಾಗೂ ಈ ದೊಡ್ಡ ನಾಗಯ್ಯ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ “ಕಾಸಿನಸರ’. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಹಂತಕ್ಕೆ ಬಂದಿರುವ ಚಿತ್ರ ಮಾರ್ಚ್‌ 3 ರಂದು ತೆರೆಕಾಣಲಿದೆ.

“ಕಾಸಿನಸರ ಚಿತ್ರವನ್ನು 40 ದಿನಗಳಲ್ಲಿ ಶೂಟಿಂಗ್‌ ಮುಗಿಸಿ, 4 ತಿಂಗಳಲ್ಲಿ ತೆರೆಗೆ ತರುತ್ತಿದ್ದೇವೆ. ಮಾರ್ಚ್‌ 3 ರಂದು ರಾಜ್ಯಾದ್ಯಂತ 100 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದ್ದೇವೆ ಆದರೆ ಕೃಷಿ ಇಲ್ಲದೆ ಜೀವನ ಸಾಗದು ಎಂಬುದನ್ನು ಅಲ್ಲಗ ಳೆಯಲು ಸಾಧ್ಯವಿಲ್ಲ . ಆಹಾರ ಕೃಷಿಗೆ ಸಂಬಂಧ ಪಟ್ಟಂತೆ ಸಾವಯವ ಕೃಷಿ ಪ್ರಮುಖವಾಗಿದ್ದು, ನೈಸರ್ಗಿಕ ಆಹಾರ ನಮಗೆ ಬೇಕಾಗಿದೆ. ಅದರಾಚೆಗೆ ನಮ್ಮ ಭೂಮಿ ರಾಸಾಯನಿಕಗಳಿಂದ ದಿನೇ ದಿನೆ ಸವೇತಕ್ಕೆ ಒಳಗಾಗಿದೆ. ಇದರ ಕುರಿತು ತಿಳುವಳಿಕೆ ನೀಡುವಲ್ಲಿ ಮನರಂಜನಾ ಮಾಧ್ಯಮ ಸಿನಿಮಾ ಮೂಲಕ ಸಂದೇಶ ಸಾರುವ ಕೆಲಸವಾಗುತ್ತಿದೆ’ ಎಂಬುದು ಚಿತ್ರ ನಿರ್ದೇಶಕ ನಂಜುಂಡೇಗೌಡರ ಮಾತಾಗಿದೆ.

ನಟ ವಿಜಯ್‌ ರಾಘವೇಂದ್ರ ಮಾತನಾಡಿ, “ಕಾಸಿನ ಸರ ಕೇವಲ ಬಂಗಾರ ಅಥವಾ ಸರಕ್ಕೆ ಸೀಮಿತವಾಗಿಲ್ಲ. ಒಂದು ಊರು, ಒಬ್ಬ ಕೃಷಿಕ, ಆತನ ಮನೆ, ಮನೆಜನರ ಒಗ್ಗಟ್ಟು, ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳುತ್ತದೆ. ಚಿತ್ರ ಕೃಷಿಕನ ಬದುಕು, ಬವಣೆ, ಸಾವಯವ ಕೃಷಿಯ ಮಹತ್ವವನ್ನು ಹೇಳುತ್ತದೆ. ಚಿತ್ರದಲ್ಲಿ ಒಂದು ಸೆಂಟಿಮೆಂಟ್‌, ಸಣ್ಣ ಹ್ಯೂಮರ್‌ ಎಲ್ಲವೂ ಇದೆ. ಕಮರ್ಷಿಯಲ್‌ ಜೊತೆಗೆ ಕೃಷಿಯ ಮಹತ್ವ ಸಾರುವ ಅಂಶವನ್ನು ನೋಡಬಹುದು’ ಎಂದರು.

ನಿರ್ಮಾಪಕ ದೊಡªನಾಗಯ್ಯ ಮಾತನಾಡಿ, “ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವನು. ನಾನೂ ಕೃಷಿಕ. ಈ ಮೊದಲು ಒಂದು ಕಿರುಚಿತ್ರ ನಿರ್ಮಿಸಿದ್ದೆ. ಆ ಕಿರುಚಿತ್ರ ಸಂದರ್ಭದಲ್ಲಿ ನನಗೆ ಪರಿಚಯವಾದವರು ನಂಜುಂಡೇಗೌಡ . ನಿರ್ದೇಶಕರು ಒಂದಿಷ್ಟು ಕಥೆಗಳನ್ನು ಹೇಳಿದರು. ಆದರೆ ನನಗೆ ಇಷ್ಟವಾಗಿದ್ದು ಕಾಸಿನ ಸರ ಕಥೆ. ಸಾವಯವ ಕೃಷಿಯ ಮಹತ್ವ ಸಾರುವ ಚಿತ್ರ. ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇಂತಹ ಚಿತ್ರ ನಿರ್ಮಾಣ ಮಾಡಿರುವುದಕ್ಕೆ ಹೆಮ್ಮೆಯಿದೆ’ ಎನ್ನು ವುದು ಅವರ ಮಾತು.

Advertisement

ಚಿತ್ರದ ನಾಯಕ ನಟಿ ಹರ್ಷಿಕಾ ಪೂಣಚ್ಚ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ ಚಿತ್ರದ ಕುರಿತು ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next