ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ಥಾನದ ನಡುವಿನ ಕಾಶ್ಮೀರ ವಿವಾದವನ್ನು ರಾಜತಾಂತ್ರಿಕವಾಗಿ ಬಗೆಹರಿಸಲು ಸಾಧ್ಯವಿಲ್ಲ. ಅಣಕು ಯುದ್ದ ಅಥವಾ ನೇರ ಯುದ್ದ ಮಾತ್ರ ಇದಕ್ಕೆ ಪರಿಹಾರ ಎಂದು ಪಾಕಿಸ್ಥಾನದ ರಾಯಭಾರಿ ಜಾಫರ್ ಹಿಲಾಲಿ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದನ್ನು ವಿರೋಧಿಸಿದ್ದ ಪಾಕ್ ಗೆ ವಿಶ್ವಮಟ್ಟದಲ್ಲಿ ಅವಮಾನವಾದ ನಂತರ ಈ ಹೇಳಿಕೆ ಬಂದಿದೆ.
ಈ ಹಿಂದೆ ನೈಜೀರಿಯಾ, ಯೆಮೆನ್, ಇಟಲಿ ದೇಶಗಳಲ್ಲಿ ಪಾಕಿಸ್ಥಾನದ ರಾಯಭಾರಿಯಾಗಿ ಕೆಲಸ ಮಾಡಿದ್ದ ಜಾಫರ್ ಹಿಲಾಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಅರ್ಟಿಕಲ್ 370 ಮತ್ತು 35ಎ ಯನ್ನು ರದ್ದುಗೊಳಿಸದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೇ ನರೇಂದ್ರ ಮೋದಿಗೆ ಒತ್ತಡ ಹಾಕಿದರೂ ಕೂಡಾ ಮೋದಿ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಹಾಗೆ ಮಾಡುವುದಿಲ್ಲ ಎಂದು ಪಾಕ್ ಅಧಿಕಾರಿ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ನಾವು ರಾಜತಾಂತ್ರಿಕ ನಡೆಗಳಿಂದ ಬಗೆಹರಿಸುವುದು ಸಾಧ್ಯವಿಲ್ಲ. ಭಾರತದ ಈ ನಡೆ ಸ್ವೀಕಾರಾರ್ಹವಲ್ಲದ ಕಾರಣ ನಾವು ಬೇರೆ ಏನಾದರೂ ಮಾಡಬೇಕಿದೆ. ಅಣಕು ಯುದ್ದ ಅಥವಾ ನೇರ ಯುದ್ಧವೇ ಇದಕ್ಕೆ ಪರಿಹಾರ ಎಂದು ಜಾಫರ್ ಹಿಲಾಲಿ ಹೇಳಿದ್ದಾರೆ.