Advertisement

ಪಿಎಚ್‌ಡಿ ವಿದ್ಯಾರ್ಥಿ ಸೇರಿ 4 ಮಂದಿಗೆ ಎನ್‌ಐಎ ಸಮನ್ಸ್‌

06:45 AM Sep 25, 2017 | Team Udayavani |

ಶ್ರೀನಗರ: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಭಾನುವಾರ ಕಾಶ್ಮೀರ ವಿವಿಯ ಪಿಎಚ್‌ಡಿ ವಿದ್ಯಾರ್ಥಿ, ವ್ಯಾಪಾರಿ ಒಕ್ಕೂಟದ ಮುಖ್ಯಸ್ಥ ಹಾಗೂ ಇಬ್ಬರು ಹುರಿಯತ್‌ ನಾಯಕರಿಗೆ ಸಮನ್ಸ್‌ ಜಾರಿ ಮಾಡಿದೆ. 

Advertisement

ಸೋಮವಾರವೇ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ವ್ಯಾಪಾರಿ ಒಕ್ಕೂಟದ ಮುಖ್ಯಸ್ಥ ಯಾಸೀನ್‌ ಖಾನ್‌ಗೆ ಸಮನ್ಸ್‌ ಜಾರಿ ಮಾಡಿದ್ದನ್ನು ಖಂಡಿಸಿ, ಕಾಶ್ಮೀರ ವ್ಯಾಪಾರಿಗಳು ಮತ್ತು ಮಾರುಕಟ್ಟೆ ಒಕ್ಕೂಟವು ಸೋಮವಾರ ಪ್ರತಿಭಟನೆಗೆ ಕರೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next