Advertisement

ಹಿಂದೂ ಅರಸನ ಆಳ್ವಿಕೆಯಡಿ ಕಾಶ್ಮೀರ ಶಾಂತಿಯಿಂದಿತ್ತು: ಯೋಗಿ ಆದಿತ್ಯನಾಥ

05:01 PM Oct 29, 2018 | udayavani editorial |

ಲಕ್ನೋ : ” ಹಿಂದೂ ಅರಸನ ಆಳ್ವಿಕೆ ಇದ್ದಷ್ಟು ಕಾಲ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಹಿಂದೂ ಆಳ್ವಿಕೆ ಮುಗಿದ ಬಳಿಕ ಹಿಂದೂ ಸಮುದಾಯದವರು ಪತನವನ್ನು ಕಂಡರು” ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವಿವಾದ ಸೃಷ್ಟಿಸಿದ್ದಾರೆ.

Advertisement

ಭಾರತೀಯ ಜನತಾ ಪಕ್ಷದ ಸಿಕ್ಖ್ ಸಮಾಗಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ  ಸಿಎಂ ಯೋಗಿ, “ಜಮ್ಮು ಕಾಶ್ಮೀರದ ಸ್ಥಿತಿ ಇವತ್ತು ಏನಾಗಿದೆ ? ಅಲ್ಲಿನ ಜನರು ತಾವು ಸುರಕ್ಷಿತರಿದ್ದೇವೆ ಎಂದು ಹೇಳಲು ಸಾಧ್ಯವೇ ? ಇಲ್ಲ; ನಾವು ಇತಿಹಾಸದಿಂದ ಕಲಿಯಬೇಕಾಗಿದೆ ” ಎಂದು ಹೇಳಿದರು. 

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕ, ಕೇಂದ್ರ ಸಚಿವ ಜೀತೇಂದ್ರ ಸಿಂಗ್‌ ಅವರು ಜಮ್ಮು ಕಾಶ್ಮೀರ ರಾಜಕಾರಣಿಗಳನ್ನು ಟೀಕಿಸುತ್ತಾ, “ಮುಖ್ಯವಾಹಿನಿಯ ಕಾಶ್ಮೀರೀ ರಾಜಕಾರಣಿಗಳು ಶೌಚಾಲಯಕ್ಕೆ ಹೋಗಬೇಕಿದ್ದರೂ ಹುರಿಯತ್‌ ಕಾನ್ಫರೆನ್ಸ್‌ ಅನುಮತಿಯನ್ನು ಪಡೆಯಬೇಕಾಗಿದೆ ” ಎಂದು ಹೇಳಿದ್ದರು. 

ಕೆಲ ದಿನಗಳ ಹಿಂದೆ ಕಾಶ್ಮೀರಿ ಯುವಕರ ಕಲ್ಲೆಸೆವ ಗಂಪಿನ ದಾಳಿಗೆ ಗುರಿಯಾಗಿ ತಲೆಗೆ ಗಂಭೀರು ಏಟು ಪಡೆದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸಿಪಾಯ್‌ ರಾಜೇಂದ್ರ ಸಿಂಗ್‌ ಅವರ ನಿಧನಕ್ಕೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲ  ಮತ್ತು ಮೆಹಬೂಬ ಮುಫ್ತಿ ಏಕೆ ಸುಮ್ಮಗಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಸಚಿವ ಜೀತೇಂದ್ರ ಸಿಂಗ್‌ ಪ್ರತಿಕ್ರಿಯಿಸುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next