Advertisement

ರಜೆಯಲ್ಲಿ ತೆರಳಿದ್ದ ಯೋಧ ಶವವಾಗಿ ಪತ್ತೆ

06:00 AM Nov 26, 2017 | Team Udayavani |

ಶ್ರೀನಗರ: ಇಲ್ಲಿನ ಶೋಪಿಯಾನ್‌ ಪ್ರಾಂತ್ಯದಲ್ಲಿ ಉಗ್ರರು ಇರ್ಫಾನ್‌ ಅಹ್ಮದ್‌ ಮಿರ್‌ (23) ಎಂಬ ಯೋಧನನ್ನು ಹತ್ಯೆ ಮಾಡಿದ್ದಾರೆ. ಬಂದೂಕಿನ ಗುಂಡುಗಳು ತಗುಲಿರುವ ಅವರ ಮೃತದೇಹ ಶೋಪಿಯಾನ್‌ ವಾತು¾ಲ್ಲಾ ಕೀಗಮ್‌ ಪ್ರಾಂತ್ಯದಲ್ಲಿ ಶನಿವಾರ ಪತ್ತೆಯಾಗಿದೆ.

Advertisement

ಶೋಪಿಯಾನ್‌ ಪ್ರಾಂತ್ಯದ ಸೆಜಾನ್‌ ಕೀಗಮ್‌ನಲ್ಲಿ ವಾಸವಾಗಿದ್ದ ಇರ್ಫಾನ್‌ ಅವರನ್ನು ಅಡ್ಡಗಟ್ಟಿದ ಉಗ್ರರು ಆನಂತರ ಗುಂಡು ಹಾರಿಸಿ ಹತ್ಯೆಗೈದಿರಬಹುದೆಂದು ಸೇನಾ ಮೂಲಗಳು ಶಂಕಿಸಿವೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇರ್ಫಾನ್‌ ಅವರು 10 ದಿನಗಳ ರಜೆಯಲ್ಲಿ ಶೋಪಿಯಾನ್‌ನಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದರು. ಶುಕ್ರವಾರ ಸಂಜೆ ನಂತರ ಅವರು ಕಣ್ಮರೆಯಾಗಿದ್ದರು. ಶನಿವಾರ ಮನೆಯಿಂದ ಸ್ವಲ್ಪ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಪಕ್ಕದಲ್ಲೇ ಅವರ ಕಾರು ಕೂಡ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಂಡನೆ: ಯೋಧನ ಹತ್ಯೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಮುಫ್ತಿ, “”ಇರ್ಫಾನ್‌ ಅವರ ಹತ್ಯೆಯು, ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಡೆಸುತ್ತಿರುವ ಯತ್ನ ಗಳಿಗೆ ಯಾವುದೇ ಧಕ್ಕೆ ತಾರದು” ಎಂದು ತಿಳಿಸಿದ್ದಾರೆ. ಒಮರ್‌ ಅಬ್ದುಲಾ ಕೂಡಾ ಟ್ವಿಟರ್‌ನಲ್ಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, “”ಯೋಧ ಇರ್ಫಾನ್‌ ಹತ್ಯೆ ಖಂಡನೀಯ” ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next