Advertisement

ಇಂದಿನಿಂದ ಮಲೇಷ್ಯಾ ಸಭೆ ; ಕಾಶ್ಮೀರ ಪರಿಸ್ಥಿತಿ ಬಗ್ಗೆ ಪ್ರಧಾನವಾಗಿ ಪ್ರಸ್ತಾಪ ಸಂಭವ

09:44 AM Dec 19, 2019 | Team Udayavani |

ಹೊಸದಿಲ್ಲಿ: ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಬುಧವಾರದಿಂದ ಶನಿವಾರದವರೆಗೆ (ಡಿ.18 – ಡಿ.21) ಮುಸ್ಲಿಂ ರಾಷ್ಟ್ರಗಳ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ಆ.5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸ್ಥಾನಮಾನ ಹಿಂಪಡೆದ ಬಳಿಕದ ಸ್ಥಿತಿಯ ಬಗ್ಗೆ ಪ್ರಧಾನವಾಗಿ ಚರ್ಚೆ ನಡೆಯುವ ಸಾಧ್ಯತೆಗಳು ಇವೆ. ಸೌದಿ ಅರೇಬಿಯಾ, ಈಜಿಪ್ಟ್, ಮೊರೊಕ್ಕೋ, ಪಾಕಿಸ್ಥಾನ, ಟರ್ಕಿ, ಕತಾರ್‌, ಇಂಡೋನೇಷ್ಯಾ ಪ್ರಧಾನವಾಗಿ ಭಾಗವಹಿಸುವ ರಾಷ್ಟ್ರಗಳಾಗಿವೆ.

Advertisement

ಇದೇ ಸಂದರ್ಭ ಪಾಕಿಸ್ಥಾನ ಕೂಡ ಭಾರತದ ವಿರುದ್ಧ ಸಲ್ಲದ ರೀತಿಯಲ್ಲಿ ಅಪಪ್ರಚಾರ ನಡೆಸಲು ಸಿಗುವ ಅವಕಾಶ ಬಳಸಿಕೊಳ್ಳಲಿದೆ. ಅದಕ್ಕಾಗಿ ಟರ್ಕಿಯ ಬೆಂಬಲ ಪಡೆದುಕೊಳ್ಳಲು ಮುಂದಾಗಿದೆ. ಏಕೆಂದರೆ ಕಾಶ್ಮೀರ ವಿಚಾರದಲ್ಲಿ ಭಾರತ ಸರಕಾರ ಕೈಗೊಂಡಿರುವ ನಿರ್ಣಯಕ್ಕೆ ಸೌದಿ ಅರೇಬಿಯಾ ಬೆಂಬಲ ನೀಡಿರುವುದು ಇಮ್ರಾನ್‌ ಖಾನ್‌ಗೆ ಸವಾಲಿನ ಅಂಶವಾಗಿದೆ. ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಈ ಸಮ್ಮೇಳನದ ಬಗ್ಗೆ ಅಂತಿಮ ನಿರ್ಧಾರಿಸಲಾಗಿತ್ತು.

ಕಾಶ್ಮೀರ ವಿಚಾರವನ್ನು ಪಾಕಿಸ್ಥಾನದ ನಿಯೋಗ ಸಮ್ಮೇಳನದಲ್ಲಿ ಪ್ರಧಾನವಾಗಿ ಚರ್ಚೆಗೆ ತರಲು ಯತ್ನಿಸಿದರೂ ಅದಕ್ಕೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ ಬೆಂಬಲ ನೀಡುವ ಸಾಧ್ಯತೆ ಕಡಿಮೆ. ಹಿಂದಿನ ಸಂದರ್ಭಗಳಲ್ಲಿಯೂ ಕೂಡ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಕಾಶ್ಮೀರ ವಿಚಾರವಾಗಿ ನಿಲುವು ಅಂಗೀಕರಿಸುವುದಕ್ಕೆ ವಿರೋಧವಾಗಿದೆ.

ಇನ್ನೊಂದೆಡೆ ಮುಸ್ಲಿಂ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾದ ಪಾರಮ್ಯ ಮುರಿಯುವ ನಿಟ್ಟಿನಲ್ಲಿ ಮಲೇಷ್ಯಾ ಪ್ರಧಾನಿ ಡಾ| ಮಹಾತಿರ್‌ ಮೊಹಮ್ಮದ್‌ ಈ ಸಮ್ಮೇಳನ ಆಯೋಜಿಸಿದ್ದಾರೆ. ಅದಕ್ಕಾಗಿ ಟರ್ಕಿಯ ಬೆಂಬವವನ್ನು ಈಗಾಗಲೇ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next